ಹಿಮಾಲಯ ಕಂಪನಿ ವಿರುದ್ಧ ಪೋಸ್ಟ್: ಕೋರ್ಟ್ ಆದೇಶದ ನಂತರ ವೈದ್ಯ ಸಿರಿಯಾಕ್ ಖಾತೆ ನಿರ್ಬಂಧಿಸಿದ X ಕಾರ್ಪ್

ಕೇರಳ ಮೂಲದ ಹೆಪಟಾಲಜಿಸ್ಟ್ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರ ಖಾತೆ ನಿರ್ಬಂಧಿಸುವಂತೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸಾಮಾಜಿಕ ಮಾಧ್ಯಮ ಎಕ್ಸ್ ಗೆ ಸೂಚಿಸಿದ ಹಿನ್ನೆಲೆಯಲ್ಲಿ ವೈದ್ಯರ ಖಾತೆಯನ್ನು ನಿರ್ಬಂಧಿಸಲಾಗಿದೆ.
ವೈದ್ಯ ಸಿರಿಯಾಕ್
ವೈದ್ಯ ಸಿರಿಯಾಕ್

ಬೆಂಗಳೂರು/ಕೊಚ್ಚಿ: ಹಿಮಾಲಯ ವೆಲ್‌ನೆಸ್ ಕಂಪನಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದ ಕೇರಳ ಮೂಲದ ಹೆಪಟಾಲಜಿಸ್ಟ್ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರ ಖಾತೆ ನಿರ್ಬಂಧಿಸುವಂತೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸಾಮಾಜಿಕ ಮಾಧ್ಯಮ ಎಕ್ಸ್ ಗೆ ಸೂಚಿಸಿದ ಹಿನ್ನೆಲೆಯಲ್ಲಿ ವೈದ್ಯರ ಖಾತೆಯನ್ನು ನಿರ್ಬಂಧಿಸಲಾಗಿದೆ.

ಕಂಪನಿ ಅಥವಾ ಅದರ ಉತ್ಪನ್ನಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡದಂತೆ, ಪ್ರಕಟಿಸದಂತೆ ಅಥವಾ ಮರು ಪೋಸ್ಟ್ ಮಾಡದಂತೆ ವೈದ್ಯರ ಖಾತೆಯನ್ನು ಎಕ್ಸ್ ನಿರ್ಬಂಧಿಸಿದೆ.

ಮುಂದಿನ ವಿಚಾರಣೆಯ ದಿನಾಂಕವಾದ ಜನವರಿ 5, 2024 ರವರೆಗೆ ಡಾ. ಸಿರಿಯಾಕ್ ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಅಮಾನತುಗೊಳಿಸಲು/ನಿರ್ಬಂಧಿಸಲು X Corp ಗೆ ಕೋರ್ಟ್ ನಿರ್ದೇಶನ ನೀಡಿತ್ತು.

ಡಾ. ಸಿರಿಯಾಕ್ ಅವರು ತನ್ನ ಉತ್ಪನ್ನಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಮತ್ತು ವಸ್ತುಗಳನ್ನು ಪೋಸ್ಟ್ ಮಾಡುತ್ತಿದ್ದು, ಇದರಿಂದಾಗಿ ತನ್ನ ವ್ಯವಹಾರ ಕುಸಿದಿದೆ ಎಂದು ಆರೋಪಿಸಿ ಹಿಮಾಲಯ ವೆಲ್ ನೆಸ್ ಕಂಪನಿ ವೈದ್ಯರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com