ನೆನೆಗುದಿಗೆ ಬಿದ್ದಿರುವ ಹೊನ್ನಾವರ ಬಂದರು ಯೋಜನೆ ಆರಂಭಿಸಲು ಕ್ರಮ: ಈಶ್ವರ್ ಖಂಡ್ರೆ

ಹೂಡಿಕೆದಾರರನ್ನು ಆಕರ್ಷಿಸಲು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಮೆರಿಕದಲ್ಲಿದ್ದಾರೆ. ಆದರೆ ಈಗಾಗಲೇ ಕರ್ನಾಟಕದಲ್ಲಿ ಬಂಡವಾಳ ಹೂಡಿರುವ ವಿದೇಶಿ ಉದ್ಯಮಿಗಳ  ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ.
ಈಶ್ವರ್ ಖಂಡ್ರೆ
ಈಶ್ವರ್ ಖಂಡ್ರೆ
Updated on

ಬೆಂಗಳೂರು: ಹೂಡಿಕೆದಾರರನ್ನು ಆಕರ್ಷಿಸಲು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಮೆರಿಕದಲ್ಲಿದ್ದಾರೆ. ಆದರೆ ಈಗಾಗಲೇ ಕರ್ನಾಟಕದಲ್ಲಿ ಬಂಡವಾಳ ಹೂಡಿರುವ ವಿದೇಶಿ ಉದ್ಯಮಿಗಳ  ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ.

ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ (HPPL) ತನ್ನ ಬಂದರು ಯೋಜನೆಯನ್ನು ನಿರ್ಮಿಸಲು ಒಂದು ದಶಕದಿಂದ ಹೆಣಗಾಡುತ್ತಿದೆ, ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರಚೋದಿಸಲ್ಪಟ್ಟ ದ್ವೇಷ ರಾಜಕಾರಣದಿಂದ ಯೋಜನೆಗೆ ತೊಡಕಾಗಿದೆ.

ಪ್ರಾಜೆಕ್ಟ್ ಇಂಜಿನಿಯರ್‌ಗಳಿಗೆ ಒಂದು ವರ್ಷದಿಂದ ಯಂತ್ರೋಪಕರಣಗಳನ್ನು ತರಲು ಸಾಧ್ಯವಾಗಲಿಲ್ಲ, ಯೋಜನೆ ಸಂಬಂಧ ಕೆಲ ನಿರ್ವಹಿಸಲು ಮುಂದಾದರೆ ಕಲ್ಲು ತೂರಾಟ ನಡೆದ ನಿದರ್ಶನಗಳಿವೆ.

ಪರಿಸರವಾದಿಗಳೆಂದು ತೋರಿಸಿಕೊಳ್ಳುವ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಯೋಜನೆಯನ್ನು ಸ್ಥಗಿತಗೊಳಿಸುವ ಹಲವು ಕಾರ್ಯಕ್ರಮ ಪ್ರಾರಂಭಿಸಿದರು, ಆದರೆ ಸೆಪ್ಟೆಂಬರ್ 26 ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತನ್ನ ಆದೇಶದಲ್ಲಿ HPPL ವಾದವನ್ನು ಎತ್ತಿಹಿಡಿದಿದೆ.

ನವೆಂಬರ್ 24, 2021 ರ ಕರ್ನಾಟಕ ಹೈಕೋರ್ಟ್ ಆದೇಶದ ನಂತರ ಇದು ಜಾರಿಯಾಗಿದೆ. ಎರಡು ನ್ಯಾಯಾಂಗ ತೀರ್ಪುಗಳನ್ನು ಅನುಸರಿಸಿ, ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲು ಜಿಲ್ಲಾಡಳಿತದ ಬೆಂಬಲ ಕೋರಿದ್ದೇನೆ ಎಂದು HPPL ಕಾರ್ಯನಿರ್ವಾಹಕ ನಿರ್ದೇಶಕ ರಾಘವೇಂದ್ರ ರೆಡ್ಡಿ ಹೇಳಿದ್ದಾರೆ.

