ರಾಷ್ಟ್ರೀಯ ನೇತ್ರದಾನ ಪಾಕ್ಷಿಕ: ಸೆಲೆಬ್ರಿಟಿಗಳ ಒಳಗೊಳ್ಳುವಿಕೆ ನೇತ್ರದಾನಕ್ಕೆ ಜನರನ್ನು ಹೆಚ್ಚು ಪ್ರೇರೇಪಿಸುತ್ತದೆ
ನೇತ್ರದಾನ, ಕಾರ್ನಿಯಲ್ ಕುರುಡುತನ ಮತ್ತು ಕಾರ್ನಿಯಾ ಕಸಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಪ್ರತಿವರ್ಷ ಆಗಸ್ಟ್ 25 ಮತ್ತು ಸೆಪ್ಟೆಂಬರ್ 8ರ ನಡುವೆ ಆಚರಿಸಲಾಗುತ್ತದೆ.
Published: 04th September 2023 10:19 AM | Last Updated: 04th September 2023 03:59 PM | A+A A-

ಪುನೀತ್ ರಾಜಕುಮಾರ್
ಬೆಂಗಳೂರು: ನೇತ್ರದಾನ, ಕಾರ್ನಿಯಲ್ ಕುರುಡುತನ ಮತ್ತು ಕಾರ್ನಿಯಾ ಕಸಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಪ್ರತಿವರ್ಷ ಆಗಸ್ಟ್ 25 ಮತ್ತು ಸೆಪ್ಟೆಂಬರ್ 8ರ ನಡುವೆ ಆಚರಿಸಲಾಗುತ್ತದೆ.
ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿ, 2022ರಲ್ಲಿ ಜನರು ತಮ್ಮ ನೇತ್ರದಾನಕ್ಕೆ ಮುಂದಾಗುವಲ್ಲಿ ಕನ್ನಡದ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರು ದೊಡ್ಡ ಪ್ರೇರಕ ಶಕ್ತಿಯಾದರು. ಪುನೀತ್ ಅವರು ತನ್ನ ತಂದೆಯವರಂತೆ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದು ವೈದ್ಯರಿಗೆ ನಾಲ್ಕು ಜನರಿಗೆ ವಿಭಿನ್ನ ಕಸಿ ಮಾಡಲು ಸಹಾಯ ಮಾಡಿತು ಎಂದರು.
ಇವರಿಂದ ಪ್ರೇರಿತರಾಗಿ ಅನೇಕರು ನೇತ್ರದಾನಕ್ಕೆ ಮುಂದೆ ಬಂದರು. ಕಳೆದ ವರ್ಷದಿಂದ 2023ರ ಆಗಸ್ಟ್ ವರೆಗೆ ನಾರಾಯಣ ನೇತ್ರಾಲಯದ ಎಲ್ಲಾ ಕೇಂದ್ರಗಳಲ್ಲಿ 1.84 ಲಕ್ಷ ಜನರು ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಯೊಂದಿಗೆ ಸಂಯೋಜಿತವಾಗಿರುವ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಕೂಡ 2022 ರಲ್ಲಿ 2,194 ಜನರು ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ.
ಪ್ರಸಿದ್ಧ ಸೆಲೆಬ್ರಿಟಿಗಳು ತಮ್ಮ ಕಣ್ಣುಗಳನ್ನು ದಾನ ಮಾಡುವ ಸುದ್ದಿ ಬೆಳಕಿಗೆ ಬಂದಾಗ ಮಾತ್ರ ಸಾಮಾನ್ಯ ಜನರು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗುವ ಹಠಾತ್ ಬೆಳವಣಿಗೆ ಕಂಡುಬರುತ್ತದೆ. ಇಲ್ಲದಿದ್ದರೆ, ಈ ಸಂಖ್ಯೆಯಲ್ಲಿ ಕುಸಿತವಾಗುತ್ತದೆ. ಕೆಲವು ತಿಂಗಳ ನಂತರ ಜನರ ಭಾಗವಹಿಸುವಿಕೆ ಕ್ರಮೇಣ ಕಡಿಮೆಯಾಯಿತು ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ: ಡಾ. ರಾಜ್ ಕುಟುಂಬದ ಮಾದರಿಯಲ್ಲೇ ಹಿರಿಯ ನಿರ್ದೇಶಕ ಭಗವಾನ್ ನೇತ್ರದಾನ
ಜನರ ಮೇಲೆ ಸೆಲೆಬ್ರಿಟಿಗಳು ಹೆಚ್ಚು ಪ್ರಭಾವ ಬೀರುತ್ತಾರೆ. ನಟರು ತಮ್ಮ ಅಂಗಾಂಗಗಳನ್ನು ದಾನ ಮಾಡಲು ಸ್ವಯಂಪ್ರೇರಿತರಾಗುವುದನ್ನು ಜನರು ನೋಡಿದಾಗ, ಅವರು ಕೂಡ ಅದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಇದು ಅವರನ್ನು ಪ್ರೋತ್ಸಾಹಿಸುತ್ತದೆ ಎಂದು ಡಾ ಶೆಟ್ಟಿ ಹೇಳಿದರು.
