ಉಡುಪಿ: ಆಟೋ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಇಬ್ಬರು ಸಾವು

ಉಡುಪಿಯಲ್ಲಿ ಏಕಾಏಕಿ ಆರಂಭವಾದ ಬಿರುಗಾಳಿ, ಸಿಡಿಲು, ಮಳೆಯಿಂದಾಗಿ ಬೃಹತ್ ಗಾತ್ರದ ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. 
ಯೋಧ ಸಾವಿನ(ಸಾಂದರ್ಭಿಕ ಚಿತ್ರ)
ಯೋಧ ಸಾವಿನ(ಸಾಂದರ್ಭಿಕ ಚಿತ್ರ)

ಉಡುಪಿ: ಉಡುಪಿಯಲ್ಲಿ ಏಕಾಏಕಿ ಆರಂಭವಾದ ಬಿರುಗಾಳಿ, ಸಿಡಿಲು, ಮಳೆಯಿಂದಾಗಿ ಬೃಹತ್ ಗಾತ್ರದ ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. 

ಉಡುಪಿ ಜಿಲ್ಲೆ ಕಾಪು ತಾಲೂಕಿನ‌ ಮಜೂರು ಮಸೀದಿ ಬಳಿ ಶಿರ್ವದಿಂದ ಕಾಪು ಕಡೆ ಸಂಚರಿಸುತ್ತಿರುವಾಗ ಘಟನೆ ಸಂಭವಿಸಿದ್ದು ಚಲಿಸುತ್ತಿದ್ದ ರಿಕ್ಷಾದ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ರಿಕ್ಷಾದಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. 

ಪಾದೂರಿನ ಕೂರಾಲಿನ 49 ವರ್ಷದ ಪುಷ್ಪಾ ಮೃತಪಟ್ಟಿದ್ದು ಮತ್ತೊಬ್ಬ ಪುರುಷ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com