ತುಮಕೂರಿನಲ್ಲಿ ನಿಂತಿದ್ದ ಖಾಸಗಿ ಬಸ್ ಗೆ ಟೆಂಪೋ ಟ್ರಾವಲರ್ ಡಿಕ್ಕಿ: ಇಬ್ಬರ ದುರ್ಮರಣ
ಟೆಂಪೋ ಟ್ರಾವಲರ್ ನಿಂತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಡಿ. ಹೊಸಹಳ್ಳಿ ಬಳಿ ನಡೆದಿದೆ.
Published: 25th May 2023 03:30 PM | Last Updated: 25th May 2023 03:30 PM | A+A A-

ಪ್ರತ್ಯಕ್ಷ ದೃಶ್ಯ
ತುಮಕೂರು: ಟೆಂಪೋ ಟ್ರಾವಲರ್ ನಿಂತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಡಿ. ಹೊಸಹಳ್ಳಿ ಬಳಿ ನಡೆದಿದೆ.
ಮೃತರನ್ನು ರಾಯಚೂರು ಜಿಲ್ಲೆಯ ಸಿಂಧನೂರಿನವರಾದ 75 ವರ್ಷದ ಶಶಿಕಲಾ ಮತ್ತು 30 ವರ್ಷದ ವೀರೇಶ್ ಎಂದು ಗುರುತಿಸಲಾಗಿದೆ. ಇನ್ನು ಅಪಘಾತದಲ್ಲಿ ದಿಲೀಪ್ ಕುಮಾರ್, ಪ್ರಿಯಾ, ಪ್ರತೀಕ್ಷಾ ಮತ್ತು ಆನಂದ್ ಕುಮಾರ್ ಗಾಯಗೊಂಡಿದ್ದು ಅವರನ್ನು ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಮೊಹಮ್ಮದ್ ಸಾವು; ಪ್ರಕರಣ ಸಿಐಡಿಗೆ ವರ್ಗಾವಣೆ
ಟೆಂಪೋ ಟ್ರಾವಲರ್ ನಲ್ಲಿ ಸಿಂಧನೂರಿನಿಂದ ಮೈಸೂರಿಗೆ ಕುಟುಂಬ ಪ್ರವಾಸಕ್ಕೆ ಬಂದಿದ್ದಾಗ ಅಪಘಾತ ಸಂಭವಿಸಿದೆ. ಈ ಸಂಬಂಧ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.