3,607 ಕೋಟಿ ರೂ. ಮೌಲ್ಯದ 62 ಹೂಡಿಕೆ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ

ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನೆ ಸಮಿತಿಯು(ಎಸ್‌ಎಲ್‌ಎಸ್‌ಡಬ್ಲ್ಯುಸಿಸಿ) 3,607.19 ಕೋಟಿ ರೂಪಾಯಿ ಮೌಲ್ಯದ 62 ಕೈಗಾರಿಕಾ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ.
ಎಂ.ಬಿ ಪಾಟೀಲ್
ಎಂ.ಬಿ ಪಾಟೀಲ್

ಬೆಂಗಳೂರು: ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನೆ ಸಮಿತಿಯು(ಎಸ್‌ಎಲ್‌ಎಸ್‌ಡಬ್ಲ್ಯುಸಿಸಿ) 3,607.19 ಕೋಟಿ ರೂಪಾಯಿ ಮೌಲ್ಯದ 62 ಕೈಗಾರಿಕಾ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಇದರಿಂದ ರಾಜ್ಯದಲ್ಲಿ 10,755 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಧಿಕೃತ ಪ್ರಕಟಣೆ ಬುಧವಾರ ತಿಳಿಸಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ SLSWCC ಸಮಿತಿಯು 50 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯನ್ನು ಒಳಗೊಂಡ ಎಂಟು ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ. ಇವು 6,360 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಟೆಕ್ಸ್‌ಕಾನ್ ಸ್ಟೀಲ್ಸ್, ಹುಂಡ್ರಿ ಶುಗರ್ಸ್ ಮತ್ತು ಎಥೆನಾಲ್ ಪ್ರೈವೇಟ್ ಲಿಮಿಟೆಡ್, ಬ್ರೆನ್ ಲೈಫ್ ಸೈನ್ಸಸ್, ಆಲ್ಪೈನ್ ಎಥೆನಾಲ್, ವಿರೂಪಾಕ್ಷ ಲ್ಯಾಬೋರೇಟರೀಸ್ ಮತ್ತು ಕ್ವಾಲ್‌ಕಾಮ್ ಇಂಡಿಯಾ ಅನುಮೋದನೆ ಪಡೆದ ಕೆಲವು ಪ್ರಮುಖ ಹೂಡಿಕೆದಾರರಾಗಿದ್ದಾರೆ.

577.35 ಕೋಟಿ ಹೆಚ್ಚುವರಿ ಹೂಡಿಕೆಯ ಮೂರು ಯೋಜನೆಗಳಿಗೂ SLSWCC ಸಮಿತಿ ಒಪ್ಪಿಗೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com