ಮಡಿಕೇರಿ: ಡಿಸಿ ಕಚೇರಿ ಹಿಂಭಾಗದಲ್ಲಿ ಅಪೂರ್ಣ ತಡೆಗೋಡೆ; ಕಾಮಗಾರಿಯಲ್ಲಿ ವಿಳಂಬ

ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಅಪೂರ್ಣ ತಡೆಗೋಡೆ ಕಾಮಗಾರಿಯಲ್ಲಿ ವಿಳಂಬವಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರಾಸಕ್ತಿ ಬಯಲಾಗಿದೆ. ಇದರ ಮೇಲೆ ಈಗ ಕಪ್ಪು ಬಣ್ಣದ ಟಾರ್ಪಲಿನ್ ಹಾಕಲಾಗಿದ್ದು, ಮಳೆಗಾಲದಲ್ಲಿ ಅಪಾಯದ ಮುನ್ಸೂಚನೆ ನೀಡಿದೆ. 
ಜಿಲ್ಲಾಧಿಕಾರಿ ಕಚೇರಿ ಹಿಂಬಾಗದ ಅಪೂರ್ಣ ತಡೆಗೋಡೆ
ಜಿಲ್ಲಾಧಿಕಾರಿ ಕಚೇರಿ ಹಿಂಬಾಗದ ಅಪೂರ್ಣ ತಡೆಗೋಡೆ

ಮಡಿಕೇರಿ: ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಅಪೂರ್ಣ ತಡೆಗೋಡೆ ಕಾಮಗಾರಿಯಲ್ಲಿ ವಿಳಂಬವಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರಾಸಕ್ತಿ ಬಯಲಾಗಿದೆ. ಇದರ ಮೇಲೆ ಈಗ ಕಪ್ಪು ಬಣ್ಣದ ಟಾರ್ಪಲಿನ್ ಹಾಕಲಾಗಿದ್ದು, ಮಳೆಗಾಲದಲ್ಲಿ ಅಪಾಯದ ಮುನ್ಸೂಚನೆ ನೀಡಿದೆ. 

2022 ರ ಜುಲೈನಲ್ಲಿ  ಡಿಸಿ ಕಚೇರಿ ಹಿಂಬಾಗದಲ್ಲಿ 7.5 ಕೋಟಿ ರೂ ವೆಚ್ಚದ ತಡೆಗೋಡೆಯ ಕಳಪೆ ಗುಣಮಟ್ಟದ ಕಾಮಗಾರಿ ಬೆಳಕಿಗೆ ಬಂದಿತ್ತು. ಮಡಿಕೇರಿ-ಮಂಗಳೂರು ಹೆದ್ದಾರಿಯ ಆರಂಭದಲ್ಲಿರುವ 40 ಅಡಿ ಎತ್ತರ ಮತ್ತು 140 ಮೀಟರ್ ಅಗಲದ ತಡೆಗೋಡೆ ಕುಸಿದು ಬೀಳುವ ಹಂತದಲ್ಲಿತ್ತು. ಹಾಲಿ ಶಾಸಕ ಅಪ್ಪಚ್ಚು ರಂಜನ್ ಅವರು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿದಾಗ ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರ ಕಳಪೆ ಕಾಮಗಾರಿ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಆದರೆ, ಈ ಆಕ್ರೋಶ ವ್ಯಕ್ತವಾಗಿ ಸುಮಾರು ಒಂದು ವರ್ಷ ಕಳೆದರೂ ತಡೆಗೋಡೆ ತಡೆಗೋಡೆ ನಿರ್ಮಣದಿಂದ ಇನ್ನೂ ಮುಕ್ತಿಸಿಕ್ಕಿಲ್ಲ. ಕುಸಿದು ಬೀಳುವ ಸ್ಥಿತಿಯಲಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ಗಳನ್ನು ತೆಗೆದು ನಾಲ್ಕು ತಿಂಗಳೇ ಕಳೆದಿವೆ. ಈ ಪ್ರದೇಶ ಈಗ  ಮುಂಗಾರು ಪೂರ್ವ ಮಳೆಯ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ. ತಡೆ ಗೋಡೆ ಕೆಳಗೆ ಇರುವ ಮನೆಗಳು ಕೂಡಾ ಕುಸಿಯುವ ಭೀತಿ ಎದುರಾಗಿದೆ.  ಸದ್ಯದಲ್ಲೇ ಬರಲಿರುವ ಅಪಾಯದ ಬಗ್ಗೆ ಯಾವೊಬ್ಬ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ’ ಎಂದು ಮಡಿಕೇರಿ ನಿವಾಸಿ ಸುಬ್ಬಯ್ಯ ಬೇಸರ ವ್ಯಕ್ತಪಡಿಸಿದರು.

ಕಾಂಕ್ರೀಟ್ ಚಪ್ಪಡಿಗಳನ್ನು ತೆಗೆದುಹಾಕಿದ್ದರೂ, ಭೂಕುಸಿತ ಪ್ರದೇಶವನ್ನು ಈಗ ಟಾರ್ಪಲಿನ್ ನಿಂದ ಮುಚ್ಚಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೊದಲಿನಂತೆ ತಡೆಗೋಡೆಯನ್ನು ಮರುನಿರ್ಮಾಣ ಮಾಡಲಾಗುವುದು ಎಂದು ತಡೆಗೋಡೆಯ ಉಸ್ತುವಾರಿ ಗುತ್ತಿಗೆದಾರ ಶಿವಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com