ಕರ್ನಾಟಕ ಚುನಾವಣೆ 2023: ಸ್ವಗ್ರಾಮದಲ್ಲಿ ಮಾಜಿ ಸಿಎಂ ಮತದಾನ; ಸಿದ್ದರಾಮಯ್ಯ ಬಲಗೈ ಬೆರಳಿಗೆ ಶಾಯಿ!

ವರುಣಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ ಅವರು ಮತ ಚಲಾಯಿಸಿದ್ದು, ಈ ವೇಳೆ ಚುನಾವಣಾ ಸಿಬ್ಬಂದಿ ಅವರ  ಬಲಗೈ ಬೆರಳಿಗೆ ಶಾಯಿ ಹಾಕಿದ್ದಾರೆ. 
ಸಿದ್ದರಾಮಯ್ಯ ಬಲಗೈ ಬೆರಳಿಗೆ ಶಾಯಿ
ಸಿದ್ದರಾಮಯ್ಯ ಬಲಗೈ ಬೆರಳಿಗೆ ಶಾಯಿ

ಮೈಸೂರು: ವರುಣಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ ಅವರು ಮತ ಚಲಾಯಿಸಿದ್ದು, ಈ ವೇಳೆ ಚುನಾವಣಾ ಸಿಬ್ಬಂದಿ ಅವರ  ಬಲಗೈ ಬೆರಳಿಗೆ ಶಾಯಿ ಹಾಕಿದ್ದಾರೆ. 

ಹೌದು.. ಇಂದು ಮಾಜಿ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಮತದಾನ ಮಾಡಿದ್ದು, ಈ ವೇಳೆ ಅಳಿಸಲಾಗದ ಶಾಯಿಯನ್ನು ಅವರ ಬಲಗೈ ಬೆರಳಿಗೆ ಶಾಯಿ ಹಾಕಿದ್ದಾರೆ.

ಆದರೆ ಸಿದ್ದರಾಮಯ್ಯ ಜೊತೆಯಲ್ಲಿ ಬಂದಿದ್ದ ಅವರ ಪುತ್ರ ಡಾ. ಯತೀಂದ್ರ ಮತ್ತು ಸೊಸೆ ಸ್ಮಿತ ರಾಕೇಶ್ ಅವರಿಗೆ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗಿದ್ದು, ಸಿದ್ದರಾಮಯ್ಯ ಅವರಿಗೆ ಬಲಗೈ ಬೆರಳಿಗೆ ಶಾಯಿ ಹಾಕಲಾಗಿದೆ.

ಮೈಸೂರು ನಗರದಿಂದ ಬೆಳಿಗ್ಗೆ 10 ಗಂಟೆಗೆ ಸಿದ್ದರಾಮನಹುಂಡಿಗೆ ಆಗಮಿಸಿದ್ದ ಸಿದ್ದರಾಮಯ್ಯ ತಮ್ಮ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ಸೊಸೆ ಸ್ಮಿತಾ ರಾಕೇಶ್ ಜತೆಗೂಡಿ ಮತದಾನ ಮಾಡಿದರು. ಇದಕ್ಕೂ ಮೊದಲು ಗುರುತಿನ ಚೀಟಿ ಪರಿಶೀಲಿಸಿ, ಶಾಯಿ ಹಾಕುವಾಗ ಸಿಬ್ಬಂದಿ ಡಾ. ಯತೀಂದ್ರ ಮತ್ತು ಸ್ಮಿತ ರಾಕೇಶ್ ಅವರಿಗೆ ಎಡಗೈ ಬೆರಳಿಗೆ ಶಾಯಿ ಹಾಕಿದರು. ಆದರೆ ಸಿದ್ದರಾಮಯ್ಯ ಅವರಿಗೆ ಬಲಗೈ ಬೆರಳಿಗೆ ಶಾಯಿ ಹಾಕಿದ್ದಾರೆ.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಶಿಷ್ಠಾಚಾರದಂತೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಬೇಕು.. ಒಂದು ವೇಳೆ ಬೇರಾವುದೇ ಚುನಾವಣೆಗಳಿಂದ ಮತದಾರ ಮತದಾನ ಮಾಡಿದಾಗ ಶಾಯಿ ಹಾಕಿದ್ದರೆ ಆಗ ಮಾತ್ರ ಬೇರೆ ಬೆರಳಿಗೆ ಶಾಯಿ ಹಾಕಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com