ಜಾಗತಿಕ ಭಾಷೆಯಾಗಿ 'ಸಿರಿಗನ್ನಡ': ವ್ಯಾಟಿಕನ್ ಮಾಧ್ಯಮಕ್ಕೆ 53ನೇ ಭಾಷೆಯಾಗಿ ಕನ್ನಡ ಸೇರ್ಪಡೆ!

ವ್ಯಾಟಿಕನ್ ರೇಡಿಯೋ-ವ್ಯಾಟಿಕನ್ ನ್ಯೂಸ್ ಗೆ 53ನೇ ಭಾಷೆಯಾಗಿ ಕನ್ನಡ ಭಾಷೆಯು ಸೇರ್ಪಡೆಗೊಂಡಿದೆ. ಮಂಗಳವಾರದಿಂದ, ವ್ಯಾಟಿಕನ್ ಸುದ್ದಿತಾಣವು ಕನ್ನಡ ಭಾಷೆಯಲ್ಲೂ ಮೂಡಿ ಬರಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು : ಕನ್ನಡ ಈಗ ಜಾಗತಿಕ ಭಾಷೆಯಾಗಿದೆ, ವ್ಯಾಟಿಕನ್ ರೇಡಿಯೋ-ವ್ಯಾಟಿಕನ್ ನ್ಯೂಸ್ ಗೆ 53ನೇ ಭಾಷೆಯಾಗಿ ಕನ್ನಡ ಭಾಷೆಯು ಸೇರ್ಪಡೆಗೊಂಡಿದೆ. ಮಂಗಳವಾರದಿಂದ, ವ್ಯಾಟಿಕನ್ ಸುದ್ದಿತಾಣವು ಕನ್ನಡ ಭಾಷೆಯಲ್ಲೂ ಮೂಡಿ ಬರಲಿದೆ. ವ್ಯಾಟಿಕನ್ನಿನ ಸಂವಹನ ಪೀಠ ಹಾಗೂ ಬೆಂಗಳೂರು ಮಹಾಧರ್ಮಕ್ಷೇತ್ರದ ಸಹಯೋಗದಲ್ಲಿ ಈ ಬೆಳವಣಿಗೆ ನಡೆದಿದೆ.

ವ್ಯಾಟಿಕನ್ ಸುದ್ದಿತಾಣದ ಸುದ್ದಿಗಳು ಕನ್ನಡದಲ್ಲಿ ಆರಂಭವಾಗುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಕರ್ನಾಟಕದ ಧರ್ಮಸಭೆಗೆ ವಿಶ್ವಗುರುಗಳ, ಧರ್ಮಸಭೆಯ ಹಾಗೂ ಜಾಗತಿಕ ವಿದ್ಯಾಮಾನಗಳ ಸುದ್ದಿಗಳು ಕನ್ನಡದಲ್ಲಿ ದೊರಕಿರುವುದು ಅದ್ಭುತವಾಗಿದೆ, ಮಾತ್ರವಲ್ಲದೆ ಅತೀ ಮುಖ್ಯವೂ ಆಗಿದೆ. ಧರ್ಮಸಭೆಯನ್ನು ಪ್ರಪಂಚದ ಎಲ್ಲಾ ಗಡಿಗಳಿಗೂ ವಿಸ್ತರಿಸುತ್ತಿರುವ ಪೋಪ್ ಫ್ರಾನ್ಸಿಸರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬೆಂಗಳೂರಿನ ಮಹಾಧರ್ಮಾಧ್ಯಕ್ಷರಾದ ಡಾ. ಪೀಟರ್ ಮಚಾದೊ ಹೇಳಿದ್ದಾರೆ.

