ಬೆಂಗಳೂರು: ತುರ್ತು ಸಹಾಯವಾಣಿ 112 ಗೆ 'Crank calls' ಹೆಚ್ಚಳ

ಪೊಲೀಸ್ ಕಮಿಷನರ್ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ 112 ತುರ್ತು ಸಹಾಯವಾಣಿಗೆ ಈ ವರ್ಷ ಬಂದ ಕ್ರ್ಯಾಂಕ್ ಕರೆಗಳಲ್ಲಿ ಗಣನೀಯ ಏರಿಕೆ ಕಂಡಿದೆ.
ತುರ್ತು ಸಹಾಯವಾಣಿ ಕೇಂದ್ರ
ತುರ್ತು ಸಹಾಯವಾಣಿ ಕೇಂದ್ರ

ಬೆಂಗಳೂರು: ಪೊಲೀಸ್ ಕಮಿಷನರ್ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ 112 ತುರ್ತು ಸಹಾಯವಾಣಿಗೆ ಈ ವರ್ಷ ಬಂದ ಕ್ರ್ಯಾಂಕ್ ಕರೆಗಳಲ್ಲಿ ಗಣನೀಯ ಏರಿಕೆ ಕಂಡಿದೆ.

ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಬಿಡುಗಡೆ ಮಾಡಿದ ಅಂಕಿಅಂಶಗಳು ಜನವರಿಯಿಂದ ಮಾರ್ಚ್ 2024 ರವರೆಗೆ 669 ಕ್ಯಾಂಕ್ ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 455 ಕ್ರ್ಯಾಂಕ್ ಕರೆಗಳು ಬಂದಿದ್ದವು. 2022 ಈ ಪ್ರಮಾಣ 446 ಇತ್ತು. ಸಾರ್ವಜನಿಕರಿಂದ ದಿನಕ್ಕೆ ಸರಾಸರಿ 800 ರಿಂದ 850 ಕ್ಯಾಂಕ್ ಕರೆಗಳನ್ನು ಸ್ವೀಕರಿಸಲಾಗಿದೆ.

ಇಷ್ಟಕ್ಕೂ ಏನಿದು ಕ್ಯಾಂಕ್ ಕಾಲ್?

ಕ್ರಾಂಕ್ ಕರೆಗಳು ಸಾಮಾನ್ಯ ದೂರಿನ ಕರೆಗಳಿಗಿಂತ ಭಿನ್ನವಾಗಿದ್ದು, ಟೈಮ್ ಪಾಸ್ ಮಾಡಲು ಅಥವಾ ಮೋಜಿಗಾಗಿ ಕೆಲ ಕಿಡಿಗೇಡಿಗಳು ತುರ್ತು ಸಹಾಯವಾಣಿಗೆ ಕರೆ ಮಾಡಿ ಸುಳ್ಳು ಸುಳ್ಳು ಮಾಹಿತಿ ನೀಡುತ್ತಾರೆ. ಇಂತಹ ಚೇಷ್ಟೆಯ ಕರೆಗಳಿಂದ ಇಲಾಖೆಯ ಅಮೂಲ್ಯ ಸಮಯ ಮತ್ತು ಸಂಪನ್ಮೂಲ ಹಾಳಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂಯೋಜಿತ ಸೇವಾ ಸಂಸ್ಥೆ, ಭಾರತ್ ವಿಕಾಸ್ ಗ್ರೂಪ್, ಅದರ 180 ಸಿಬ್ಬಂದಿಗಳೊಂದಿಗೆ, ಅವರಲ್ಲಿ ಮೂರನೇ ಎರಡರಷ್ಟು ಮಹಿಳೆಯರು, ಟೋಲ್-ಫ್ರೀ ಸಂಖ್ಯೆ 112 ಗೆ ಮೂರು ಪಾಳಿಗಳಲ್ಲಿ 24x7 ನಲ್ಲಿ ಇಲ್ಲಿ ಕಾರ್ಯ ನಿರ್ವಹಿಸುತ್ತಾ ಕರೆಗಳಿಗೆ ಉತ್ತರಿಸುತ್ತಾರೆ.

