ರಾಮನಗರ
ರಾಜ್ಯ
ರಾಮನಗರ: ದರ್ಗಾ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ!
ದರ್ಗಾದ ಪ್ರಸಾದ ಸೇವಿಸಿ ರಾಮನಗರದಲ್ಲಿ 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ರಾಮನಗರ: ದರ್ಗಾದ ಪ್ರಸಾದ ಸೇವಿಸಿ ರಾಮನಗರದಲ್ಲಿ 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ಯಾರಬ್ ನಗರದಲ್ಲಿನ ಪೀರನ್ ಷಾ ವಲಿ ದರ್ಗಾದಲ್ಲಿ ಉರುಸ್ ಪ್ರಯುಕ್ತ ಪ್ರಸಾದ ವಿತರಣೆ ಮಾಡಲಾಗಿತ್ತು. ಈ ಪ್ರಸಾದ ಸೇವಿಸಿದ ಬಳಿಕ 50ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಶುರುವಾಗಿ ಅಸ್ವಸ್ಥರಾಗಿದ್ದಾರೆ.
ದರ್ಗಾದಲ್ಲಿ ಮಧ್ಯಾಹ್ನ ಮಲಿದಾ ಎಂಬ ಸಿಹಿ ಪದಾರ್ಥವನ್ನು ನೀಡಲಾಗಿತ್ತು. ಸಿಹಿ ತಿಂಡಿಯಲ್ಲಿ ವಿಷಕಾರಿ ಅಂಶ ಇದ್ದಿರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಸ್ವಸ್ಥಗೊಂಡ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ ಕೆಲವರು ನಿತ್ರಾಣಗೊಂಡಿದ್ದಾರೆ. ರಾಮನಗರ ಪೊಲೀಸರು ಮಲಿದಾ ಸಿಹಿ ತಿಂಡಿಯ ಮಾದರಿಯನ್ನು ಪರೀಕ್ಷೆಗಾಗಿ ಪಡೆದಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕೂಡಲೇ ಇನ್ನಷ್ಟು ಬೆಡ್ ವ್ಯವಸ್ಥೆ ಮಾಡುವಂತೆ ವೈದ್ಯರಿಗೆ ತಾಕೀತು ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