ಹಾಸನಾಂಬೆ ದೇಗುಲಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇಗುಲ ದರ್ಶನ ಪಡೆಯುವುದೆಂದರೆ ಭಕ್ತರಿಗೆ ಭಾರೀ ಭಕ್ತಿ. ಮೊನ್ನೆ ನವೆಂಬರ್‌ 2ರಂದು ಹಾಸನಾಂಬೆ ಬಾಗಿಲು ತೆಗೆದಿದ್ದು ಭಕ್ತರಿಗೆ ದರ್ಶನಕ್ಕೆ ನವೆಂಬರ್‌ 3ರಿಂದ 14 ದಿನ ಅವಕಾಶ ಕಲ್ಪಿಸಲಾಗಿದೆ.
ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಲಿರುವ ಸಿಎಂ ಸಿದ್ದರಾಮಯ್ಯ
ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಲಿರುವ ಸಿಎಂ ಸಿದ್ದರಾಮಯ್ಯ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇಗುಲ ದರ್ಶನ ಪಡೆಯುವುದೆಂದರೆ ಭಕ್ತರಿಗೆ ಭಾರೀ ಭಕ್ತಿ. ಮೊನ್ನೆ ನವೆಂಬರ್‌ 2ರಂದು ಹಾಸನಾಂಬೆ ಬಾಗಿಲು ತೆಗೆದಿದ್ದು ಭಕ್ತರಿಗೆ ದರ್ಶನಕ್ಕೆ ನವೆಂಬರ್‌ 3ರಿಂದ 14 ದಿನ ಅವಕಾಶ ಕಲ್ಪಿಸಲಾಗಿದೆ.

ಅಂದಿನಿಂದ ಹಲವು ರಾಜಕಾರಣಿಗಳು ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. 5ನೇ ದಿನವಾದ ಇಂದು ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದಾರೆ ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಿಂದ ಹಾಸನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನ 12-30ಕ್ಕೆ ಹಾಸನಾಂಬೆ ದರ್ಶನಕ್ಕೆ ಪಡೆಯಲಿದ್ದಾರೆ. ಈ ವೇಳೆ ಸಿಎಂಗೆ ಸಚಿವರು ಮತ್ತು ಶಾಸಕರು ಸಾಥ್‌ ನೀಡಲಿದ್ದಾರೆ. ಇನ್ನು ಹಾಸನಾಂಬೆ ದರ್ಶನದ ಬಳಿಕ ಹಾಸನ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.ಈ ವೇಳೆ ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. 

ಜಾತಿ, ಧರ್ಮವಿಲ್ಲದೆ ಹಾಸನಾಂಬೆ ದರ್ಶನ: ಹಾಸನಾಂಬೆ ದೇಗುಲವನ್ನು ಜನರು ಜಾತಿ ಬೇಧವಿಲ್ಲದೆ ದರ್ಶನ ಪಡೆಯುತ್ತಾರೆ. ನಿನ್ನೆ ಮುಸಲ್ಮಾನ ಕುಟುಂಬ ಹಾಸನಾಂಬೆ ‌ದರ್ಶನ ಪಡೆದಿದ್ದು ವಿಶೇಷವಾಗಿತ್ತು. ಹಜೀರ ಎಂಬ ಮುಸ್ಲಿಂ ಮಹಿಳೆ ಕುಟುಂಬ ಸರತಿ ಸಾಲಿನಲ್ಲಿ‌ ನಿಂತು ದರ್ಶನ ಪಡೆದು ಗಮನ ಸೆಳೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ಹಜೀರ, ಹಾಸನಾಂಬೆ ಮೇಲೆ ನಮಗೆ ನಂಬಿಕೆ ಇದೆ. ತುಂಬ ವರ್ಷಗಳಿಂದ ದೇವರ ದರ್ಶನಕ್ಕೆ ಬರಬೇಕು ಎಂದುಕೊಂಡಿದ್ದು, ಈ ಬಾರಿ ದರ್ಶನಕ್ಕೆ ಬರುವ ಅವಕಾಶ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ನವೆಂಬರ್ 15ರವರೆಗೆ ಜಿಲ್ಲಾಡಳಿತ ಭಕ್ತರಿಗೆ ದರ್ಶನಕ್ಕೆ ದಿನದ 24 ಗಂಟೆಯೂ ವ್ಯವಸ್ಥೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com