ತುರ್ತು ಸಹಾಯವಾಣಿ ಕೇಂದ್ರ
ಬೆಂಗಳೂರಿನಲ್ಲಿ ನಕಲಿ ಅಂತರಾಷ್ಟ್ರೀಯ ಕಾಲ್ ಸೆಂಟರ್ ಪತ್ತೆ, 11 ಬಂಧನ

ಈ ಬಗ್ಗೆ ಮಾತನಾಡಿರುವ ಸಿಬ್ಬಂದಿಯೊಬ್ಬರು, "ಸುಮಾರು 99% ಕ್ರ್ಯಾಂಕ್ ಕರೆ ಮಾಡುವವರು ಪುರುಷರು, ಅವರಲ್ಲಿ ಕೆಲವರು ಕುಡಿದಿರುತ್ತಾರೆ. ಇಂತಹ ಕರೆಗಳನ್ನು ಮಾಡುವ ಮಹಿಳೆಯರು ಮಾತ್ರ ಮಾನಸಿಕವಾಗಿ ತೊಂದರೆಗೀಡಾಗಿರುತ್ತಾರೆ. ಓರ್ವ ಪುರುಷ ಕಾಲರ್ ಒಂದೇ ದಿನ ಬರೊಬ್ಬರಿ 60 ಬಾರಿ ಇಂತಹ ಕ್ಯಾಂಕ್ ಕರೆ ಮಾಡಿರುವ ಉದಾಹರಣೆ ನೋಡಿದ್ದೇವೆ. ಈ ರೀತಿ ಕ್ಯಾಂಕ್ ಕರೆ ಮಾಡುವ ಪುರುಷರು ಕಚೇರಿಯಲ್ಲಿ ಕರೆಗಳನ್ನು ನಿರ್ವಹಿಸುವ ಮಹಿಳೆಯರೊಂದಿಗೆ ಮಾತನಾಡಲೆಂದೇ ಕರೆ ಮಾಡುತ್ತಾರೆ.

ಮಹಿಳಾ ಸಿಬ್ಬಂದಿಗಳು ಕೆಲವೊಮ್ಮೆ ಅಸಭ್ಯ ಮಾತು ಅಥವಾ ಹೇಳಲಾಗದ ನಿಂದನೆಗಳನ್ನು ಸ್ವೀಕರಿಸುತ್ತಾರೆ. ಒಂದು ವೇಳೆ ಈ ಕರೆಗಳನ್ನು ಪುರುಷ ಸಿಬ್ಬಂದಿಗಳು ಸ್ವೀಕರಿಸಿದರೆ ಕೂಡಲೇ ಧ್ವನಿ ಕೇಳುತ್ತಲೇ ಕರೆ ಕಡಿತ ಮಾಡುತ್ತಾರೆ ಎಂದು ಹೇಳಿದ್ದಾರೆ.

ನಿರಂತರ ಕ್ರಾಂಕ್ ಕರೆಗಳ ಹೊರತಾಗಿಯೂ ನಮ್ಮ ಸಿಬ್ಬಂದಿ ತಮ್ಮ ಕೆಲಸದಲ್ಲಿ ಹಿಂದೆ ಬೀಳುವುದಿಲ್ಲ. ಹಲವು ಕ್ರಾಂಕ್ ಕರೆಗಳು ಬರುತ್ತಿದ್ದರೂ ಅವುಗಳಲ್ಲಿ ಕೆಲವಾದರೂ ನೈಜಕರೆಗಳಾಗಿರುತ್ತವೆ. ಈ ನೈಜ ಕರೆಗಳಿಗಾಗಿ ನಾವು ಕೆಲಸ ಮಾಡುತ್ತೇವೆ. ನಿಜವಾದ ತುರ್ತುಸ್ಥಿತಿಯಿಂದ ಕರೆ ಮಾಡುವವರಿಗಾಗಿ, ಯಾವುದೇ ಸಂಖ್ಯೆಯನ್ನು ನಿರ್ಬಂಧಿಸಲಾಗಿಲ್ಲ. ಪ್ರತಿ ಕರೆಗೆ ಉತ್ತರಿಸಬೇಕು. ಅಪರಾಧಗಳು ಸಂಭವಿಸಿದಾಗ ಸಂಜೆ 6.30 ರಿಂದ ಮಧ್ಯರಾತ್ರಿ 1 ಗಂಟೆಯ ನಡುವೆ ಕರೆಗಳು ಹೆಚ್ಚಾಗುತ್ತವೆ ಎಂದು ಇನ್ನೊಂದು ಮೂಲಗಳು ತಿಳಿಸಿವೆ.

