ತಿರುಚಿದ ವಿಡಿಯೋ ಮೂಲಕ ಬಿಜೆಪಿ ನಾಯಕಿಗೆ ಬ್ಲ್ಯಾಕ್‌ಮೇಲ್ ಆರೋಪ; ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು

ತಿರುಚಿದ ವಿಡಿಯೋ ಮೂಲಕ ಬಿಜೆಪಿ ನಾಯಕಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಬಾಗಲಕೋಟೆ ಜಿಲ್ಲೆಯ ಪತ್ರಕರ್ತರೊಬ್ಬರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಎಫ್ಐಆರ್ (ಸಾಂಕೇತಿಕ ಚಿತ್ರ)
ಎಫ್ಐಆರ್ (ಸಾಂಕೇತಿಕ ಚಿತ್ರ)
Updated on

ಬಾಗಲಕೋಟೆ: ತಿರುಚಿದ ವಿಡಿಯೋ ಮೂಲಕ ಬಿಜೆಪಿ ನಾಯಕಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಬಾಗಲಕೋಟೆ ಜಿಲ್ಲೆಯ ಪತ್ರಕರ್ತರೊಬ್ಬರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ವಿಡಿಯೋ ಜರ್ನಲಿಸ್ಟ್ ಎಂದು ಹೇಳಿಕೊಳ್ಳುವ ಬಂಡೆ ನವಾಜ್ ಸರಕಾವಾಸ್ ಎಂಬಾತನ ವಿರುದ್ಧ ಸಂತ್ರಸ್ತೆ ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತೆ ಜಮಖಂಡಿ ಪಟ್ಟಣದ ಬಿಜೆಪಿಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ ಮತ್ತು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೂ ಆಗಿದ್ದಾರೆ.
ಆರೋಪಿ ಅಶ್ಲೀಲ ವಿಡಿಯೋದೊಂದಿಗೆ ಸಂತ್ರಸ್ತೆಯ ಮುಖವನ್ನು ಮಾರ್ಫಿಂಗ್ ಮಾಡಿದ್ದಾರೆ.

ಬಿಜೆಪಿ ಮಹಿಳಾ ಕಾರ್ಯಕರ್ತೆಯ ಲೈಂಗಿಕ ಹಗರಣ ಎಂದು ಶೀರ್ಷಿಕೆ ನೀಡಿ, ಕನ್ನಡದ ಹಾಡನ್ನು ಸೇರಿಸಿದ್ದಾನೆ. ಆರೋಪಿ ನಂತರ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿದ್ದು, ತನ್ನನ್ನು ಭೇಟಿಯಾಗಿ ಹಣ ನೀಡುವಂತೆ ಒತ್ತಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ನೀಡಲು ಸಿದ್ಧರಿಲ್ಲದಿದ್ದರೆ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com