ಭಾರತೀಯ ಭಾಷೆಗಳನ್ನು ಅಭಿವೃದ್ಧಿಪಡಿಸಲು ರಾಜಕೀಯ ಪಕ್ಷಗಳು ಸರಿಯಾದ ಬೆಂಬಲ ನೀಡುತ್ತಿಲ್ಲ: ಪ್ರಧಾನಿ ನರೇಂದ್ರ ಮೋದಿ
ಭಾಷೆಯ ವಿಚಾರದಲ್ಲಿ ಆಟವಾಡುತ್ತಿರುವ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಳ್ಳಿಗಳ ವಿದ್ಯಾರ್ಥಿಗಳು, ಬಡವರು ಮತ್ತು ಹಿಂದುಳಿದ ವರ್ಗದ ಕುಟುಂಬಗಳ ವಿದ್ಯಾರ್ಥಿಗಳು ವೈದ್ಯರಾಗುವುದನ್ನು ರಾಜಕೀಯ ಪಕ್ಷಗಳು ಬಯಸುವುದಿಲ್ಲ, ಅವರ ಜೀವನ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಆರೋಪಿಸಿದರು.
Published: 26th March 2023 09:34 AM | Last Updated: 04th April 2023 11:06 AM | A+A A-

ಪ್ರಧಾನಿ ನರೇಂದ್ರ ಮೋದಿ
ಚಿಕ್ಕಬಳ್ಳಾಪುರ: ಭಾಷೆಯ ವಿಚಾರದಲ್ಲಿ ಆಟವಾಡುತ್ತಿರುವ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಳ್ಳಿಗಳ ವಿದ್ಯಾರ್ಥಿಗಳು, ಬಡವರು ಮತ್ತು ಹಿಂದುಳಿದ ವರ್ಗದ ಕುಟುಂಬಗಳ ವಿದ್ಯಾರ್ಥಿಗಳು ವೈದ್ಯರಾಗುವುದನ್ನು ರಾಜಕೀಯ ಪಕ್ಷಗಳು ಬಯಸುವುದಿಲ್ಲ, ಅವರ ಜೀವನ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಆರೋಪಿಸಿದರು.
ಹಳ್ಳಿಗಳ ಯುವಕರು ಮತ್ತು ಬಡ ಕುಟುಂಬದ ಯುವಕರು ವೈದ್ಯಕೀಯ ವೃತ್ತಿಗೆ ಸೇರಲು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸಿದ ಪ್ರಧಾನ ಮಂತ್ರಿಗಳು, ಬಿಜೆಪಿ ಸರ್ಕಾರವು ಈ ವಿಷಯಗಳನ್ನು ಅರ್ಥಮಾಡಿಕೊಂಡು ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶವನ್ನು ಒದಗಿಸಿದೆ ಎಂದು ಹೇಳಿದರು.
ವೈದ್ಯಕೀಯ ವೃತ್ತಿಯಲ್ಲಿ ಇರುವ ಒಂದು ಸವಾಲನ್ನು ನಾನು ನಿಮ್ಮ ಮುಂದೆ ಪ್ರಸ್ತಾಪಿಸಲು ಬಯಸುತ್ತೇನೆ. ಈ ಸವಾಲಿನಿಂದಾಗಿ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಹಳ್ಳಿಗಳ ಯುವಕರು ವೈದ್ಯರಾಗುವುದು ಕಷ್ಟಕರವಾಗುತ್ತಿದೆ ಎಂದು ಮೋದಿ ಹೇಳಿದರು.
ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (SMSIMSR) ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಪಕ್ಷಗಳು ತಮ್ಮ ರಾಜಕೀಯ ಸ್ವಾರ್ಥ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಭಾಷೆಗಳ ಮೇಲೆ “ಆಟವಾಡಿವೆ”; ಆದರೆ ಅವರು ನಿಜವಾದ ಅರ್ಥದಲ್ಲಿ ಭಾಷೆಗಳನ್ನು ಬೆಂಬಲಿಸಲು ಬೇಕಾದ ಪ್ರಯತ್ನವನ್ನು ಮಾಡಲಿಲ್ಲ.
ಕನ್ನಡವು ಸಮೃದ್ಧ ಭಾಷೆಯಾಗಿದೆ, ಇದು ದೇಶದ ಹೆಮ್ಮೆಯನ್ನು ಹೆಚ್ಚಿಸುವ ಭಾಷೆಯಾಗಿದೆ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿಯೂ ಕಲಿಸುವತ್ತ ಹಿಂದಿನ ಸರ್ಕಾರಗಳು ಕ್ರಮಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.
ಈ ರಾಜಕೀಯ ಪಕ್ಷಗಳು ಹಳ್ಳಿಗಳ, ಬಡ ಮತ್ತು ಹಿಂದುಳಿದ ವರ್ಗದ ಕುಟುಂಬಗಳ ಮಕ್ಕಳು ವೈದ್ಯರು ಅಥವಾ ಎಂಜಿನಿಯರ್ ಆಗಲು ಬಯಸಲಿಲ್ಲ, ಆದರೆ ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ನಮ್ಮ ಸರ್ಕಾರವು ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣದ ಆಯ್ಕೆಯನ್ನು ನೀಡಿದೆ ಎಂದರು.
ಬಡವರನ್ನು ಕೇವಲ ವೋಟ್ ಬ್ಯಾಂಕ್ ಆಗಿ ನೋಡುವ ಇಂತಹ ರಾಜಕೀಯ ಪಕ್ಷಗಳು ದೇಶದಲ್ಲಿ ಹಿಂದಿನಿಂದಲೂ ಇತ್ತು ಎಂದ ಪ್ರಧಾನಿ, ''ಬಿಜೆಪಿ ಸರಕಾರಕ್ಕೆ ಬಡವರ ಸೇವೆಯೇ ಪರಮೋಚ್ಚ ಕರ್ತವ್ಯ. ನಾವು ಆದ್ಯತೆ ನೀಡಿದ್ದೇವೆ. ಬಡ ಮತ್ತು ಮಧ್ಯಮ ವರ್ಗದವರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ನಾವು ಅಗ್ಗದ ಔಷಧಿಗಳನ್ನು ಒದಗಿಸಲು 'ಜನೌಷದಿ ಕೇಂದ್ರ'ಗಳನ್ನು ತೆರೆದಿದ್ದೇವೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಎಸ್‌ಎಂಎಸ್‌ಐಎಂಎಸ್‌ಆರ್ ಅನ್ನು ಪ್ರಧಾನಮಂತ್ರಿ ಶನಿವಾರ ಉದ್ಘಾಟಿಸಿದರು, ಇದು ಸಂಪೂರ್ಣ ಉಚಿತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಾಗಿದೆ.