ಗುಂಡ್ಲುಪೇಟೆ: ಮಹಿಳೆ, ಇಬ್ಬರು ಮಕ್ಕಳು ಅನುಮಾನಾಸ್ಪದ ಸಾವು; ಪತಿಯಿಂದ ಕೊಲೆ ಶಂಕೆ, ಸ್ಥಳದಿಂದ ಪರಾರಿ!
ಕೌಟುಂಬಿಕ ಕಲಹದ ಹಿನ್ನಲೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹೊರ ವಲಯದಲ್ಲಿ ತಡರಾತ್ರಿ ನಡೆದಿದೆ.
Published: 15th September 2023 10:18 AM | Last Updated: 15th September 2023 03:04 PM | A+A A-

ಸಾಂದರ್ಭಿಕ ಚಿತ್ರ
ಚಾಮರಾಜನಗರ: ಕೌಟುಂಬಿಕ ಕಲಹದ ಹಿನ್ನಲೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹೊರ ವಲಯದಲ್ಲಿ ತಡರಾತ್ರಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಲಗಿರುವ ಸ್ಥಿತಿಯಲ್ಲಿ ಎಲ್ಲರ ಶವ ಪತ್ತೆಯಾಗಿದೆ. ಮೇಘಾ (24), ಪುನ್ವಿತಾ (6), ಮನ್ವಿತಾ (3) ಮೃತರು. ಮೂವರನ್ನೂ ಗಂಡನೇ ನೇಣು ಬಿಗಿದು ಗಂಡನೇ ಹತ್ಯೆಗೈದಿದ್ದಾನೆ ಎಂದು ಮೇಘಾ ಅವರ ಹೆತ್ತವರು ಆರೋಪಿಸಿದ್ದಾರೆ.
ಪತಿ ಧನಂಜಯ್ ಹಾಗೂ ಅತ್ತೆ ನಿರ್ಮಲಮ್ಮ ಮೃತ ಮೇಘಾಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದ್ದು, ಇದರಿಂದ ಬೇಸತ್ತ ಮೇಘ ತನ್ನ ಎರಡು ಮಕ್ಕಳೊಂದಿಗೆ ನೇಣಿಗೆ ಶರಣಾಗಿದ್ದಾರೆ ಎಂದು ತೆರಕಣಾಂಬಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಗುರುವಾರ ಬೆಳಗ್ಗೆಯೂ ಕೂಡ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸ್ಥಳಕ್ಕೆ ತೆರಕಣಾಂಬಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.