ಕರ್ನಾಟಕದ ಮೊದಲ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ ಕೇಂದ್ರ ದೇವನಹಳ್ಳಿಯಲ್ಲಿ ಆರಂಭ: 15 ವರ್ಷಕ್ಕಿಂತ ಹಳೆಯ ವಾಹನಗಳು ರದ್ದಿಗೆ

ರಾಜ್ಯದಲ್ಲಿ ಶೀಘ್ರದಲ್ಲಿಯೇ ದೇವನಹಳ್ಳಿಯಲ್ಲಿ ಮೊದಲ ಸರ್ಕಾರಿ ಪ್ರಮಾಣೀಕೃತ ವಾಹನ ಸ್ಕ್ರ್ಯಾಪಿಂಗ್ ಕೇಂದ್ರ ಪ್ರಾರಂಭವಾಗಲಿದ್ದು, ಇಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ರದ್ದಿಗೆ ಹಾಕಲಾಗುತ್ತದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲಿಯೇ ದೇವನಹಳ್ಳಿಯಲ್ಲಿ ಮೊದಲ ಸರ್ಕಾರಿ ಪ್ರಮಾಣೀಕೃತ ವಾಹನ ಸ್ಕ್ರ್ಯಾಪಿಂಗ್ ಕೇಂದ್ರ ಪ್ರಾರಂಭವಾಗಲಿದ್ದು, ಇಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ರದ್ದಿಗೆ ಹಾಕಲಾಗುತ್ತದೆ. 

ರಾಜ್ಯ ಸರ್ಕಾರವು ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯವನ್ನು (RVSF) ಸ್ಥಾಪಿಸಲು ಮೂರು ಖಾಸಗಿ ಕಂಪನಿಗಳಿಗೆ ವಹಿಸಿದೆ. ಈ ತಿಂಗಳ ಅಂತ್ಯದ ವೇಳೆಗೆ ಅದಕ್ಕೆ ಅನುಮೋದನೆ ನೀಡುವ ನಿರೀಕ್ಷೆಯಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಕೊಪ್ಪಳದಲ್ಲಿ ಇನ್ನೂ ಎರಡು ಸೌಲಭ್ಯಗಳನ್ನು ಸ್ಥಾಪಿಸಲಾಗುವುದು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ಮತ್ತು ಅನರ್ಹ ಮತ್ತು ಮಾಲಿನ್ಯವನ್ನು ಉಂಟುಮಾಡುವ ವಾಹನಗಳನ್ನು ಆರ್ ವಿಎಸ್ ಎಫ್ ಗಳಲ್ಲಿ ರದ್ದುಗೊಳಿಸಬೇಕು. ಭಾರತದಾದ್ಯಂತ ಸುಮಾರು 60 ಆರ್‌ವಿಎಸ್‌ಎಫ್‌ಗಳಿವೆ, ಕರ್ನಾಟಕದಲ್ಲಿ ಇದುವರೆಗೆ ಇರಲಿಲ್ಲ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

15 ವರ್ಷ ಓಡಿರುವ ಎಲ್ಲ ಸರ್ಕಾರಿ ವಾಹನಗಳನ್ನು ರದ್ದುಪಡಿಸಬೇಕು. 15 ವರ್ಷ ಮೇಲ್ಪಟ್ಟು ಓಡಿದ ಮತ್ತು ಫಿಟ್‌ನೆಸ್ ಪ್ರಮಾಣಪತ್ರ ಪಡೆಯದ ಖಾಸಗಿ ವಾಹನಗಳನ್ನು ಕಡ್ಡಾಯವಾಗಿ ರದ್ದುಗೊಳಿಸಬೇಕು. ಫಿಟ್‌ನೆಸ್ ಸರ್ಟಿಫಿಕೇಟ್ ಪಡೆದಿರುವ ಮತ್ತು ಫಿಟ್‌ ಆಗಿರುವ ಖಾಸಗಿ ವಾಹನಗಳನ್ನು ರದ್ದುಪಡಿಸುವ ಅಗತ್ಯವಿಲ್ಲ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ (ಜಾರಿ ದಕ್ಷಿಣ) ಮಲ್ಲಿಕಾರ್ಜುನ ಸಿ TNIEಗೆ ತಿಳಿಸಿದರು.

