ಹೈದರಾಬಾದ್- ಬೆಂಗಳೂರು ಸೇರಿ 9 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
11 ರಾಜ್ಯಗಳ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಸಂಪಕಿಸುವ 9 ವಂದೇ ಭಾರತ್ ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು.
Published: 24th September 2023 01:45 PM | Last Updated: 24th September 2023 01:45 PM | A+A A-

ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡುತ್ತಿರುವ ಪ್ರಧಾನಿ ಮೋದಿ.
ನವದೆಹಲಿ: 11 ರಾಜ್ಯಗಳ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಸಂಪಕಿಸುವ 9 ವಂದೇ ಭಾರತ್ ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು.
ವೀಡಿಯೊ ಕಾನ್ಫರೆನ್ಸ್ ಮೂಲಕ ರೈಲುಗಳಿಗೆ ಪ್ರಧಾನಿ ಮೋದಿಯವರು ಇಂದು ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿದ ಅವರು, "9 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಾಗಿದ್ದು, ಈ ರೈಲುಗಳು ರಾಜ್ಯಗಳ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಭಾರತದಾದ್ಯಂತ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
25 ವಂದೇ ಭಾರತ್ ರೈಲುಗಳು ಈಗಾಗಲೇ ಸಂಚರಿಸುತ್ತಿವೆ, ಈಗ ಅವುಗಳೊಂದಿಗೆ ಇನ್ನೂ ಒಂಬತ್ತುಗಳನ್ನು ಸೇರಿಸಲಾಗಿದೆ. ವಂದೇ ಭಾರತ್ ರೈಲುಗಳ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ. 1,11,00,000 ಕ್ಕೂ ಹೆಚ್ಚು ಪ್ರಯಾಣಿಕರು ಈಗಾಗಲೇ ಈ ರೈಲುಗಳಲ್ಲಿ ಪ್ರಯಾಣಿಸಿದ್ದಾರೆಂದು ತಿಳಿಸಿದರು.
ಇದರ ವೇಗ ವೇಗ ಮೂಲಸೌಕರ್ಯ ಅಭಿವೃದ್ಧಿಯು 140 ಕೋಟಿ ಭಾರತೀಯರ ತಲುಪಿತ್ತಿದೆ. ಇಂದು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್‌ನ ಜನರು ವಂದೇ ಭಾರತ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶದ ಹೊಸ ಶಕ್ತಿಯನ್ನು ಬಿಂಬಿಸುತ್ತವೆ.
ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದ ಹಲವಾರು ರೈಲು ನಿಲ್ದಾಣಗಳಿವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ... ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳು ಮುಂದುವರೆದಿದೆ. 'ಆಜಾದಿ ಕಾ ಅಮೃತ್ ಕಾಲ'ದಲ್ಲಿ ಅಭಿವೃದ್ಧಿಪಡಿಸುವ ಅಮೃತ್ ಭಾರತ್ ಸ್ಟೇ|ನ್ ಎಂದು ಕರೆಯಲಾಗುವುದು. 11 ರಾಜ್ಯಗಳಲ್ಲಿ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡಲು ಒಂಬತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಈ ಒಂಬತ್ತು ರೈಲುಗಳು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ್, ಪಶ್ಚಿಮಬಂಗಾಳ, ಕೇರಳ, ಒಡಿಸಾ, ಜಾರ್ಖಂಡ್ ಹಾಗೂ ಗುಜರಾತ್ ನಡುವೆ ವೇಗದ ಸಂಪರ್ಕ ಒದಗಿಸಲಿದೆ.
ಈ ರೈಲುಗಳು ಉದಯಪುರ-ಜೈಪುರ, ತಿರುನೆಲ್ವೆಲಿ-ಮಧುರೈ-ಚೆನ್ನೈ, ಹೈದರಾಬಾದ್-ಬೆಂಗಳೂರು, ವಿಜಯವಾಡ-ಚೆನ್ನೈ (ರೇಣಿಗುಂಟ ಮೂಲಕ), ಪಾಟ್ನಾ - ಹೌರಾ, ಕಾಸರಗೋಡು-ತಿರುವನಂತಪುರ, ರೂರ್ಕೆಲಾ-ಭುವನೇಶ್ವರ-ಪುರಿ, ರಾಂಚಿ-ಹೌರಾ ಹಾಗೂ ಜಾಮ್ನಗರ್-ಅಹ್ಮದಾಬಾದ್ ನಡುವೆ ಸಂಚರಿಸಲಿದೆ.