ಈ ಯೋಜನೆಗೆ ಸುಮಾರು 24 ತಿಂಗಳುಗಳ ಕಾಲ ಸಿದ್ಧತೆಗಳು ನಡೆದವು. ಕಳೆದ ಮೂರು ತಿಂಗಳು ಅತಿ ನಿರ್ಣಾಯಕವಾಗಿತ್ತು, ಅಂತಿಮವಾಗಿ ಮಂಗಳವಾರ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು. ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾಡೊ ಮಾತನಾಡಿ, ವ್ಯಾಟಿಕನ್ ಕನ್ನಡವನ್ನು ತನ್ನ ಭಾಷೆಗಳಲ್ಲಿ ಒಂದಾಗಿ ಗುರುತಿಸಿರುವುದು ನಮಗೆ ತುಂಬಾ ಸಂತೋಷ ತಂದಿದೆ. ಇದು ಕರ್ನಾಟಕದ ಜನತೆಗೆ ಉಪಯೋಗವಾಗಲಿದೆ. ಇಲ್ಲಿಯವರೆಗೆ ವ್ಯಾಟಿಕನ್ ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಪ್ರಸಾರ ಮಾಡುತ್ತಿತ್ತು. ಸಾಮಾನ್ಯ ಸರ್ಕಾರಿ ಚಾನೆಲ್‌ಗಳಿಗಿಂತ ಇಲ್ಲಿ ಮಾಹಿತಿಯನ್ನು ಪೋಸ್ಟ್ ಮಾಡಲು ಹೆಚ್ಚಿನ ಪ್ರೋಟೋಕಾಲ್‌ಗಳಿವೆ. ವ್ಯಾಟಿಕನ್‌ನಲ್ಲಿ 1931 ರಲ್ಲಿ ರೇಡಿಯೊವನ್ನು ಕಂಡುಹಿಡಿದ ಮಾರ್ಕೋನಿ ಸ್ಥಾಪಿಸಿದ ರೇಡಿಯೊ ಕೇಂದ್ರವಿದೆ. ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.

ನಾವು ಇಲ್ಲಿ ಸುಮಾರು ಆರು ಜನರ ತಂಡವನ್ನು ಹೊಂದಿದ್ದೇವೆ, ಅವರು ಕನ್ನಡದಲ್ಲಿ ನವೀಕರಣಗಳು ಲಭ್ಯವಾಗುವಂತೆ ಮಾಡಲು ಹಗಲು-ರಾತ್ರಿ ಕೆಲಸ ಮಾಡುತ್ತಾರೆ. ಅನುವಾದವು ಅತ್ಯಂತ ಸೂಕ್ಷ್ಮವಾಗಿದೆ ಮತ್ತು ದೋಷಗಳಿಗೆ ಯಾವುದೇ ಅವಕಾಶವಿಲ್ಲ, ಇತರ ಭಾರತೀಯ ಭಾಷೆಗಳನ್ನು ಸೇರಿಸಲಾಗುತ್ತದೆಯೇ ಎಂದು ಕೇಳಿದಾಗ, ಬಂಗಾಳಿ, ಮರಾಠಿ ಮತ್ತು ತೆಲುಗು ಭಾಷೆಗಳನ್ನು ಪರಿಚಯಿಸುವ ಯೋಜನೆ ಇದೆ ಎಂದು ಫಾದರ್ ಸಿರಿಲ್ ವಿಕ್ಟರ್ ಹೇಳಿದರು.

ಸಾಂದರ್ಭಿಕ ಚಿತ್ರ
ಲೋಕಸಭೆ ಚುನಾವಣೆ: ಪ್ರಧಾನಿ ಮೋದಿಯವರ ಭಾಷಣ 8 ಪ್ರಾದೇಶಿಕ ಭಾಷೆಗಳಲ್ಲಿ AI ಮೂಲಕ ನೇರ ಪ್ರಸಾರ

ಮಾಜಿ ಪೋಪ್ ಪಯಸ್ ಅವರು ವ್ಯಾಟಿಕನ್ ರೇಡಿಯೊವನ್ನು ಸ್ಥಾಪಿಸಿದ್ದರು, ಕನ್ನಡವನ್ನು ಗುರುತಿಸರುವುದು ದೊಡ್ಡ ದಿನವಾಗಿದೆ ಎಂದು ವ್ಯಾಟಿಕನ್ ಮೂಲದ ಯುಎಸ್ ರೇಡಿಯೊದಲ್ಲಿ ಕೆಲಸ ಮಾಡುತ್ತಿರುವ ಮತ್ತು ಬೆಂಗಳೂರು ವ್ಯಕ್ತಿಯನ್ನು ವಿವಾಹವಾಗಿರುವ ಆಶ್ಲೇ ಪುಗ್ಲಿಯಾ ನೊರೊನ್ಹಾ ತಿಳಿಸಿದ್ದಾರೆ.

