ಚುನಾವಣಾ ಗುರುತು ಚೀಟಿಯಿಂದ ಹೆಸರು ಅಳಿಸಿದ ಆರೋಪ: ಆಕ್ಷೇಪಣೆಗೆ ನಿಗದಿತ ಸ್ಥಳಗಳಲ್ಲಿ ವಾರದವರೆಗೆ ಅಧಿಕಾರಿಗಳು ಲಭ್ಯ

ಶಿವಾಜಿನಗರ, ರಾಜರಾಜೇಶ್ವರಿ ನಗರ ಮತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರನ್ನು ಅಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಆಕ್ಷೇಪಣೆಗಳನ್ನು ಸ್ವೀಕರಿಸಲು, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ಈ ಪ್ರದೇಶಗಳಲ್ಲಿ ನಿಗದಿತ ಸ್ಥಳವನ್ನು ಏರ್ಪಡಿಸಿದ್ದು, ಅಲ್ಲಿ ಕೆಲಸದ ಸಮಯದಲ್ಲಿ ಏಳು ದಿನಗಳವರೆಗೆ ಅಧಿಕಾರಿ ಲಭ್ಯವಿರುತ್ತಾರೆ.ಮತದಾರರು ತಮ್ಮ ಚುನಾವಣಾ ಗುರುತು ಚ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಿವಾಜಿನಗರ, ರಾಜರಾಜೇಶ್ವರಿ ನಗರ ಮತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರನ್ನು ಅಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಆಕ್ಷೇಪಣೆಗಳನ್ನು ಸ್ವೀಕರಿಸಲು, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ಈ ಪ್ರದೇಶಗಳಲ್ಲಿ ನಿಗದಿತ ಸ್ಥಳವನ್ನು ಏರ್ಪಡಿಸಿದ್ದು, ಅಲ್ಲಿ ಕೆಲಸದ ಸಮಯದಲ್ಲಿ ಏಳು ದಿನಗಳವರೆಗೆ ಅಧಿಕಾರಿ ಲಭ್ಯವಿರುತ್ತಾರೆ.ಮತದಾರರು ತಮ್ಮ ಚುನಾವಣಾ ಗುರುತು ಚೀಟಿ ಬಗ್ಗೆ ಪರಿಶೀಲನೆ, ಹೆಸರನ್ನು ಸೇರಿಸುವ ಕಾರ್ಯ ನಡೆಸಬಹುದು.


ಮೂರು ಕ್ಷೇತ್ರಗಳಲ್ಲಿ ಕ್ಷೇತ್ರ ಪರಿಶೀಲನೆ ಮತ್ತು ಮನೆ-ಮನೆ ಸಮೀಕ್ಷೆಯ ನಂತರ 16,040 ಮತದಾರರನ್ನು ಗುರುತಿಸಿದ್ದಾರೆ, ಅವರಲ್ಲಿ ಕೆಲವರು ಅಸುನೀಗಿದ್ದು, ಇನ್ನು ಕೆಲವರು ಹಿಂದಿನ ವಿಳಾಸದಿಂದ ಸ್ಥಳಾಂತರಗೊಂಡವರಾಗಿದ್ದಾರೆ.

ಮೂರು ಕ್ಷೇತ್ರಗಳಲ್ಲಿನ ಹೆಸರುಗಳನ್ನು ಅಳಿಸುವ ಮೊದಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾ ಚುನಾವಣಾಧಿಕಾರಿ (DEO) ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಕರ್ನಾಟಕದ ಸಿಇಒ ಅವರ ಮಾಧ್ಯಮ ಪ್ರಕಟಣೆ ತಿಳಿಸಿದೆ. ಈ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ನ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತ ಚುನಾವಣಾ ಆಯೋಗ ಸಿಇಒ ಕಚೇರಿಗೆ ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com