ದಾವಣಗೆರೆ: ಅಭ್ಯಾಸಕ್ಕೆಂದು ತೆರಳಿ ಅಖಾಡದಲ್ಲಿಯೇ 13 ವರ್ಷದ ಕುಸ್ತಿಪಟು ಆತ್ಮಹತ್ಯೆ
ದಾವಣಗೆರೆ: ಜಿಲ್ಲೆಯ ಅಖಾಡದ ಆವರಣದಲ್ಲಿಯೇ 13 ವರ್ಷದ ಕುಸ್ತಿಪಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ಹರಿಹರ ಪಟ್ಟಣದ ನಿವಾಸಿ ಕಾವ್ಯಾ ಪೂಜಾರ್ ಎಂದು ಗುರುತಿಸಲಾಗಿದ್ದು, ಸೋಮವಾರ ಈ ಘಟನೆ ನಡೆದಿದೆ.
ಕುಸ್ತಿಯಲ್ಲಿ ಕಾವ್ಯಾ ಹಲವು ಪ್ರಶಸ್ತಿಗಳನ್ನು ಪಡೆದು ಉತ್ತಮ ಹೆಸರು ಗಳಿಸಿದ್ದರು. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಾವ್ಯಾ ಧಾರವಾಡದ ಕುಸ್ತಿಪಟುಗಳ ಹಾಸ್ಟೆಲ್‌ನಲ್ಲಿ ವಾಸವಿದ್ದು, ಅಲ್ಲೇ ಓದುತ್ತಿದ್ದಳು. ಎರಡು ದಿನಗಳ ಹಿಂದೆ ಹರಿಹರದ ಮನೆಗೆ ಬಂದಿದ್ದಳು.
ಸಂತ್ರಸ್ತೆ ಸೋಮವಾರ ಬೆಳಗ್ಗೆ ಅಭ್ಯಾಸಕ್ಕಾಗಿ ಅಖಾಡಕ್ಕೆ ತೆರಳಿದ್ದರು. ಆದರೆ, ನಂತರ ಆಕೆ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹರಿಹರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಸಂತ್ರಸ್ತೆ ಕುಸ್ತಿಪಟುಗಳ ಕುಟುಂಬದಿಂದ ಬಂದವರಾಗಿದ್ದು, ಪ್ರದರ್ಶನ ನೀಡುವಂತೆ ಒತ್ತಡ ಹೇರುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