ಬೆಂಗಳೂರು: ಬಗರ್‌ಹುಕುಂ ಯೋಜನೆಯಡಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಭೂಮಿಯನ್ನು ಸಕ್ರಮಗೊಳಿಸಲು ಸಲ್ಲಿಕೆಯಾಗಿರುವ ನಕಲಿ ಅರ್ಜಿಗಳನ್ನು ಪತ್ತೆ ಹಚ್ಚಲು ಕಂದಾಯ ಇಲಾಖೆ ಪ್ರಕ್ರಿಯೆ ಆರಂಭಿಸಿದೆ.
'ನಾವು ಇಲಾಖೆಯನ್ನು ಸಂಪೂರ್ಣವಾಗಿ ಪೇಪರ್ ಮುಕ್ತಗೊಳಿಸಲು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದೇವೆ' ಮತ್ತು ಅರ್ಜಿದಾರರು ಭೂಮಿಯನ್ನು ಪಡೆಯಲು ಅರ್ಹರೇ ಎಂದು ತಿಳಿಯಲು ಕಡ್ಡಾಯವಾಗಿ ಅರ್ಜಿಗೆ ಆಧಾರ್ ಲಿಂಕ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅರ್ಜಿ ಸಲ್ಲಿಸಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಅರ್ಹರಲ್ಲ' ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು
'2017ರಲ್ಲಿ, ನಾವು ಕಾನೂನನ್ನು ತಿದ್ದುಪಡಿ ಮಾಡಿದ್ದೇವೆ ಮತ್ತು ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಭೂಮಿಯನ್ನು ಸಕ್ರಮಗೊಳಿಸಲು ಮುಂದಾಗಿದ್ದೇವೆ. ಇದರ ಅಡಿಯಲ್ಲಿ 54 ಲಕ್ಷ ಎಕರೆ ಭೂಮಿಗೆ ಹಕ್ಕುಪತ್ರ ನೀಡುವ 9.29 ಲಕ್ಷ ಅರ್ಜಿಗಳು ರಾಜ್ಯ ಸರ್ಕಾರದ ಮುಂದೆ ಬಾಕಿ ಉಳಿದಿವೆ. ಈ ಅರ್ಜಿಗಳನ್ನು ವಿಲೇವಾರಿ ಮಾಡುವುದು ನಮ್ಮ ಆದ್ಯತೆಯಾಗಿದೆ' ಎಂದು ಅವರು ಹೇಳಿದರು.
'ನಾವು ಅರ್ಜಿದಾರರ ಆಧಾರ್ ವಿವರಗಳನ್ನು ಹೊಂದಿದ್ದೇವೆ. ತಹಶೀಲ್ದಾರರು ಅವರು ಎಷ್ಟು ಜಮೀನು ಹೊಂದಿದ್ದಾರೆ ಮತ್ತು ಈ ಕಾನೂನಿನ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವರು ಅರ್ಹರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಆ ಭೂಮಿಯಲ್ಲಿ ಸಾಗುವಳಿ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಉಪಗ್ರಹ ಚಿತ್ರಗಳನ್ನೂ ಬಳಸುತ್ತಿದ್ದೇವೆ. ಬಳಿಕ ಇದನ್ನು ಬಗರ್ ಹುಕುಂ ಸಮಿತಿಗೆ ನೀಡಿ ತೀರ್ಮಾನ ಕೈಗೊಳ್ಳುತ್ತೇವೆ' ಎಂದರು.
ಈ ಯೋಜನೆಯು ಸ್ವಂತ ಜಮೀನು ಇಲ್ಲದವರಿಗೆ ಅನ್ವಯಿಸುತ್ತದೆ. 'ಸಾಗುವಳಿ ಮಾಡುತ್ತಿದ್ದರೂ ಅದು 4 ಎಕರೆಗಿಂತ ಹೆಚ್ಚಿರಬಾರದು. ಸರ್ಕಾರಿ ಭೂಮಿಯಲ್ಲಿ ತಿಳಿದೋ ತಿಳಿಯದೆಯೋ ಅನೇಕರು ಸಾಗುವಳಿ ಮಾಡುತ್ತಿದ್ದು, ಇದನ್ನು ಸಕ್ರಮಗೊಳಿಸಬೇಕಾಗಿದೆ. ಅನೇಕ ಅನರ್ಹರು ಸಹ ಅರ್ಜಿ ಸಲ್ಲಿಸಿದ್ದಾರೆ. ಕಾನೂನು ಬಡವರಿಗಾಗಿ ಇರುವುದಾಗಿದೆ. ಆದರೆ, ಅನೇಕರು ಅದನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಎಕರೆಗಟ್ಟಲೆ ಜಮೀನು ಹೊಂದಿರುವ ಶ್ರೀಮಂತರು ಅರ್ಜಿ ಸಲ್ಲಿಸಿದ್ದಾರೆ' ಎಂದು ಗೌಡ ಹೇಳಿದರು.
ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಸರಳೀಕರಿಸಲಾಗುತ್ತಿದ್ದು, ಸಭೆಗಳನ್ನು ಡಿಜಿಟಲೀಕರಣಗೊಳಿಸಲು ಶಾಸಕರ ನೇತೃತ್ವದ ಸಮಿತಿಗಳಿಗೆ ತಿಳಿಸಲಾಗಿದೆ. ಶಾಸಕರ ಅನುಪಸ್ಥಿತಿಯಲ್ಲಿ ಸಭೆ ನಡೆಸಿದ ಪ್ರಕರಣಗಳಿವೆ. ಬಗರ್ ಹುಕುಂ ಸಮಿತಿ ರಚನೆ ಕೋರಿ 50 ತಾಲ್ಲೂಕುಗಳಿಂದ ಅರ್ಜಿಗಳು ಬಂದಿದ್ದು, ಮುಂದಿನ ಕೆಲವು ವಾರಗಳಲ್ಲಿ ಸಮಿತಿ ರಚನೆ ಮಾಡಲಾಗುವುದು. ಸಂಪೂರ್ಣ ಡಿಜಿಟಲೀಕರಣಕ್ಕಾಗಿ ಪ್ರತಿ ತಹಶೀಲ್ದಾರ್ ಕಚೇರಿಗೆ 50 ಲಕ್ಷ ರೂ. ಅಗತ್ಯವಿದೆ ಎಂದರು.
Advertisement