ಈ ರೈಲುಗಳು ದೇಶಾದ್ಯಂತ ಸಂಪರ್ಕವನ್ನು ಸುಧಾರಿಸುವ ಹಾಗೂ ರೈಲು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯವನ್ನು ಒದಗಿಸುವ ಪ್ರಧಾನಿ ಅವರ ಕನಸನ್ನು ನನಸಾಗಿಸುವತ್ತ ಒಂದು ಹೆಜ್ಜೆಯಾಗಿದೆ.
ವಂದೇ ಭಾರತ್ ರೈಲುಗಳು ತಮ್ಮ ಕಾರ್ಯಾಚರಣೆಯ ಮಾರ್ಗಗಳಲ್ಲಿ ಅತಿ ವೇಗದಿಂದ ಸಂಚರಿಸಲಿದೆ. ಅಲ್ಲದೆ, ಪ್ರಯಾಣಿಕರ ಸಾಕಷ್ಟು ಸಮಯವನ್ನು ಉಳಿತಾಯ ಮಾಡಲಿದೆ.
ರೂರ್ಕೆಲಾ-ಭುವನೇಶ್ವರ-ಪುರಿ ಹಾಗೂ ಕಾಸರಗೋಡು-ತಿರುವನಂತಪುರದ ನಡುವೆ ಈಗ ಸಂಚರಿಸುತ್ತಿರುವ ವೇಗದ ರೈಲುಗಳಿಗೆ ಹೋಲಿಸಿದರೆ ವಂದೇ ಭಾರತ್ ರೈಲುಗಳು ಆಯಾ ಸ್ಥಳಗಳ ನಡುವಿನ ಪ್ರಯಾಣ ಸಮಯವನ್ನು ಸುಮಾರು 3 ಗಂಟೆಗಳಷ್ಟು ಕಡಿತಗೊಳಿಸಲಿದೆ. ಹೈದರಾಬಾದ್-ಬೆಂಗಳೂರು ನಡುವೆ 2.5 ಗಂಟೆಗಳಿಗಿಂತ ಅಧಿಕ, ತಿರುನೆಲ್ವೇಲಿ-ಮಧುರೈ-ಚೆನ್ನೈ ನಡುವೆ 2 ಗಂಟೆಗೂ ಅಧಿಕ ಸಮಯ ಉಳಿತಾಯವಾಗಲಿದೆ. ರಾಂಚಿ-ಹೌರಾ, ಪಾಟ್ನಾ -ಹೌರಾ ಹಾಗೂ ಜಾಮ್ನಗರ್-ಅಹ್ಮದಾಬಾದ್ ನಡುವಿನ ಪ್ರಯಾಣದ ಸಮಯ ಈ ಸ್ಥಳಗಳ ನಡುವೆ ಸದ್ಯ ಸಂಚಾರ ನಡೆಸುತ್ತಿರುವ ರೈಲುಗಳಿಗೆ ಹೋಲಿಸಿದರೆ ಸುಮಾರು 1 ಗಂಟೆ ಕಡಿಮೆಯಾಗಲಿದೆ.
ಉದಯಪುರ-ಜೈಪುರ ನಡುವಿನ ಸಮಯ ಅರ್ಧ ಗಂಟೆ ಕಡಿಮೆಯಾಗಲಿದೆ. ರೂರ್ಕೆಲಾ-ಭುವನೇಶ್ವರ-ಪುರಿ ಹಾಗೂ ತಿರುನಲ್ವೇಲಿ-ಮಧುರೈ-ಚೆನೈ ರೈಲುಗಳು ಪುರಿ ಹಾಗೂ ಮಧುರೈಯ ಪ್ರಮುಖ ಧಾರ್ಮಿಕ ಪಟ್ಟಣಗಳನ್ನು ಸಂಪರ್ಕಿಸಲಿದೆ. ಇದಲ್ಲದೆ, ವಿಜಯವಾಡ-ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ರೇಣಿಗುಂಟಾ ಮಾರ್ಗವಾಗಿ ಪ್ರಮುಖ ಯಾತ್ರಾ ಸ್ಥಳವಾದ ತಿರುಪತಿಗೆ ಸಂಪರ್ಕ ಕಲ್ಪಿಸುತ್ತದೆ.