ಪರಿಸರ ಸ್ನೇಹಿ ಗಣಪನ ಮೂರ್ತಿಯನ್ನು ಪೂಜಿಸಿ ಈ ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸೋಣ ಅಲ್ಲವೇ?

ವಿವಿಧತೆಯಲ್ಲೂ ಏಕತೆಯನ್ನು ಹೊಂದಿರುವ ಈ ಭಾರತ ದೇಶದಲ್ಲಿ ಆಯಾಯಾ ಪ್ರದೇಶಗಳಿಗೆ ಅನುಗುಣವಾಗಿ ಗ್ರಾಮದೇವತೆ ಇಲ್ಲವೇ ದೇವರುಗಳು ಇದ್ದು ಅಲ್ಲಿಯ ರೀತಿ ರಿವಾಜುಗಳಿಗೆ ಅನುಗುಣವಾಗಿ ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸುವುದು ವಾಡಿಕೆ.
ಪರಿಸರ ಸ್ನೇಹಿ ಗಣಪ
ಪರಿಸರ ಸ್ನೇಹಿ ಗಣಪ
Updated on

ವಿವಿಧತೆಯಲ್ಲೂ ಏಕತೆಯನ್ನು ಹೊಂದಿರುವ ಈ ಭಾರತ ದೇಶದಲ್ಲಿ ಆಯಾಯಾ ಪ್ರದೇಶಗಳಿಗೆ ಅನುಗುಣವಾಗಿ ಗ್ರಾಮದೇವತೆ ಇಲ್ಲವೇ ದೇವರುಗಳು ಇದ್ದು ಅಲ್ಲಿಯ ರೀತಿ ರಿವಾಜುಗಳಿಗೆ ಅನುಗುಣವಾಗಿ ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸುವುದು ವಾಡಿಕೆ.

ಆದರೆ, ಕೇವಲ ಭಾರತವಷ್ಟೇ ಅಲ್ಲದೇ ಪ್ರಪಂಚದ ನೂರಾರು ರಾಷ್ಟ್ರಗಳಲ್ಲಿ ಸರ್ವೇಸಾಮಾನ್ಯವಾಗಿ ಪೂಜಿಸಲ್ಪಡುವ ಹಿಂದೂ ದೇವರು ಎಂದರೆ ಅದು ವಿಘ್ನವಿಶಾಶಕ ವಿಘ್ನೇಶ ಎಂದರೆ ಅತಿಶಯವಲ್ಲ. ಎಲ್ಲಾ ಸಭೆ ಸಮಾರಂಭಗಳಲ್ಲಿ ಮತ್ತು ಶುಭ ಕಾರ್ಯಕ್ರಮಗಳಲ್ಲಿ ಗಣೇಶನಿಗೆ ಮೊದಲ ಪೂಜೆ. ಹಾಗಾಗಿಯೇ ಪ್ರಪಂಚಾದ್ಯಂತ ಇರುವ ಸಮಸ್ತ ಹಿಂದೂಗಳ ವಾಹನಗಳಲ್ಲಿ ವಿನಾಯಕನ ವಿಗ್ರಹಗಳು ಸರ್ವೇ  ಸಾಮಾನ್ಯವಾಗಿದೆ. 

ಪುರಾಣಗಳ ಪ್ರಕಾರ ಗಣಪತಿ ಶಿವ ಪಾರ್ವತಿಯರ ಮಗ. ಅದದಲ್ಲೂ ಪಾರ್ವತಿಯ ಅಚ್ಚುಮೆಚ್ಚಿನ ಮುದ್ದು ಮಗ ಎಂದರೇ ಹೆಚ್ಚು ಸೂಕ್ತ. ಪಾರ್ವತಿ ತನ್ನ ಸ್ನಾನ ಚೂರ್ಣದಿಂದ ಗಣೇಶನನ್ನು ಸೃಷ್ಟಿಸಿ ತಾನು ಸ್ನಾನದಿಂದ ಹಿಂದುರುಗಿ ಬರುವವರೆಗೂ ಅಲ್ಲಿಯೇ ಕಾವಲು ಕಾಯಲು ಹೇಳಿ ಹೋಗಿದ್ದಾಗ ಅಲ್ಲಿಗೆ ಬಂದ ಪರಮೇಶ್ವರನನ್ನೂ ಗಣೇಶ ಒಳಗೆ ಬಿಡದಿದ್ದಾಗ ವಾದ ವಿವಾದ ನಡೆದು, ಕೋಪದಲ್ಲಿ ಶಿವ ತನ್ನ ತ್ರಿಶೂಲದಿಂದ ಗಣೇಶನ ಶಿರವನ್ನು ಕತ್ತರಿಸಿದಾಗ, ಆ ಪುಟ್ಟ ಬಾಲಕ ಆರ್ತನಾದವನ್ನು ಕೇಳಿ ಸ್ನಾನದಿಂದ ಹೊರಗೆ ಬಂದ ಪಾರ್ವತಿ ಶಿರಚ್ಛೇಧಿತನಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ತನ್ನ ಮಗ ಗಣೇಶನನ್ನು ನೋಡಿ ದುಃಖಿತಳಾಗಿ ಆತನನ್ನು ಬದುಕಿಸಿಕೊಡಲು ಪತಿ ಪರಮೇಶ್ವರನನ್ನು ಕೋರಿಕೊಂಡಾಗ, ಕ್ಷಣಿಕ ಕೋಪದಿಂದ ತಣ್ಣಗಾಗಿದ್ದ ಪರಶಿವನು, ಉತ್ತರ ದಿಕ್ಕಿನಲ್ಲಿ ಮಲಗಿರುವವರ ಶಿರವನ್ನು ತರಲು ತನ್ನ ಗಣಕ್ಕೆ ಹೇಳಿದಾಗ, ಉತ್ತರದಿಕ್ಕಿನಲ್ಲಿ ಮಲಗಿದ್ದ ಆನೆಯ ಶಿರವನ್ನು ತಂದಾಗ ಆ ಆನೆಯ ಶಿರವನ್ನು ಬಾಲಕ ಗಣೇಶನಿಗೆ ಜೋಡಿಸಿ ಜೀವವನ್ನು ಮರಳಿಸಿದ ಕತೆ ಎಲ್ಲರಿಗೂ ತಿಳಿಸಿರುವ ಸಂಗತಿಯಾಗಿದೆ.

