
ಸಂಗ್ರಹ ಚಿತ್ರ
ಯಾದಗಿರಿ: ಸಾಲಬಾಧೆ ತಾಳಲಾರದೆ 65 ವರ್ಷದ ರೈತನೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಉಡುವೆಪುರ ಗ್ರಾಮದಲ್ಲಿ ನಡೆದಿದೆ.
ಯಲ್ಲಕಿ ಗೌಡ (65) ಆತ್ಮಹತ್ಯೆಗೆ ಶರಣಾದ ರೈತ. ಯಲ್ಲಕಿ ಗೌಡ ಪಿರಿಯಾಪಟ್ಟಣದ ಬ್ಯಾಂಕ್‌ನಲ್ಲಿ ರೂ.15 ಲಕ್ಷ ಸಾಲ ಪಡೆದಿದ್ದಲ್ಲದೆ, ಸಹ ಗ್ರಾಮಸ್ಥರಿಂದಲೂ ರೂ.6 ಲಕ್ಷ ಕೈ ಸಾಲ ಮಾಡಿಕೊಂಡಿದ್ದರು.
ಇದನ್ನೂ ಓದಿ: ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ಆತ್ಮಹತ್ಯೆ
ಪಡೆದ ಸಾಲದಿಂದ ಯಲ್ಲಿಕಿ ಗೌಡ ತಮ್ಮ ಮೂರು ಎಕರೆ ಜಮೀನಿನಲ್ಲಿ ತಂಬಾಕು, ಶುಂಠಿ ಬೆಳೆದಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಬಾರಿ ಬೆಳೆ ನಷ್ಟ ಎದುರಾಗಿದ್ದು, ಸಾಲದ ಹೊರೆ ತಾಳಲಾರದೆ, ನಿನ್ನೆ ತಮ್ಮ ಮನೆಯಲ್ಲೇ ನೇಣಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.