ಕರ್ನಾಟಕ ಚುನಾವಣೆ 2023: ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಉತ್ಸಾಹ, ವಿಭಿನ್ನ ವಾತಾವರಣಕ್ಕೆ ಸಾಕ್ಷಿಯಾದ ಮತದಾನ

ಕರ್ನಾಟಕ ಚುನಾವಣೆ 2023ರ ಮತದಾನ ಪ್ರಕ್ರಿಯೆ ಹಲವು ವಿಭಿನ್ನ ವಾತಾವರಣಕ್ಕೆ ಸಾಕ್ಷಿಯಾಗಿದ್ದು, ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಉತ್ಸಾಹ ಇಮ್ಮಡಿಯಾಗಿದ್ದರೆ, ಮತದಾನ ಬಹಿಷ್ಕಾರದಂತಹ ಘಟನೆ ಕೂಡ ವರದಿಯಾಗಿತ್ತು.
ಮತದಾನ
ಮತದಾನ

ಬೆಂಗಳೂರು: ಕರ್ನಾಟಕ ಚುನಾವಣೆ 2023ರ ಮತದಾನ ಪ್ರಕ್ರಿಯೆ ಹಲವು ವಿಭಿನ್ನ ವಾತಾವರಣಕ್ಕೆ ಸಾಕ್ಷಿಯಾಗಿದ್ದು, ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಉತ್ಸಾಹ ಇಮ್ಮಡಿಯಾಗಿದ್ದರೆ, ಮತದಾನ ಬಹಿಷ್ಕಾರದಂತಹ ಘಟನೆ ಕೂಡ ವರದಿಯಾಗಿತ್ತು.

ಹೌದು.. ಮೇ 10ರಂದು ನಡೆದಿದ್ದ ಕರ್ನಾಟಕ ಚುನಾವಣೆ 2023ರ ಮತದಾನ ಪ್ರಕ್ರಿಯೆ ಹಲವು ನಾಟಕೀಯ ಬೆಳವಣಿಗೆಗಳ ವೇದಿಕೆಯಾಗಿತ್ತು. ಮತದಾರರು ಮತ್ತು ವಿವಿಧ ಪಕ್ಷದ ಕಾರ್ಯಕರ್ತರ ವರ್ತನೆ ಮತ್ತು ವಿಧಾನವು ಪ್ರದೇಶಗಳನ್ನು ಆಧರಿಸಿ ವಿಭಿನ್ನವಾಗಿತ್ತು. 

ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ಮತದಾರರು ಉತ್ಸಾಹದಿಂದ ಮತದಾನ ಮಾಡಿದರು. ಗ್ರಾಮೀಣ ಪ್ರದೇಶದ ಮತದಾರರಿಗೆ ವಯಸ್ಸು ಮತ್ತು ಹವಾಮಾನ ಅಡೆತಡೆಗಳು ಕಾಳಜಿಯ ವಿಷಯವಾಗಿರಲಿಲ್ಲ. ಮತದಾನ ಪ್ರಕ್ರಿಯೆಯು ಯಾವುದೇ ಹಬ್ಬಕ್ಕಿಂತ ಕಡಿಮೆಯಿರಲಿಲ್ಲ.. ಜನರು ಹವಾಮಾನ, ವಯಸ್ಸು, ಆರೋಗ್ಯ ಇದಾವುದನ್ನೂ ಲೆಕ್ಕಿಸದೇ ಮತಗಟ್ಟೆಗಳತ್ತ ಧಾವಿಸಿ ಗಂಟೆಗಟ್ಟಲೆ ಕಾದು ಮತದಾನ ಮಾಡಿದ್ದಾರೆ. ಗ್ರಾಮಾಂತರ ಪ್ರದೇಶಗಳಾದ ಮಾಗಡಿ ಗ್ರಾಮ, ತಾವರೆಕೆರೆ, ಸಾವನದುರ್ಗ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತದಾನ ಆರಂಭವಾದಾಗಿನಿಂದ ಸಂಜೆಯವರೆಗೂ ಉತ್ತಮ ಮತದಾನವಾಗಿತ್ತು.

ಅಂತೆಯೇ ಇದಕ್ಕೆ ವ್ಯತಿರಿಕ್ತ ಎಂಬಂತೆ ಒಂದರೆಡು ಭಾಗದಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದಂತಹ ಘಟನೆಗಳೂ ಕೂಡ ವರದಿಯಾಗಿವೆ.