ನೇತ್ರದಾನದ ಸಂಖ್ಯೆಯು ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜ್ಯದಾದ್ಯಂತ ಪ್ರತಿ ವರ್ಷ 10 ಲಕ್ಷದವರೆಗೆ ನೇತ್ರದಾನಿಗಳನ್ನು ಹೆಚ್ಚಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.
ಮಿಂಟೋ ನೇತ್ರಾಲಯದ ನಿರ್ದೇಶಕಿ ಡಾ. ಬಿಎಲ್ ಸುಜಾತಾ ರಾಥೋಡ್ ಮಾತನಾಡಿ, ಅಂಗಾಂಗ ದಾನ ಮಾಡಿದ್ದ ಕನ್ನಡ ಚಿತ್ರರಂಗದ ಗಣ್ಯರಾದ ಪುನೀತ್ ರಾಜ್‌ಕುಮಾರ್ ಮತ್ತು ಸಂಚಾರಿ ವಿಜಯ್ ಅವರ ನಿಧನವು ತಮ್ಮ ಅಂಗಾಂಗಗಳನ್ನು ದಾನ ಮಾಡಲು ಸ್ವಯಂಪ್ರೇರಿತರಾಗಿ ಅನೇಕ ಜನರನ್ನು ವಿಶೇಷವಾಗಿ ಯುವಕರು ಮುಂದೆ ಬಂದು ತಮ್ಮ ಕಣ್ಣುಗಳನ್ನು ದಾನ ಮಾಡಲು ಪ್ರೇರೇಪಿಸಿತು. ಆಸ್ಪತ್ರೆಯು ಕ್ಯೂಆರ್ ಕೋಡ್ ಅನ್ನು ಪರಿಚಯಿಸಿದೆ. ಕಣ್ಣನ್ನು ದಾನ ಮಾಡಲು ಇಚ್ಚಿಸುವವರು ಅದನ್ನು ಸ್ಕ್ಯಾನ್ ಮಾಡಬಹುದು. ಈ ಹಿಂದೆ, ನೇತ್ರದಾನದ ಬಗ್ಗೆ ಯಾವುದೇ ಅರಿವು ಇರಲಿಲ್ಲ. ಆದರೆ, ಕಳೆದ ಕೆಲವು ದಶಕಗಳಲ್ಲಿ ಹೆಚ್ಚಿನ ಸುಧಾರಣೆಯಾಗಿದೆ ಎಂದರು.
ನೇತ್ರದಾನಕ್ಕಾಗಿ ಮಧ್ಯರಾತ್ರಿ ಓಟ
ಹೆಚ್ಚಿನ ಜನರು ತಮ್ಮ ನೇತ್ರದಾನ ಮಾಡುವಂತೆ ಪ್ರತಿಪಾದಿಸಿದ ಬೆಂಗಳೂರಿನ ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ಎಸ್‌ಡಿ ಶರಣಪ್ಪ ಅವರು ನೇತ್ರದಾನಕ್ಕೆ ದಿವಂಗತ ನಟ ರಾಜ್‌ಕುಮಾರ್ ಮತ್ತು ಅವರ ಕುಟುಂಬದ ಕೊಡುಗೆಯನ್ನು ಉದಾಹರಣೆಯಾಗಿ ನೀಡಿದರು. ಅವರ ಕೊಡುಗೆಯು ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕಾರ್ನಿಯಲ್ ಕುರುಡುತನವನ್ನು ಎದುರಿಸಲು ಸಂದೇಶವನ್ನು ಹರಡಲು ಸಹಾಯ ಮಾಡಿತು.
ನಾರಾಯಣ ನೇತ್ರಾಲಯ ಸೆಪ್ಟೆಂಬರ್ 2ರಂದು ಆಯೋಜಿಸಿದ್ದ ಮಧ್ಯರಾತ್ರಿ ಓಟ - ‘ರನ್ ಫಾರ್ ಸೈಟ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಓಟದಲ್ಲಿ ಸುಮಾರು 300 ಜನರು ಭಾಗವಹಿಸಿದ್ದರು, ಮೇಜರ್ ಜನರಲ್ ರವಿ ಮುರುಗನ್ ಮುಖ್ಯ ಅತಿಥಿಗಳಾಗಿ ಅಧ್ಯಕ್ಷತೆ ವಹಿಸಿದ್ದರು.