ಪ್ರತೀ ವರ್ಷ ಬಾದ್ರಪದ ಮಾಸದ ಚೌತಿಯಂದು ಪ್ರಪಂಚಾದ್ಯಂತ ಅತ್ಯಂತ ಸಂಭ್ರಮ ಸಡಗರಗಳಿಂದ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಸ್ವಾತ್ರಂತ್ರ್ಯ ಸಮಯದಲ್ಲಿ ಬ್ರಿಟೀಷರ ವಿರುದ್ಧ ಭಾರತೀಯರನ್ನು ಒಗ್ಗೂಡಿಸಲು ಲೋಕಮಾನ್ಯ ತಿಲಕರು ಮನೆ ಮನೆಗಳಲ್ಲಿ ಆಚರಿಸುತ್ತಿದ್ದ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಆರಂಭಿಸಿದ ನಂತರವಂತೂ ದೇಶಾದ್ಯಾಂತ ಗಲ್ಲಿ ಗಲ್ಲಿಗಳಲ್ಲಿ ಬಗೆ ಬಗೆಯ ಕೋಟ್ಯಾಂತರ ಗಣಪತಿಮೂರ್ತಿಗಳನ್ನಿಟ್ಟು ಅನಂತ ಚತುರ್ದಶಿಯವರೆಗೂ ಭಕ್ತಿಯಿಂದ ಪೂಜಿಸಿ ನಂತರ ವಿಸರ್ಜಿಸುವ ಸಂಪ್ರದಾಯ ಎಲ್ಲೆಡೆಯಲ್ಲೂ ಜಾರಿಯಲ್ಲಿದೆ.

ಪರಿಸರ ಸ್ನೇಹಿ ಗಣಪನ ಮೂರ್ತಿ ಬಳಸಿ: ಸರ್ಕಾರ, ಇಲಾಖೆಗಳು, ಸಂಘ ಸಂಸ್ಥೆಗಳು ಎಷ್ಟೇ ಮನವಿ ಮಾಡಿಕೊಂಡು ಬಂದರೂ ನಾವು ಪರಿಸರ ಸ್ನೇಹಿ ಗಣಪನನ್ನು ಅಷ್ಟಾಗಿ ಪೂಜಿಸುತ್ತಿಲ್ಲ, ನಮ್ಮ ಮತ್ತು ಮುಂದಿನ ಜನಾಂಗದ ಉಳಿವಿಗೆ ಪರಿಸರ ಸ್ನೇಹಿ ಗಣಪನನ್ನು ತಂದು ಪೂಜಿಸುವುದು, ವಿಸರ್ಜಿಸುವುದು ಸೂಕ್ತ.

ಗಣೇಶನ ವಿಗ್ರಹದೊಂದಿಗೆ ಹೂವು ಮತ್ತು ಹಣ್ಣು ತರಕಾರಿ ಬೀಜಗಳನ್ನು ಬೆರಸಿ ಸಿದ್ಧ ಪಡಿಸುವ ಕಾರಣ, ಪೂಜೆಯ ನಂತರ ನೀರಿನಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಿ ಆ ತ್ಯಾಜ್ಯವನ್ನು ಒಂದು ಕುಂಡದಲ್ಲೋ ಇಲ್ಲವೇ ಮನೆಯ ಅಂಗಳದಲ್ಲೂ ಹಾಕಿದರೆ ಕೆಲವೇ ಕೆಲವೇ ದಿನ/ವಾರಗಳಲ್ಲಿ ಅದರಿಂದಲೇ ಸುಂದರವಾದ ಹೂ, ಹಣ್ಣು, ಇಲ್ಲವೇ ತರಕಾರಿ ಗಿಡ ಹುಟ್ಟಿ ಅದರಿಂದ ಫಲಪುಷ್ಪಗಳನ್ನು ಸವಿಯಬಹುದು.

ನಮ್ಮ ಹಿರಿಯರು ಉಳಿಸಿಕೊಟ್ಟ ಹೋದ ಈ ಸುಂದರವಾದ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಉಳಿಸಿ ಹೋಗುವ ಜವಾಬ್ಧಾರಿ ನಮ್ಮ ನಿಮ್ಮೆಲ್ಲದ್ದೇ ಆಗಿರುವ ಕಾರಣ, ಪರಿಸರ ಪ್ರೇಮಿಗಳಾದ ನಾವೆಲ್ಲರೂ ನಮ್ಮ ಕೈಯಿಂದಲೇ ಪರಿಸರ ಪ್ರೇಮ ಮೆರೆಯೋಣ ಅಲ್ಲವೇ?

ಬರಹ-ಶ್ರೀಕಂಠ ಬಾಳಗಂಚಿ

ಏನಂತೀರಿ.ಕಾಂ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com