ಇನ್ನು ನಗರ ಪ್ರದೇಶಗಳಲ್ಲಿನ ಬೂತ್‌ಗಳಲ್ಲಿ ದೊಡ್ಡ ವ್ಯತಿರಿಕ್ತತೆ ಕಂಡುಬಂದಿದ್ದು, ಅಲ್ಲಿ ಜನಸಂದಣಿ ಕಡಿಮೆ ಇತ್ತು. ಮತದಾರರು ಹೆಚ್ಚು ಶಾಂತ ಮತ್ತು ಸಾಂದರ್ಭಿಕರಾಗಿದ್ದರು. ಕುತೂಹಲಕಾರಿ ಸಂಗತಿಯೆಂದರೆ, ನಗರ ಪ್ರದೇಶಗಳಲ್ಲಿ ಅತಿ ಹೆಚ್ಚು ಮತ್ತು ಜೋರಾದ ಪಕ್ಷದ ಕಾರ್ಯಕರ್ತರ ನಿರಂತರ ಹಸ್ತಕ್ಷೇಪದಂತಹ ಘಟನೆಗಳು ಗ್ರಾಮೀಣ ಪ್ರದೇಶಗಳಲ್ಲಿ, ಮತಗಟ್ಟೆಗಳ ಬಳಿ ಗೋಚರಿಸಲಿಲ್ಲ. ಪುರುಷರು ಮತ್ತು ಮಹಿಳೆಯರು ಮರಗಳ ನೆರಳಿನಲ್ಲಿ ಕುಳಿತು ಮತದಾನ ಮಾಡಲು ತಾಳ್ಮೆಯಿಂದ ಕಾಯುತ್ತಿದ್ದರು. ಮತದಾನಕ್ಕೆ ಸಮಯ ಹಿಡಿಯುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲವರು ತಮ್ಮ ತಮ್ಮ ಆಹಾರವನ್ನೂ ಮೊದಲೇ ಪ್ಯಾಕ್ ಮಾಡಿಕೊಂಡು ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು. 

ಆದರೆ ಮತದಾನ ಪ್ರಮಾಣ ಕಡಿಮೆ ಇರುವ ನಗರ ಪ್ರದೇಶಗಳಲ್ಲಿ ಕೊನೆಯ ಕ್ಷಣದಲ್ಲೂ ಪಕ್ಷದ ಕಾರ್ಯಕರ್ತರ ಪ್ರಚಾರ ಜೋರಾಗಿತ್ತು. ಬೂತ್‌ಗಳಿಗೆ ಬರುವ ಮತದಾರರ ಮೇಲೆ ಪ್ರಭಾವ ಬೀರಲು ಪಕ್ಷದ ಕಾರ್ಯಕರ್ತರು ಎಲ್ಲ ರೀತಿಯ ಕ್ರಮಗಳನ್ನು ಬಳಸಿಕೊಂಡರು. ಯಶವಂತಪುರದಲ್ಲಿ ಕೆಲವರು ವಿವಿಪ್ಯಾಟ್ ಕಟೌಟ್‌ಗಳನ್ನು ಹಿಡಿದು, ಒತ್ತಬೇಕಾದ ಚಿಹ್ನೆಗಳನ್ನು ತೋರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಇತ್ತ ದಾಸರಹಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರು ಮತದಾರರಿಗೆ ಮನವರಿಕೆ ಮಾಡಿಕೊಟ್ಟು, ಕೈಮುಗಿದು ಅಭ್ಯರ್ಥಿಯ ಸಂಖ್ಯೆಯನ್ನು ನೆನಪಿಸುತ್ತಾ ಪಾದಯಾತ್ರೆ ನಡೆಸಿದರು. 

ಇಂತಹ ಘಟನೆಗಳ ಹೊರತಾಗಿಯೂ ನಗರ ಪ್ರದೇಶಗಳಲ್ಲಿ ಬಲವಾದ ವ್ಯತಿರಿಕ್ತತೆಯು ಕಂಡುಬಂದಿದೆ.. ಅಲ್ಲಿ ಅನೇಕ ಮತಗಟ್ಟೆಗಳು ದಿನವಿಡೀ ಮತಾದರರಿಲ್ಲದೇ ನೀರಸ ಪ್ರತಿಕ್ರಿಯೆ ಪಡೆದ ಕ್ಷಣಗಳೂ ವರದಿಯಾಗಿವೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಮತದಾರರು ಮತದಾನದ ಪ್ರಮಾಣವನ್ನು ಹೆಚ್ಚಿಸಲು ಅಷ್ಟೇನೂ ಆಸಕ್ತಿ ತೋರಿದಂತೆ ಕಾಣಲಿಲ್ಲ. ಬೂತ್‌ಗಳಲ್ಲಿದ್ದ ಪೊಲೀಸ್, ಅರೆಸೇನಾಪಡೆ ಮತ್ತು ಚುನಾವಣಾಧಿಕಾರಿಗಳು ಇದೇ ರೀತಿಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. 

ಈ ಹಿಂದೆ ಕೆಂಗೇರಿಯಲ್ಲಿ ನಿಯೋಜನೆಗೊಂಡಿದ್ದ ತಾವರೆಕೆರೆ ಮತಗಟ್ಟೆ ಅಧಿಕಾರಿಯೊಬ್ಬರು, ''ನಾನು ಕೆಲಸ ಮಾಡಿದ ಇತರ ಸ್ಥಳಗಳಿಗೆ ಹೋಲಿಸಿದರೆ ಇಲ್ಲಿ ಮತದಾರರ ಶೇಕಡಾವಾರು ಉತ್ತಮವಾಗಿದೆ. ಮಧ್ಯಾಹ್ನದವರೆಗೆ ಮತದಾರರ ಸಂಖ್ಯೆ ಆಶಾದಾಯಕವಾಗಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com