ಇದು ಸಂಸ್ಕೃತಿಗೆ ಮತ್ತು ಅಧಿಕೃತ ಸಂವಹನ ಸೇವೆಗೆ ಸಂದ ಗೌರವವಾಗಿದೆ. ಇದೊಂದು ದೊಡ್ಡ ಪ್ರಯತ್ನವಾಗಿದೆ, ಒಗ್ಗಟ್ಟಾಗಿ ಮುಂದೆ ನಡೆಯುವ ಮಾರ್ಗ ಇದಾಗಿದೆ . ವ್ಯಾಟಿಕನ್ ಸುದ್ದಿತಾಣದ ಭಾಷೆಗಳ ಸಮೂಹಕ್ಕೆ ಇದೀಗ ಕನ್ನಡ ಸೇರ್ಪಡೆಗೊಂಡಿದೆ. ಇದು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿದ್ದರೂ, ಇಂದಿಗೂ ಅಚಲ ಜೀವಂತಿಕೆಯನ್ನು ಹೊಂದಿದೆ. ಕೆಥೋಲಿಕ್ ಸಮುದಾಯ ಜೀವಂತಿಕೆಯಿಂದ ಇರುವಂತೆಯೇ, 35 ಮಿಲಿಯನ್ ಜನರು ಮಾತನಾಡುವಂತಹ ಭಾಷೆಯೊಂದು ಜೀವಂತಿಕೆಯಿಂದ ಕೂಡಿದೆ. ಇದು ಕನ್ನಡಿಗರ ಸಂಸ್ಕೃತಿಗೆ ಸಂದ ಗೌರವ. ಕನ್ನಡದ ಸುಪ್ರಸಿದ್ಧ ಗಾದೆ ಮಾತು “ಕೈ ಕೆಸರಾದರೆ ಬಾಯಿ ಮೊಸರು” ಎಂಬಂತೆ ಪರಿಶ್ರಮ ಎಂದಿಗೂ ಫಲ ನೀಡುತ್ತದೆ ಎಂದು ವ್ಯಾಟಿಕನ್ನಿನ ಸಂವಹನ ಪೀಠದ ಮುಖ್ಯಾಧಿಕಾರಿ (ಪ್ರಿಫೆಕ್ಟ್) ಆಗಿರುವ ಡಾ. ಪೌಲ್ ರುಫಿನಿ ಅಭಿಪ್ರಾಯ ಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ
ಕನ್ನಡ ಮಾತನಾಡಿ ಕನ್ನಡಿಗರ ಮನಗೆದ್ದ F1 ಸೂಪರ್ ಸ್ಟಾರ್ ಲೂಯಿಸ್ ಹ್ಯಾಮಿಲ್ಟನ್

ಯುದ್ಧ ಸಂಕಷ್ಟಗಳು, ಅನಿಶ್ಚಿತತೆ ಮತ್ತು ಹಿಂಸೆಗಳೇ ಮಡುಗಟ್ಟುತ್ತಿರುವ ಐತಿಹಾಸಿಕ ಕಾಲಘಟ್ಟದಲ್ಲಿ, ಧರ್ಮಸಭೆಯು ಸಂವಹನ, ಸಹಭಾಗಿತ್ವ ಹಾಗೂ ಪರಸ್ಪರ ವಿನಿಮಯಕ್ಕೆ ಒತ್ತು ನೀಡುವ ಮೂಲಕ, ರೋಮ್ ಹಾಗೂ ವಿಶ್ವದ ನಡುವೆ ಭಾಂದವ್ಯವನ್ನು ಬೆಸೆಯುತ್ತಿರುವುದು ಉತ್ತಮ ಸಂಗತಿಯಾಗಿದೆ ಎಂದು ವ್ಯಾಟಿಕನ್ ಮಾಧ್ಯಮದ ಸಂಪಾದಕೀಯ ನಿರ್ದೇಶಕಿ ಆ್ಯಂಡ್ರಿಯಾ ತೋರ್ನಿಯೆಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com