
ಮೋದಿ ರೋಡ್ ಶೋ ವೇಳೆಯಲ್ಲಿ ಭದ್ರತಾ ಲೋಪ
ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆಯಲ್ಲಿ ಭದ್ರತಾ ಲೋಪ ಉಂಟಾಗಿದೆ.
ಪ್ರಧಾನಿ ಮೋದಿ ಹೆಲಿಪ್ಯಾಡ್ ನಿಂದ ಮಹಾಸಂಗಮ ಸಮಾವೇಶದ ಕಾರ್ಯಕ್ರಮಕ್ಕೆ ರೋಡ್ ಶೋ ಮೂಲಕ ತೆರಳುತ್ತಿದ್ದಾಗ ಯುವಕನೊಬ್ಬ ಪ್ರಧಾನಿ ಬೆಂಗಾವಲು ವಾಹನದತ್ತ ತೆರಳಲು ಪ್ರಯತ್ನಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
#WATCH | Karnataka: Security breach during PM Modi's roadshow in Davanagere, earlier today, when a man tried to run towards his convoy. He was later detained by police.
(Visuals confirmed by police) pic.twitter.com/nibVxzgekz— ANI (@ANI) March 25, 2023
ಇದನ್ನೂ ಓದಿ: ದಾವಣಗೆರೆಯಲ್ಲಿ ಮೋದಿ ಘರ್ಜನೆ: ಖರ್ಗೆ, ಸಿದ್ದರಾಮಯ್ಯ, ಕಾಂಗ್ರೆಸ್ ಗ್ಯಾರಂಟಿ ಗುರಿಯಾಗಿಸಿಕೊಂಡು ವಾಗ್ದಾಳಿ
ಸಮಾವೇಶದ ಮೂರು ಕಡೆಗಳಲ್ಲಿ ಭದ್ರತಾ ಲೋಪವಾಗಿದೆ ಪ್ರಧಾನಿ ಮೋದಿ ಭಾಷಣ ವೇಳೆ ಬಿಎಸ್ ಯಡಿಯೂರಪ್ಪ ಹೆಸರು ಪ್ರಸ್ತಾಪಿಸಿದಾಗ ಜನರು ಜೋರಾಗಿ ಕೂಗಿದ್ದಾರೆ. ಅಲ್ಲದೇ ಬಿಎಸ್ ವೈ ಭಾಷಣ ಮಾಡುವಾಗಲೂ ಆದೇ ರೀತಿಯಲ್ಲಿ ಕೂಗಿದ್ದಾರೆ. ಬ್ಯಾರಿಕೇಡ್ ಮುರಿದು ರಸ್ತೆ ಕಡೆಗೆ ಜನರ ಗುಂಪೊಂದು ತೆರಳಿರುವುದಾಗಿ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.