ಡೊನಾಲ್ಡ್ ಟ್ರಂಪ್ ಮಗನ X ಖಾತೆ ಹ್ಯಾಕ್, ತಂದೆ ಸಾವನ್ನಪ್ಪಿದ್ದಾರೆಂದು ಟ್ವೀಟ್!

ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ( ಈ ಹಿಂದಿನ ಟ್ವಿಟರ್)  ಎಕ್ಸ್   ಖಾತೆಯನ್ನು ಬುಧವಾರ ಹ್ಯಾಕ್ ಮಾಡುವ ಮೂಲಕ ಅವರ ತಂದೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾವನ್ನಪ್ಪಿರುವುದಾಗಿ ತಪ್ಪು ಸಂದೇಶ ಸೇರಿದಂತೆ ಹಲವು ಅಪಾಧಿತ ಟ್ವೀಟ್ ಮಾಡಲಾಗಿದೆ. 
ಜ್ಯೂನಿಯರ್ ಡೊನಾಲ್ಡ್ ಎಕ್ಸ್ ಖಾತೆ
ಜ್ಯೂನಿಯರ್ ಡೊನಾಲ್ಡ್ ಎಕ್ಸ್ ಖಾತೆ
Updated on: 

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ( ಈ ಹಿಂದಿನ ಟ್ವಿಟರ್)  ಎಕ್ಸ್   ಖಾತೆಯನ್ನು ಬುಧವಾರ ಹ್ಯಾಕ್ ಮಾಡುವ ಮೂಲಕ ಅವರ ತಂದೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾವನ್ನಪ್ಪಿರುವುದಾಗಿ ತಪ್ಪು ಸಂದೇಶ ಸೇರಿದಂತೆ ಹಲವು ಅಪಾಧಿತ ಟ್ವೀಟ್ ಮಾಡಲಾಗಿದೆ. '

'ನನ್ನ ತಂದೆ ಡೊನಾಲ್ಡ್ ಟ್ರಂಪ್ ನಿಧನರಾಗಿದ್ದಾರೆ ಎಂದು ಘೋಷಿಸಲು ನನಗೆ ದುಃಖವಾಗುತ್ತಿದೆ. ನಾನು 2024 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ ಎಂದು ಜ್ಯೂನಿಯರ್ ಡೊನಾಲ್ಡ್ ಟ್ರಂಪ್ ಅವರ ಎಕ್ಸ್ ಖಾತೆಯಲ್ಲಿ ಬೆಳಗ್ಗೆ 8-25 ರ ಸುಮಾರಿನಲ್ಲಿ ಫೋಸ್ಟ್ ಮಾಡಲಾಗಿತ್ತು. 

 ಇದರ ಜೊತೆಗೆ ಹಲವು ಅಸಂಬದ್ಧ ಮತ್ತು ಅಸಭ್ಯ ಟ್ವೀಟ್ ಗಳನ್ನು ಸಹ ಮಾಡಲಾಗಿತ್ತು. ಖಾತೆ ಹ್ಯಾಕ್ ಆಗಿದೆ ಎಂಬುದು ಗಮನಕ್ಕೆ ಬಂದ ನಂತರ ಟ್ವೀಟ್ ಗಳನ್ನು ಡಿಲೀಟ್ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com