ಮಾಜಿ ಶಾಸಕರಿಗೆ ರೂ.5 ಕೋಟಿಗೆ ಬ್ಲ್ಯಾಕ್‌ಮೆಲ್; ಇಬ್ಬರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಶೃಂಗೇರಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರಿಗೆ ಅನೈತಿಕ ಸಂಬಂಧದ ಸುಳ್ಳು ಅಪಾದನೆ ಮಾಡಿ ರೂ.5 ಕೋಟಿ ನೀಡುವಂತೆ ಬೆದರಿಕೆ ಒಡ್ಡಿದ್ದ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶೃಂಗೇರಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರಿಗೆ ಅನೈತಿಕ ಸಂಬಂಧದ ಸುಳ್ಳು ಅಪಾದನೆ ಮಾಡಿ ರೂ.5 ಕೋಟಿ ನೀಡುವಂತೆ ಬೆದರಿಕೆ ಒಡ್ಡಿದ್ದ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಚಿಕ್ಕಮಗಳೂರು ಜಿಲ್ಲೆ ಈಚೆಕೆರೆ ಗ್ರಾಮದ ಎಚ್.ಎಂ. ಮನು (38) ಮತ್ತು ಮಾದಬುರು ಗ್ರಾಮದ ಅರಣ್ಯಾನಿ (23) ಅಪರಾಧಿಗಳು. ತಲಾ 2 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ ವಿಧಿಸಿ ಚಿಕ್ಕಮಗಳೂರು ಜಿಲ್ಲೆ ಎನ್‌ಆರ್‌ಪುರ ಜೆಎಂಎಫ್ ಸ್ ನ್ಯಾಯಾಲಯ ತೀರ್ಪು ನೀಡಿದೆ.

2013ರಲ್ಲಿ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರಿಗೆ ಅಪರಾಧಿ ಮನು, ಕರೆ ಮಾಡಿ ನರಸಿಂಹರಾಜಪುರ ತಾಲ್ಲೂಕು ಅಧ್ಯಕ್ಷನಾಗಿ ಮಾಡುವಂತೆ ಬೇಡಿಕೆ ಒಡ್ಡಿದ್ದ. ಅಲ್ಲದೆ, ಅರಣ್ಯಾನಿ ಎಂಬಾಕೆ ಜತೆಗಿನ ಅನೈತಿಕ ಸಂಬಂಧ ಇದೆ ಎಂದು ಸುಳ್ಳು ಅಪಾದನೆ ಮಾಡಿ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸಿದ್ದ. ಇಲ್ಲವಾದರೆ 5 ಕೋಟಿ ರೂ. ನನಗೆ ಮತ್ತು ಅರಣ್ಯಾನಿಗೆ 22 ಲಕ್ಷ ರೂ. ನೀಡುವಂತೆ ಮಾನಸಿಕ ಕಿರುಕುಳ ಕೊಟ್ಟಿದ್ದ.

ಈ ಕುರಿತು ಜೀವರಾಜ್, ಎನ್.ಆರ್.ಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಸರ್ಕಾರ ಹೆಚ್ಚಿನ ತನಿಖೆ ಸಲುವಾಗಿ ಸಿಐಡಿಗೆ ವಹಿಸಿತ್ತು. ಸಿಐಡಿ ಅಧಿಕಾರಿಗಳು ತನಿಖೆ ಪೂರ್ಣ ಮಾಡಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com