ಕರ್ನಾಟಕದಲ್ಲಿ ತಲೆಯೆತ್ತಲಿವೆ 400 ಗ್ರಾಮ ನ್ಯಾಯಾಲಯಗಳು: ಇಂದು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ನಿರೀಕ್ಷೆ

ಕರ್ನಾಟಕದಾದ್ಯಂತ 400ಕ್ಕೂ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಪ್ರಾರಂಭಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟವು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ, ಇದು ಗ್ರಾಮೀಣ ಮಟ್ಟದಲ್ಲಿ ತಳಮಟ್ಟದವರೆಗೆ ಜನರಿಗೆ ನ್ಯಾಯವನ್ನು ಒದಗಿಸುವ ದಿಟ್ಟ ಹೆಜ್ಜೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದಾದ್ಯಂತ 400ಕ್ಕೂ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಪ್ರಾರಂಭಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟವು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ, ಇದು ಗ್ರಾಮೀಣ ಮಟ್ಟದಲ್ಲಿ ತಳಮಟ್ಟದವರೆಗೆ ಜನರಿಗೆ ನ್ಯಾಯವನ್ನು ಒದಗಿಸುವ ದಿಟ್ಟ ಹೆಜ್ಜೆಯಾಗಿದೆ. ಸ್ಥಳೀಯ ವಿವಾದಗಳು ಮತ್ತು ಕಾನೂನು ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಬೇಕು ಎಂಬುದು ಇದರ ಉದ್ದೇಶವಾಗಿದೆ. 

ಇಂದು ಗುರುವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಸುಮಾರು 100 ಕೋಟಿ ವೆಚ್ಚದ ನಿರೀಕ್ಷೆಯಿದ್ದು, ಇದು ಬೃಹತ್ ಆಡಳಿತಾತ್ಮಕ ಹೆಜ್ಜೆಯಾಗಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಗ್ರಾಮಗಳಲ್ಲಿ ಜನರಿಗೆ ನ್ಯಾಯ ದೊರಕಿಸಲು ಅಧಿಕಾರಿ ವರ್ಗದ ಮುಖ್ಯ ಕಾರ್ಯದರ್ಶಿ, ಕಾನೂನು ಕಾರ್ಯದರ್ಶಿ, ಕಂದಾಯ ಕಾರ್ಯದರ್ಶಿ ಮತ್ತು ಇತರ ಪಾಲುದಾರರೊಂದಿಗೆ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ 8,000ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಗ್ರಾಮಕ್ಕೆ ನ್ಯಾಯಾಲಯ ಬರಲು ವರ್ಷಗಳೇ ಬೇಕಾಗಬಹುದು. ಈ ನಿಟ್ಟಿನಲ್ಲಿ ಗ್ರಾಮ ನ್ಯಾಯಾಲಯಗಳು ಮಹತ್ವವಾಗಿರುತ್ತವೆ. 

ರಾಷ್ಟ್ರದಾದ್ಯಂತ ಗ್ರಾಮಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ತೆರೆಯಲು ಪ್ರಸ್ತಾಪಿಸಲಾಗಿದೆ. ಕರ್ನಾಟಕವು ಪ್ರಾಯೋಗಿಕ ಯೋಜನೆಯಾಗಿ ಎರಡು ನ್ಯಾಯಾಲಯಗಳನ್ನು ಪ್ರಾರಂಭಿಸಿತು, ಅದು ಇನ್ನೂ ಕಾರ್ಯನಿರ್ವಹಿಸುತ್ತಿದೆ. ಒಂದು ನೀತಿ ವಿಷಯವಾಗಿ, ಕೇಂದ್ರ ಸರ್ಕಾರವು ಗ್ರಾಮ ನ್ಯಾಯಾಲಯಗಳನ್ನು ಪ್ರೋತ್ಸಾಹಿಸುತ್ತದೆ, ಇದನ್ನು ಪ್ರಥಮ ದರ್ಜೆಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೆಂದು ಪರಿಗಣಿಸಲಾಗುತ್ತದೆ, ಸಣ್ಣ ವಿವಾದಗಳನ್ನು ಇತ್ಯರ್ಥಗೊಳಿಸಲು ಕ್ರಿಮಿನಲ್ ಮತ್ತು ಸಿವಿಲ್ ನ್ಯಾಯವ್ಯಾಪ್ತಿಗಳನ್ನು ಹೊಂದಿದೆ.

ಹಲವು ರಾಜ್ಯಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, 10 ರಾಜ್ಯಗಳಲ್ಲಿ 257 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಮಧ್ಯಪ್ರದೇಶ 89 ಕ್ರಿಯಾತ್ಮಕ ಗ್ರಾಮ ನ್ಯಾಯಾಲಯಗಳನ್ನು ಹೊಂದಿದೆ, ರಾಜಸ್ಥಾನ 45, ಉತ್ತರ ಪ್ರದೇಶ 44, ಕೇರಳ 30, ಮಹಾರಾಷ್ಟ್ರ 23 ಮತ್ತು ಒಡಿಶಾ 19 ಇಂತಹ ನ್ಯಾಯಾಲಯಗಳನ್ನು ಹೊಂದಿದೆ.

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪುನರಾವರ್ತಿತವಲ್ಲದ ವೆಚ್ಚಗಳಿಗೆ ಗರಿಷ್ಠ 18 ಲಕ್ಷ ರೂಪಾಯಿಗಳಿಗೆ ಒಳಪಟ್ಟಿರುತ್ತದೆ. ತರ ವೆಚ್ಚಗಳು ಸುಮಾರು 3.2 ಲಕ್ಷ ರೂಪಾಯಿಗಳಿಗೆ ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಈ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಉತ್ತೇಜನ, ನೆರವು ನೀಡಬಹುದು. ಕೇಂದ್ರ ಸರ್ಕಾರ ಸುಮಾರು 85 ಕೋಟಿ ರೂಪಾಯಿಗಳನ್ನು ರಾಜ್ಯಕ್ಕೆ ಒದಗಿಸುವ ನಿರೀಕ್ಷೆಯಿದೆ. 

ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದ ನಂತರ, ನ್ಯಾಯಾಲಯಗಳ ಸ್ಥಾಪನೆಗೆ ಕೆಲವು ತಿಂಗಳುಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. 400 ಗ್ರಾಮ ನ್ಯಾಯಲಯಗಳು ಕಾರ್ಯರೂಪಕ್ಕೆ ಬಂದ ನಂತರ, ಕರ್ನಾಟಕವು ರಾಷ್ಟ್ರದಾದ್ಯಂತ ಅತಿ ಹೆಚ್ಚು ಕ್ರಿಯಾತ್ಮಕ ಗ್ರಾಮ ನ್ಯಾಯಾಲಯಗಳನ್ನು ಹೊಂದಿರುವ ರಾಜ್ಯ ಎನಿಸಿಕೊಳ್ಳುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com