ವಿಧಾನಸಭೆ ಅಧಿವೇಶನ: ಎತ್ತಿನಗಾಡಿಯಲ್ಲಿ ಆಗಮಿಸಿ ಗಮನ ಸೆಳೆದ ನೂತನ ಶಾಸಕ- ವಿಡಿಯೋ
ಮೂರು ದಿನಗಳ ವಿಧಾನಸಭೆ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದ ನೂತನ ಶಾಸಕರು ಎತ್ತಿನ ಗಾಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿ, ನೆರೆದಿದ್ದವರ ಗಮನ ಸೆಳೆದರು.
Published: 22nd May 2023 02:01 PM | Last Updated: 22nd May 2023 02:57 PM | A+A A-

ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಾಣಿಗ.
ಬೆಂಗಳೂರು: ಮೂರು ದಿನಗಳ ವಿಧಾನಸಭೆ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದ ನೂತನ ಶಾಸಕರು ಎತ್ತಿನ ಗಾಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿ, ನೆರೆದಿದ್ದವರ ಗಮನ ಸೆಳೆದರು.
ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಾಣಿಗ ಸೇರಿದಂತೆ ಹಲವು ಶಾಸಕರು ವಿಧಾನಸೌಧದ ಕೆಂಗಲ್ ಗೇಟ್ ದ್ವಾರದ ಮುಖ್ಯ ಗೇಟ್ ಮೂಲಕ ಪಶ್ಚಿಮ ದ್ವಾರಕ್ಕೆ ಎತ್ತಿನ ಗಾಡಿಯಲ್ಲಿ ಆಗಮಿಸಿದರು.
#WATCH | Bengaluru, Karnataka: Ravi Ganiga, Congress MLA of Mandya constituency arrives at Vidhana Soudha in a bullock cart pic.twitter.com/yv3xQqaEr3
— ANI (@ANI) May 22, 2023
ಈ ಹಿಂದೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ ನಾಯಕರು ಅಧಿವೇಶನದಲ್ಲಿ ಭಾಗವಹಿಸಲು ಎತ್ತಿನ ಬಂಡಿಯಲ್ಲಿ ವಿಧಾನಸೌಧ ಪ್ರವೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ವಿಧಾನಸಭೆ ಅಧಿವೇಶನ: ವಿಧಾನಸೌಧ ಮುಂಭಾಗ ಗೋಮೂತ್ರ ಸಿಂಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು
ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿದ ನೂತನ ಶಾಸಕಿ ಭಾಗೀರತಿ ಮುರಳ್ಯ ವಿಧಾನಸೌಧ ಪ್ರವೇಶಕ್ಕೆ ಮುಂದಾದರು. ಇದೇ ವೇಳೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ನಂತರ ವಿಧಾನಸೌಧ ಪ್ರವೇಶ ಮಾಡಿದರು. ಇವರ ಜೊತೆ ಸದನಕ್ಕೆ ಆಗಮಿಸುತ್ತಿರುವ ನೂತನ ಶಾಸಕರು ಸಹ ಮೆಟ್ಟಿಲಿಗೆ ನಮಸ್ಕಾರ ಮಾಡಿ ವಿಧಾನಸೌಧ ಪ್ರವೇಶ ಮಾಡಿದರು.