ಮೊದಲ ಬಾರಿ ಶಾಸಕರಾದವರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನವಿಲ್ಲ, ಬಿಆರ್ ಪಾಟೀಲ್ ಪತ್ರ ವಿಚಾರ ಗೊತ್ತಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು: ನಿಗಮಮಂಡಳಿ ನೇಮಕ ಪಟ್ಟಿ ವಿಚಾರದಲ್ಲಿ ನಾನು, ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ. ಅವರು ಪಟ್ಟಿಯನ್ನು ಮಾಡಿಕೊಂಡಿದ್ದಾರೆ. ಪಟ್ಟಿಯನ್ನು ತೆಗೆದುಕೊಂಡು ದೆಹಲಿಗೆ ಹೋಗಿದ್ದು, ಕುಳಿತು ಮಾತನಾಡಿ ಚರ್ಚೆ ಮಾಡಿ ದೆಹಲಿಯಿಂದ ಪಟ್ಟಿ ಕಳುಹಿಸಿಕೊಡುತ್ತಾರೆ ಎಂದು ಡಿಸಿಎಂ ಡಿ.ಕೆ ಶೀವಕುಮಾರ್ ಹೇಳಿದ್ದಾರೆ.
ಮೊದಲ ಬಾರಿ ಶಾಸಕರಾದವರಿಗೆ ಸ್ಥಾನವಿಲ್ಲ: ಅಂತಿಮವಾಗಿದ್ದು ಹೈಕಮಾಂಡ್ ಗೆ ಪಟ್ಟಿ ರವಾನೆ ಮಾಡಲಾಗಿದೆ, ಹೈಕಮಾಂಡ್ ಸದ್ಯದಲ್ಲಿಯೇ ಹೆಸರು ಅಂತಿಮ ಮಾಡಬಹುದು ಎಂದರು. ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ನಿಗಮ ಮಂಡಳಿ ಪಟ್ಟಿಯನ್ನು ಹೈಕಮಾಂಡ್ ಗೆ ರವಾನೆ ಮಾಡಲಾಗಿದ್ದು, ಆದಷ್ಟು ಬೇಗ ಪಟ್ಟಿ ಬಿಡುಗಡೆ ಮಾಡುತ್ತೇವೆ. ಮೊದಲ ಬಾರಿ ಶಾಶಕರಾದವರಿಗೆ ನಿಗಮದಲ್ಲಿ ಸ್ಥಾನವಿಲ್ಲ. 2ನೇ ಹಂತದಲ್ಲಿ ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನ ನೀಡುತ್ತೇವೆ ಎಂದರು.
ಸಿಎಂಗೆ ಬಿಆರ್ ಪಾಟೀಲ್ ಪತ್ರ ಬರೆದಿರುವ ವಿಚಾರ ಗೊತ್ತಿಲ್ಲ ಈ ವಿಚಾರವನ್ನು ಸಂಬಂಧ ಪಟ್ಟ ಸಚಿವರ ಜೊತೆ ಮಾತನಾಡುತ್ತೇವೆ. ನನಗೆ ಗೊತ್ತಿಲ್ಲ, ಈಗ ನೀವು ತಿಳಿಸ್ತಾ ಇದ್ದೀರಿ. ಏನು ವಿಚಾರ ಅನ್ನೋದು ಗೊತ್ತಿಲ್ಲ ಹಿಂದೆ ಕೆಲ ಸಚಿವರು ಹೇಳಿರುವ ವಿಚಾರಗಳನ್ನೂ ಚರ್ಚಿಸುತ್ತೇವೆ ಬಿ.ಆರ್ ಪಾಟೀಲ್ ಅವರನ್ನೂ ಕರೆದು ಚರ್ಚೆ ಮಾಡುತ್ತೇನೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