ಸ್ಕ್ರ್ಯಾಪಿಂಗ್ ಗೆ ಒಯ್ಯುವ ವಾಹನಗಳ ಮೇಲೆ ಯಾವುದೇ ಪೊಲೀಸ್ ಪ್ರಕರಣಗಳು ಇರಬಾರದು. ಸಂಚಾರ ದಂಡ ಪಾವತಿಗೆ ಬಾಕಿ ಇರಬಾರದು.ಆರ್ ವಿಎಸ್ ಎಫ್ ಪರಿಸರ ಸ್ನೇಹಿ ರೀತಿಯಲ್ಲಿ ವಾಹನಗಳನ್ನು ಸ್ಕ್ರ್ಯಾಪ್ ಮಾಡುತ್ತದೆ. ಅಪಾಯಕಾರಿ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು.

ಇಂತಹ ಸೌಲಭ್ಯವನ್ನು ಸ್ಥಾಪಿಸಲು ಸುಮಾರು 10 ಕೋಟಿ ರೂಪಾಯಿ ವೆಚ್ಚವಾಗಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ದೇವನಹಳ್ಳಿಯಲ್ಲಿ ಕಾರ್ಯಾಚರಣೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 

ಸ್ಕ್ರ್ಯಾಪ್ ಮಾಡಿದ ನಂತರ, ವಾಹನ ಮಾಲೀಕರಿಗೆ ಡಿಸ್ಟ್ರಕ್ಷನ್ ಪ್ರಮಾಣಪತ್ರವನ್ನು (COD) ನೀಡಲಾಗುವುದು, ರಿಯಾಯಿತಿಗಳನ್ನು ಪಡೆಯಲು ಹೊಸ ವಾಹನಗಳನ್ನು ಖರೀದಿಸುವಾಗ ಉತ್ಪಾದಿಸಬಹುದು ಎಂದು ಮಲ್ಲಿಕಾರ್ಜುನ್ ಹೇಳಿದರು.

ಸ್ಕ್ರ್ಯಾಪ್ ಡೀಲ್

  • ಸಂಚಾರಕ್ಕೆ ಯೋಗ್ಯವಲ್ಲದ ಮತ್ತು ಮಾಲಿನ್ಯಕಾರಕವಾಗಿರುವ 15 ವರ್ಷ ಮತ್ತು ಅದಕ್ಕಿಂತ ಹಳೆಯ ವಾಹನಗಳನ್ನು ಸ್ಕ್ಯಾಪ್ ಗೆ ಹಾಕಬೇಕು ಎಂದು MoRTH ಹೇಳಿದೆ
  • ಸ್ಕ್ರ್ಯಾಪಿಂಗ್ ಪರಿಸರ ಸ್ನೇಹಿ ಆಗಿರಬೇಕು
  • ಆರ್ ವಿಎಸ್ ಎಫ್ ನಲ್ಲಿ ಸ್ಕ್ರ್ಯಾಪಿಂಗ್ ಮಾಡಬೇಕಾಗಿದೆ
  • ಭಾರತದಲ್ಲಿ 60 ಆರ್ ವಿಎಸ್ ಎಫ್ ಗಳಿದ್ದು, ಕರ್ನಾಟಕದಲ್ಲಿ ದೇವನಹಳ್ಳಿ ಕೇಂದ್ರ ಮೊದಲನೆಯದ್ದು.
  • ಬೆಂಗಳೂರು, ತುಮಕೂರು, ಕೊಪ್ಪಳದಲ್ಲಿ ಘಟಕ ಸ್ಥಾಪಿಸಲು 3 ಕಂಪನಿಗಳಿಗೆ ಸರ್ಕಾರ ಅನುಮತಿ.
  • ಸ್ಕ್ರ್ಯಾಪ್ ಮಾಡಲಾದ ವಾಹನ ಮಾಲೀಕರು ಡಿಸ್ಟ್ರಕ್ಷನ್ ಪ್ರಮಾಣಪತ್ರವನ್ನು ಪಡೆಯಬೇಕು, ಮತ್ತು ಅದನ್ನು ತೋರಿಸಿ ಹೊಸ ವಾಹನಗಳನ್ನು ಖರೀದಿಸುವಾಗ ರಿಯಾಯಿತಿ ಪಡೆಯಬಹುದು
  • ರಾಜ್ಯದಲ್ಲಿ ಸುಮಾರು 15 ಲಕ್ಷ ವಾಹನಗಳು ಸ್ಕ್ರ್ಯಾಪಿಂಗ್‌ಗೆ ಯೋಗ್ಯವಾಗಿವೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com