ಅಲ್ಪಸಂಖ್ಯಾತ ಸಮುದಾಯ ವಿದ್ಯಾರ್ಥಿಗಳ ಮೇಲೆ ಧರ್ಮ ನಿಂದನೆ ಹಲ್ಲೆ ಆರೋಪ: ಹಾಸನದ ಸರ್ಕಾರಿ ವಸತಿ ಶಾಲೆ ವಿರುದ್ಧ ದೂರು
ಹಾಸನದ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಗೋಮಾಂಸ ಭಕ್ಷಕರು ಎಂದು ಧರ್ಮ ನಿಂದನೆ ಮಾಡಿ 10ನೇ ತರಗತಿಯ ಐವರು ಅಪ್ರಾಪ್ತ ಬಾಲಕರನ್ನು ಶಾಲಾ ಕೊಠಡಿಯೊಂದರಲ್ಲಿ ಅಕ್ರಮವಾಗಿ ಬಂಧಿಸಿರುವ ಘಟನೆ ನಡೆದಿದೆ.
Published: 08th September 2023 01:52 PM | Last Updated: 08th September 2023 01:52 PM | A+A A-

ಸಾಂಕೇತಿಕ ಚಿತ್ರ
ಬೆಂಗಳೂರು: ಹಾಸನದ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಗೋಮಾಂಸ ಭಕ್ಷಕರು ಎಂದು ಧರ್ಮ ನಿಂದನೆ ಮಾಡಿ 10ನೇ ತರಗತಿಯ ಐವರು ಅಪ್ರಾಪ್ತ ಬಾಲಕರನ್ನು ಶಾಲಾ ಕೊಠಡಿಯೊಂದರಲ್ಲಿ ಅಕ್ರಮವಾಗಿ ಬಂಧಿಸಿರುವ ಘಟನೆ ನಡೆದಿದೆ.
ಅರಸೀಕೆರೆ ತಾಲೂಕಿನ ರಾಮಸಾಗರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೆಪ್ಟೆಂಬರ್ 2ರಂದು ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (KSCPCR) ಪೊಲೀಸರು ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ವಾರದೊಳಗೆ ವರದಿ ಕೇಳಿದೆ.
ಘಟನೆಯ ಬಗ್ಗೆ ಮೊದಲು ಮಾಹಿತಿ ಪಡೆದು ಆಯೋಗದ ಗಮನಕ್ಕೆ ತಂದ ಸಾಮಾಜಿಕ ಕಾರ್ಯಕರ್ತ ಮತ್ತು ಮಾಜಿ ಪ್ರಧಾನಿ ವಿಪಿ ಸಿಂಗ್ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಸೈಯದ್ ಅಶ್ರಫ್, “ಶಾಲಾ ಶಿಕ್ಷಕ ಮಹಂತೇಶ್ (ಸಮಾಜ ವಿಜ್ಞಾನ ಪಾಠ ಕಲಿಸಿದವರು) ವಿದ್ಯುತ್ ಕೇಬಲ್ ನಿಂದ ಅಪ್ರಾಪ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ನೀವು ಗೋಮಾಂಸ ಸೇವಿಸುವವರು ಎಂದು ಜಾತಿವಾದಿ ಟೀಕೆಗಳನ್ನು ಮಾಡಿದರು. ಅಲ್ಲದೆ ಐವರು ಬಾಲಕರನ್ನು ಅಕ್ರಮವಾಗಿ ಕೊಠಡಿಯೊಂದರಲ್ಲಿ ಬಂಧಿಸಿದ್ದರು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಆಯೋಗದ ಅಧ್ಯಕ್ಷರನ್ನು ಸಂಪರ್ಕಿಸಿದ್ದೇವೆ ಎಂದರು.
ಸಂತ್ರಸ್ತರು ಮತ್ತು ಅವರ ಕುಟುಂಬದ ಸದಸ್ಯರು ಈ ಬಗ್ಗೆ ಮೌನ ವಹಿಸಿ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ಕೂಡ ಆರೋಪಿಸಿದರು. ಘಟನೆ ನಡೆದ ಮರುದಿನವೇ ಹಲ್ಲೆಗೊಳಗಾದ ಅಪ್ರಾಪ್ತ ಬಾಲಕನ ಪೋಷಕರು ದೂರು ದಾಖಲಿಸಿದ ಮರುದಿನ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಹಾಂತೇಶ್ ವಿರುದ್ಧ ಕಠಿಣ ಮತ್ತು ತ್ವರಿತ ಕ್ರಮಕ್ಕೆ ಕೋರಿ ಸಮುದಾಯದ ಮುಖಂಡರು ಸಂಪರ್ಕಿಸಿದ ನಂತರ ಆಯೋಗವು ಕ್ರಮಕ್ಕೆ ಮುಂದಾಗಿದೆ. ಅಂದಿನಿಂದ ಅವರು ರಜೆಯ ಮೇಲೆ ತೆರಳಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದು, ಅವರ ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸುವುದನ್ನು ನಮ್ಮ ಕರ್ತವ್ಯವಾಗಿದೆ. ಶಿಕ್ಷಕ ತಪ್ಪಿತಸ್ಥರೆಂದು ಕಂಡುಬಂದರೆ ಆಯೋಗವು ಕಠಿಣ ಕ್ರಮಕ್ಕೆ ಶಿಫಾರಸು ಮಾಡುತ್ತದೆ ಎಂದು ಆಯೋಗದ ಅಧ್ಯಕ್ಷ ನಾಗಣ್ಣ ಗೌಡ TNIE ಗೆ ತಿಳಿಸಿದರು.
ಇಲಾಖಾ ವಿಚಾರಣೆ ಆರಂಭ, ಮುಖ್ಯೋಪಾಧ್ಯಾಯರು: ಸಂಬಂಧಪಟ್ಟ ಇಲಾಖೆಗಳಿಂದ ವರದಿ ಕೇಳಿದ್ದೇವೆ ಎಂದು ನಾಗಣ್ಣಗೌಡ ತಿಳಿಸಿದರು. ಘಟನೆ ಮತ್ತು ಎಫ್‌ಐಆರ್ ದಾಖಲಾದ ನಂತರ ಇಲಾಖಾ ವಿಚಾರಣೆ ಆರಂಭಿಸಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಡಿಎಸ್ ರಾಜಣ್ಣ ಟಿಎನ್‌ಐಇಗೆ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ತನಿಖೆ ಮುಗಿದಿದ್ದು, ಇಂದು ಕೇಂದ್ರ ಕಚೇರಿ ಅಧಿಕಾರಿಗಳು ಬರಲಿದ್ದಾರೆ. ಘಟನೆಯ ಕುರಿತು ಅವರು ಶಾಲೆಯ ಶಿಕ್ಷಕರು, ಸಂತ್ರಸ್ತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಮಾತನಾಡುತ್ತಾರೆ ಎಂದು ಅವರು ಹೇಳಿದರು, ಶಾಲೆಯಲ್ಲಿ 270 ವಿದ್ಯಾರ್ಥಿಗಳು ಓದುತ್ತಿದ್ದಾರೆ.