ಮಡಿಕೇರಿ-ಮಂಗಳೂರು ಹೆದ್ದಾರಿ ರಸ್ತೆ ಭೂಕುಸಿತ: ಶಾಶ್ವತ ಪರಿಹಾರಕ್ಕೆ 2018ರಿಂದ ಇನ್ನೂ ಸಿಕ್ಕಿಲ್ಲ ಅನುಮೋದನೆ!

ಮಡಿಕೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ 275ರ ಶಾಶ್ವತ ಪರಿಹಾರ ಕಾಮಗಾರಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯನ್ನು(DPR) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರಕ್ಕೆ ರವಾನಿಸಿ ಸುಮಾರು ಒಂದು ವರ್ಷ ಕಳೆದರೂ, ಭೂಕುಸಿತ ಪೀಡಿತ ಮಡಿಕೇರಿ-ಮಂಗಳೂರು ಹೆದ್ದಾರಿ ಕಾಮಗಾರಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ. 
2018ರ ಮಳೆಗಾಲದಿಂದ ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಭೂಕುಸಿತಕ್ಕೆ ಗುರಿಯಾಗಿದೆ
2018ರ ಮಳೆಗಾಲದಿಂದ ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಭೂಕುಸಿತಕ್ಕೆ ಗುರಿಯಾಗಿದೆ
Updated on

ಮಡಿಕೇರಿ: ಮಡಿಕೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ 275ರ ಶಾಶ್ವತ ಪರಿಹಾರ ಕಾಮಗಾರಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯನ್ನು(DPR) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರಕ್ಕೆ ರವಾನಿಸಿ ಸುಮಾರು ಒಂದು ವರ್ಷ ಕಳೆದರೂ, ಭೂಕುಸಿತ ಪೀಡಿತ ಮಡಿಕೇರಿ-ಮಂಗಳೂರು ಹೆದ್ದಾರಿ ಕಾಮಗಾರಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ. 

2018ರ ಮಳೆಗಾಲದಿಂದ ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಭೂಕುಸಿತಕ್ಕೆ ತುತ್ತಾಗುತ್ತಿದ್ದು, ಪ್ರತಿ ಮಳೆಗಾಲದಲ್ಲಿ ಹೆದ್ದಾರಿ ಬಂದ್ ಆಗುವ ಭೀತಿ ಎದುರಾಗಿದೆ.

ಪ್ರತಿ ಮಳೆಗಾಲದಲ್ಲಿ, ಹೆದ್ದಾರಿಯಲ್ಲಿ ಮರಳಿನ ಚೀಲಗಳನ್ನು ಸುತ್ತಿಡಲಾಗುತ್ತಿದೆ. ಮಳೆ ಕಡಿಮೆಯಾದ ನಂತರ ತಾತ್ಕಾಲಿಕ ಪರಿಹಾರ ಕಾರ್ಯಗಳು ರೂಪುಗೊಳ್ಳುತ್ತವೆ.

2018 ರಲ್ಲಿ ಭೂಕುಸಿತವನ್ನು ವರದಿ ಮಾಡಿದ ಹೆದ್ದಾರಿಯಲ್ಲಿರುವ ಪ್ರದೇಶಗಳಲ್ಲಿ ಇನ್ನೂ ಪರಿಹಾರ ಕಾಮಗಾರಿ ನಡೆದಿಲ್ಲ. ಪ್ರವಾಸಿಗರ ಪ್ರಯಾಣ ಮಾರ್ಗವಾಗಿರುವ ಇದು ಅಪಾಯದಲ್ಲಿದೆ. 

ಕಳೆದ ಐದು ವರ್ಷಗಳಲ್ಲಿ, ಮಳೆ ಹಾನಿ ನಿಧಿಯಡಿ ಹಲವಾರು ತಾತ್ಕಾಲಿಕ ಪರಿಹಾರ ಕಾಮಗಾರಿಗಳ ಹೊರತಾಗಿ, ರಸ್ತೆಯ 1,700 ಮೀಟರ್‌ಗಳ ದುರ್ಬಲ ಪ್ರದೇಶಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲು, ಒಳಚರಂಡಿ ವ್ಯವಸ್ಥೆಗೆ ಮತ್ತು ಸುಧಾರಿತ ಅಳವಡಿಕೆಗಾಗಿ ಹೆದ್ದಾರಿಯನ್ನು 48 ಕೋಟಿ ರೂಪಾಯಿಯಲ್ಲಿ ನಿರ್ಮಿಸಲು ಅನುಮೋದನೆ ಸಿಕ್ಕಿದೆ. 

ಒಂದು ತಡೆಗೋಡೆ ನಿರ್ಮಾಣವಾಗುತ್ತಿದ್ದರೆ, ಇನ್ನುಳಿದ ಕಾಮಗಾರಿ ಪೂರ್ಣಗೊಂಡಿದ್ದರೂ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಹೆದ್ದಾರಿಯುದ್ದಕ್ಕೂ ಇರುವ ಚರಂಡಿಯಲ್ಲಿ ಹೂಳು ತುಂಬಿ ಕಳೆ ಬೆಳೆದು ಮಳೆಗಾಲದಲ್ಲಿ ನಿಷ್ಪ್ರಯೋಜಕವಾಗಬಹುದು. ಇದಲ್ಲದೆ, 1700 ಮೀಟರ್‌ಗಳ ಹೊರತಾಗಿ, ಶಾಶ್ವತ ಪರಿಹಾರಕ್ಕಾಗಿ ಕಾಯುತ್ತಿರುವ ಹೆದ್ದಾರಿಯಲ್ಲಿ ಹಲವಾರು ದುರ್ಬಲ ಪ್ರದೇಶಗಳಿವೆ.

98 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಡಿಪಿಆರ್ ಅನುಮೋದನೆಗಾಗಿ ಕಾಯುತ್ತಿದೆ. ಇದು ಹೆದ್ದಾರಿಯಲ್ಲಿನ ಭೂಕುಸಿತ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡಬಹುದು. ಪ್ರತಿ ಮುಂಗಾರು ಮಳೆಯಂತೆ ಈ ಬಾರಿಯೂ ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸಲು ಹೆದ್ದಾರಿಯಲ್ಲಿನ ದುರ್ಬಲ ಸ್ಥಳಗಳಲ್ಲಿ ಕಾರ್ಮಿಕರನ್ನು ನಿಯೋಜಿಸಲಾಗುವುದು ಎಂದು ಹೆದ್ದಾರಿಯ ಕಾಮಗಾರಿಯ ಉಸ್ತುವಾರಿ ಹೊತ್ತಿರುವ ಗುತ್ತಿಗೆದಾರ ಜಗದೀಶ್ ರೈ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com