
ನಿರ್ಮಲಾ ಸೀತಾರಾಮನ್.
ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯು ಮೂರ್ಖತನಕ್ಕೆ ನಿದರ್ಶನವಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ತಮ್ಮ ಮತಹಕ್ಕು ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ಬಜರಂಗದಳ ನಿಷೇಧ ಮಾಡುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ತೀವ್ರವಾಗಿ ಕಿಡಿಕಾರಿದರು.
#WATCH | On Bajrang Dal-Bajrang Bali row during #KarnatakaElections, FM Sitharaman says, "We always read Hanuman Chalisa and offer prayers to Bajrang Bali, but they (Congress) do this during the election...They mentioned that in their manifesto, this is an example of stupidity." pic.twitter.com/J4Wxf4xSua
— ANI (@ANI) May 10, 2023
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ನ ಯುವ ಘಟಕವಾದ ಬಜರಂಗದಳದ ಮೇಲೆ ನಿಷೇಧ ಹೇರುವ ಭರವಸೆ ನೀಡಿರುವುದು ಮೂರ್ಖತನಕ್ಕೆ ನಿದರ್ಶನವಾಗಿದೆ. ನಾವು ಯಾವಾಗಲೂ ಬಜರಂಗ ಬಲಿಯನ್ನು ಗೌರವಿಸುತ್ತೇವೆ ಮತ್ತು ಹನುಮಾನ್ ಚಾಲೀಸಾವನ್ನು ಓದುತ್ತೇವೆ. ಆದರೆ, ಕಾಂಗ್ರೆಸ್ಸಿಗೆ ಇದು ಚುನಾವಣಾ ವಿಷಯವಾಗಿದೆ. ಕರ್ನಾಟಕವು ಹನುಮಂತನ ಜನ್ಮಸ್ಥಳವಾಗಿದೆ. ಕಾಂಗ್ರೆಸ್ ನಾಯಕರು ಅಲ್ಲಿ, ಇಲ್ಲಿ ಹೇಳಿಕೆ ನೀಡುತ್ತಿಲ್ಲ, ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವುದಾಗಿ ಹೇಳುತ್ತಿದೆ. ಇದು ಮೂರ್ಖತನಕ್ಕೆ ನಿದರ್ಶನವಾಗಿದೆ ಎಂದು ಹೇಳಿದ್ದಾರೆ.