ವಿಜಯಪುರ: ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ, ಬೆಳೆ ನಾಶ

ವಿಜಯಪುರ ಜಿಲ್ಲೆಯ ಬಹುತೇಕ ಕಡೆ ಬಿಸಿಲಿನ ಝಳ ಹೆಚ್ಚಿರುವ ಬೆನ್ನಲ್ಲೇ, ವಿಜಯಪುರದ ಕೆಲ ಗ್ರಾಮಗಳಲ್ಲಿ ಶನಿವಾರ ಸಂಜೆ ಬಿರುಸಿನ ಗಾಳಿ ಸಹಿತ ಮಳೆಯಾಗಿದ್ದು, ಬೆಳೆದ ಬೆಳೆ ನಾಶವಾಗಿದ್ದು, ಜಾನುವಾರುಗಳು ಬಲಿಯಾಗಿವೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸುರಿದ ಮಳೆ ಮತ್ತು ಗಾಳಿಗೆ ರೈತರೊಬ್ಬರ ಬಾಳೆ ಗಿಡಗಳು ನಾಶವಾಗಿವೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸುರಿದ ಮಳೆ ಮತ್ತು ಗಾಳಿಗೆ ರೈತರೊಬ್ಬರ ಬಾಳೆ ಗಿಡಗಳು ನಾಶವಾಗಿವೆ.
Updated on

ವಿಜಯಪುರ: ಜಿಲ್ಲೆಯ ಬಹುತೇಕ ಕಡೆ ಬಿಸಿಲಿನ ಝಳ ಹೆಚ್ಚಿರುವ ಬೆನ್ನಲ್ಲೇ, ವಿಜಯಪುರದ ಕೆಲ ಗ್ರಾಮಗಳಲ್ಲಿ ಶನಿವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಬೆಳೆದ ಬೆಳೆ ನಾಶವಾಗಿದ್ದು, ಜಾನುವಾರುಗಳು ಬಲಿಯಾಗಿವೆ.

ಮಳೆಗೆ ರೈತ ಮುರುಗೆಪ್ಪ ಚೌಗಲಾ ಎಂಬುವವರ ಸುಮಾರು ಒಂದು ಎಕರೆ ಜಮೀನಿನಲ್ಲಿದ್ದ ಸುಮಾರು 100 ಬಾಳೆ ಗಿಡಗಳು ನಾಶವಾಗಿವೆ. ಬರದಲ್ಲಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ರೈತ, ಇದೀಗ ಬೆಳೆ ಹಾನಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಡಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಮುರುಗೆಪ್ಪ ಅವರ ತೋಟವಿದ್ದು, ಸುಮಾರು 2 ಲಕ್ಷ ಮೌಲ್ಯದ ಬಾಳೆ ತೋಟವನ್ನು ಕಳೆದುಕೊಂಡಿದ್ದಾರೆ.

ಇಂಡಿ ತಾಲೂಕಿನ ಹಲಗುಣಕಿ ಗ್ರಾಮದಲ್ಲಿ ಸುಮಾರು 60 ಮರಗಳು, ಕೆಲವು ವಿದ್ಯುತ್ ಕಂಬಗಳು ಧರೆಗುರುಳಿವೆ. ಗ್ರಾಮದಲ್ಲಿ ಸಿಡಿಲು ಬಡಿದು ರೈತನೊಬ್ಬ ತನ್ನ ಎರಡು ಜಾನುವಾರುಗಳನ್ನು ಕಳೆದುಕೊಂಡಿದ್ದಾನೆ. ಮಳೆಯಿಂದಾಗಿ ರೈತರ ನಿಂಬೆ ತೋಟಗಳೂ ಹಾನಿಗೀಡಾಗಿವೆ. ಮಳೆಯಿಂದ ಆಗಿರುವ ಒಟ್ಟು ನಷ್ಟದ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ನಡೆಸುತ್ತಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸುರಿದ ಮಳೆ ಮತ್ತು ಗಾಳಿಗೆ ರೈತರೊಬ್ಬರ ಬಾಳೆ ಗಿಡಗಳು ನಾಶವಾಗಿವೆ.
ಕಲಬುರಗಿ: ಬಿಸಿಲ ಝಳಕ್ಕೆ ಬಸವಳಿದ ಜನರು, 40 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸುರಿದ ಮಳೆ ಮತ್ತು ಗಾಳಿಗೆ ಕಷ್ಟಪಟ್ಟು ಉಳಿಸಿಕೊಂಡಿದ್ದ ರೈತರ ಬೆಳೆ ಹಾನಿ ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com