ಪ್ರತಿಯೊಂದು  ಬಂಡವಾಳ ಹೂಡಿಕೆಯು ರಾಜ್ಯಕ್ಕೆ ಅಮೂಲ್ಯವಾಗಿದೆ ಮತ್ತು ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಎಂದು ಪರಿಸರ ಮತ್ತು ಅರಣ್ಯ ಖಾತೆ ಸಚಿವ ಈಶ್ವರ್ ಖಂಜ್ರೆ ಭರವಸೆ ನೀಡಿದ್ದಾೃರೆ.

ಕರ್ನಾಟಕವು ಎರಡನೇ ಅತಿ ಹೆಚ್ಚು ಜಿಎಸ್‌ಟಿ ಪಾವತಿಸುವ ಮತ್ತು ಜಿಡಿಪಿ ಬೆಳವಣಿಗೆಯನ್ನು ವೇಗಗೊಳಿಸುತ್ತಿರುವುದರಿಂದ ಇಲ್ಲಿಂದ ಹೆಚ್ಚು ರಫ್ತು ಮಾಡಬೇಕಾಗಿದೆ, ಆದ್ದರಿಂದ ನಮಗೆ ಹೆಚ್ಚಿನ ಬಂದರುಗಳ ಅಗತ್ಯವಿದೆ ಎಂದು ಎಫ್ ಕೆಸಿಸಿಐ ಮಾಜಿ ಜೆ ಕ್ರಾಸ್ತಾ ಹೇಳಿದರು.

ಉತ್ತರ ಭಾರತದಿಂದ ಹೆಚ್ಚಿನ ಸರಕು ವ್ಯಾಪಾರವು ಗುಜರಾತ್ ಅಥವಾ ಮುಂಬೈಗೆ ಹೋಗುತ್ತಿದೆ, ಆದರೆ ದಕ್ಷಿಣವು ಟುಟಿಕೋರಿನ್ ಅಥವಾ ಚೆನ್ನೈ ಅವಲಂಬಿಸಿದೆ. ನಮ್ಮ ಬಂದರುಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸುಧಾರಿಸಬೇಕು ಎಂದು ಹೇಳಿದ್ದಾರೆ.

ಎಚ್‌ಪಿಪಿಎಲ್ ಆರಂಭದಲ್ಲಿ ಉತ್ತಮವಾಗಿ ಯೋಜಿಸಿದ್ದರೆ, ಇದು ಈ ರೀತಿಯಾಗುತ್ತಿರಲಿಲ್ಲ, ಈ ಸಮಸ್ಯೆಯನ್ನು ನಾನು ಪರಿಶೀಲಿಸುತ್ತೇನೆ ಮತ್ತು ಸಮಸ್ಯೆ ಬಗೆಹರಿಯುತ್ತನೆ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.

ಮೈಸೂರು, ಕಲಬುರಗಿ, ಬೀದರ್, ಧರ್ಮಸ್ಥಳ ಮತ್ತು ತುಮಕೂರು ಸೇರಿದಂತೆ ಕರ್ನಾಟಕದ ಐದು ನಗರಗಳನ್ನು ಮಾತ್ರ ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೋಮವಾರ ತಿಳಿಸಿದ್ದಾರೆ. ಅದರಂತೆ, ಎಲ್ಲಾ ನಾಗರಿಕರು ತಮ್ಮ ನಗರಗಳ ನಾಗರಿಕರು ತಮ್ಮ ನಗರಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕೆಂದು ಹೇಳಿದ್ದಾರೆ.

ಅರಣ್ಯ ಇಲಾಖೆಯು 4,000 ಎಕರೆಗೂ ಹೆಚ್ಚು ಒತ್ತುವರಿಯನ್ನು ತೆರವುಗೊಳಿಸಿದ್ದು, ಅದನ್ನು ಹಿಂಪಡೆಯಲಾಗಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ಆಂದೋಲನಗಳನ್ನು ಕೈಗೊಳ್ಳಲಾಗುವುದು ಎಂದು ವಿವರ ನೀಡಿದರು.

ರಾಜ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ರೈಲು ಬ್ಯಾರಿಕೇಡ್ ಜಾಲವನ್ನು ಹೆಚ್ಚಿಸುವ ಮೂಲಕ ಮನುಷ್ಯ-ಆನೆ ಸಂಘರ್ಷವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com