ತುರ್ತು ಸಹಾಯವಾಣಿ ಕೇಂದ್ರ
ಇದು ಮತ್ತೊಂದು ರೀತಿಯ ಸೈಬರ್ ವಂಚನೆ: ಸಂಚಾರ ನಿಯಮ ಉಲ್ಲಂಘನೆ ಹೆಸರಿನಲ್ಲಿ ಅಮಾಯಕರಿಂದ ಸುಲಿಗೆ!

ನೈಜ ಕರೆಗಳು ಬಂದಾಗ ದೂರಿನ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ಎಚ್ಚರಿಕೆ ನೀಡಲಾಗುತ್ತದೆ ಮತ್ತು ಸಣ್ಣ ಸಮಸ್ಯೆಗಳಿದ್ದರೂ ಹೊಯ್ಸಳ ತಂಡವು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡುವಂತೆ ಕೇಳಿಕೊಳ್ಳಲಾಗುತ್ತದೆ. ದಂಪತಿಗಳ ನಡುವೆ ಅಥವಾ ನೆರೆಹೊರೆಯವರ ನಡುವಿನ ಸಣ್ಣ ವಾದವು ದೊಡ್ಡ ಅಪರಾಧದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ, ನಾವು ಎಲ್ಲವನ್ನೂ ಗಂಭೀರವಾಗಿ ಪರಿಗಣಿಸುತ್ತೇವೆ.

ಚಿತ್ರ-ವಿಚಿತ್ರ ಕರೆಗಳು

ಸಹಾಯವಾಣಿಗೆ ದೂರು ನೀಡಲು ಚಿತ್ರ ವಿಚಿತ್ರ ಕರೆಗಳು ಬರುತ್ತವೆ. ಒಮ್ಮೆ ಕರೆ ಮಾಡಿದವರು ನೆರೆಹೊರೆಯವರು ಧೂಮಪಾನ ಮಾಡುತ್ತಿದ್ದಾರೆ ಎಂದು ದೂರು ನೀಡುತ್ತಾರೆ. ಇನ್ನೊಬ್ಬರು ತಮ್ಮ ಮನೆಯ ಮುಂದೆ ಕಸವನ್ನು ಸುರಿದವರ ಬಗ್ಗೆ ದೂರು ನೀಡಲು ಕರೆ ಮಾಡಿರುತ್ತಾರೆ. ಇವೂ ಕೂಡ ಮುಖ್ಯವೇ.. ಇಂತಹ ದೂರುಗಳು ಪಬ್ಲಿಕ್ ನ್ಯೂಸೆನ್ಸ್ (public nuisance) ಅಡಿಯಲ್ಲಿ ಬರುತ್ತವೆ ಎಂದು ಹೇಳಿದರು.

ಕ್ರಾಂಕ್ ಕರೆ ನಿಯಂತ್ರಣಕ್ಕೆ ಕ್ರಮ: ಪೊಲೀಸ್ ಆಯುಕ್ತ ಬಿ.ದಯಾನಂದ

ಭಾರೀ ಪ್ರಮಾಣದಲ್ಲಿ ಕ್ರ್ಯಾಂಕ್ ಕರೆಗಳು ಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಆಯುಕ್ತ ಬಿ.ದಯಾನಂದ, 'ಇಂತಹ ಕರೆಗಳು ಅನಿವಾರ್ಯ. ಪ್ರತಿ ಕರೆಗೂ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಸರಳವಾಗಿ ಕರೆಗಳನ್ನು ಮಾಡುವ ಪುನರಾವರ್ತಿತ ಕರೆ ಮಾಡುವವರನ್ನು ಬ್ಲಾಕ್ ಮಾಡಲು ನಮ್ಮ ಕೈಲಾದಷ್ಟು ಕ್ರಮ ಕೈಗೊಂಡಿದ್ದೇವೆ. ಕರೆಗಳನ್ನು ತೆಗೆದುಕೊಳ್ಳುವವರೂ ಈಗ ಅವುಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಇಲ್ಲಿಯ ಕಾಲ್ ಸೆಂಟರ್‌ನಲ್ಲಿ ಬೆಂಗಳೂರಿಗೆ ಸಂಬಂಧಿಸಿದ ಕರೆಗಳು ಮಾತ್ರ ಬರುವ ಜಿಯೋ ಫೆನ್ಸಿಂಗ್ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ ಎಂದು ಅವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com