ಕೋಲಾರ: ಕೂಲಿ ಕೇಳಿದ್ದಕ್ಕೆ ದಲಿತ ವ್ಯಕ್ತಿಗೆ ನಿಂದಿಸಿ, ಥಳಿತ; ಇಬ್ಬರನ್ನು ಬಂಧಿಸಿದ ಪೊಲೀಸರು
ಕೋಲಾರ: ಅಕ್ಟೋಬರ್ 17 ರಂದು ಕೋಲಾರದ ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಡಿಯಲ್ಲಿ ಕೂಲಿಯನ್ನು ಕೇಳಿದ್ದಕ್ಕೆ ದಲಿತ ವ್ಯಕ್ತಿಯೊಬ್ಬನಿಗೆ ಥಳಿಸಿ, ನಿಂದಿಸಿರುವ ಘಟನೆ ನಡೆದಿದೆ.
ಸಂತ್ರಸ್ತ 29 ವರ್ಷದ ಕಟ್ಟಡ ಕಾರ್ಮಿಕನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಗಾರಪೇಟೆ ಪೊಲೀಸರು ರಜಪೂತ ಸಮುದಾಯದ ಸಹೋದರರಾದ ಜಗದೀಶ್ ಸಿಂಗ್, ರವಿ ಸಿಂಗ್ ಮತ್ತು ಸತೀಶ್ ಸಿಂಗ್ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ರವಿ ಸಿಂಗ್‌ಗಾಗಿ ಹುಡುಕಾಟ ನಡೆಸುತ್ತಿದ್ದು, ಜಗದೀಶ್ ಸಿಂಗ್ ಮತ್ತು ಸತೀಶ್ ಸಿಂಗ್‌ರನ್ನು ಬಂಧಿಸಲಾಗಿದೆ. ಕೋಲಾರ ಡಿವೈಎಸ್‌ಪಿ ಮಲ್ಲೇಶ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಎಸ್‌ಪಿ ಕೆಎಂ ಶಾಂತರಾಜು ಅವರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಸಂತ್ರಸ್ತರ ಪ್ರಕಾರ, ಜಗದೀಶ್ ಸಿಂಗ್ ಮತ್ತು ಸಹೋದರ ಹೊಸ ಮನೆಯ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ 3,500 ರೂ. ನೀಡಬೇಕಿತ್ತು. ಆದರೆ, ಕೇವಲ 2,000 ರೂ. ನೀಡಲಾಗಿತ್ತು. ಅಕ್ಟೋಬರ್ 17 ರಂದು ರಸ್ತೆ ಬದಿಯ ಟೀ ಅಂಗಡಿಯೊಂದರಲ್ಲಿ ಆರೋಪಿಗಳನ್ನು ಭೇಟಿಯಾಗಿ ತಮ್ಮ ಬಾಕಿಯನ್ನು ಪಾವತಿಸುವಂತೆ ಕೇಳಿದ್ದಾರೆ. ಈ ವೇಳೆ ಮೂವರು ಆತನ ಜಾತಿ ನಿಂದನೆ ಮಾಡಿ, ಥಳಿಸಿದ್ದಾರೆ.
ಆರೋಪಿಗಳು ಗ್ರಾಮದ ಕೆಲವು ನಿವಾಸಿಗಳ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