ರಾಜ್ಯಾದ್ಯಂತ ಅಂಚೆ ಕಚೇರಿಗಳಲ್ಲಿ 3ನೇ ದಿನವೂ ಹಣಕಾಸು ವಹಿವಾಟು ಸ್ಥಗಿತ; ಗ್ರಾಹಕರಿಗೆ ತೊಂದರೆ!

ಎಪ್ರಿಲ್ 1 ಮತ್ತು 2 ರಂದು ಎರಡು ದಿನ ಘೋಷಿಸಲಾಗಿದ್ದ ಹಣಕಾಸು ವಹಿವಾಟು ಸ್ಥಗಿತ ಮೂರನೇ ದಿನವೂ ವಿಸ್ತರಣೆಯಾಗಿದ್ದರಿಂದ ಅಂಚೆ ಇಲಾಖೆಯನ್ನು ಅವಲಂಬಿಸಿರುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ಅಂಚೆ ಇಲಾಖೆ
ಅಂಚೆ ಇಲಾಖೆ
Updated on

ಬೆಂಗಳೂರು: ಎಪ್ರಿಲ್ 1 ಮತ್ತು 2 ರಂದು ಎರಡು ದಿನ ಘೋಷಿಸಲಾಗಿದ್ದ ಹಣಕಾಸು ವಹಿವಾಟು ಸ್ಥಗಿತ ಮೂರನೇ ದಿನವೂ ವಿಸ್ತರಣೆಯಾಗಿದ್ದರಿಂದ ಅಂಚೆ ಇಲಾಖೆಯನ್ನು ಅವಲಂಬಿಸಿರುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಯಾವುದೇ ಮುಂಗಡ ಸೂಚನೆ ನೀಡದೆ ವಹಿವಾಟು ಸ್ಥಗಿತಗೊಳಿಸಿದ್ದರಿಂದ ಸಾರ್ವಜನಿಕರಲ್ಲಿ ವಿಶೇಷವಾಗಿ ಪಿಂಚಣಿದಾರರಲ್ಲಿ ಹೆಚ್ಚಿನ ಗೊಂದಲ ಮನೆ ಮಾಡಿತ್ತು.

ವರ್ಷಾಂತ್ಯದಲ್ಲಿ ಸಾಮಾನ್ಯವಾಗಿ ಎರಡು ದಿನಗಳವರೆಗೆ ವಹಿವಾಟು ಸ್ಥಗಿತಗೊಳಿಸುವುದು ವಾಡಿಕೆ. ಆದರೆ, ಮೂರನೇ ದಿನಕ್ಕೆ ವಿಸ್ತರಣೆಯು ಸಾರ್ವಜನಿಕರನ್ನು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದೆ ಎಂದು ಹಿರಿಯ ಅಂಚೆ ಅಧಿಕಾರಿಯೊಬ್ಬರು ಒಪ್ಪಿಕೊಂಡರು. ಆದರೆ, ಇಂದಿನಿಂದ ವಹಿವಾಟು ಆರಂಭವಾಗಿರುವ ಸಾಧ್ಯತೆಯಿದೆ.

ವಹಿವಾಟು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಿಂಚಣಿದಾರರು, ವಿಶೇಷವಾಗಿ ಗ್ರಾಮೀಣ ಅಥವಾ ದೂರದ ಪ್ರದೇಶಗಳಲ್ಲಿ ಇರುವವರು ತಮ್ಮ ಮಾಸಿಕ ಪಿಂಚಣಿ ಪಡೆಯಲು ನೆರೆಹೊರೆಯ ಅಂಚೆ ಕಚೇರಿಗಳಿಗೆ ಭೇಟಿ ನೀಡುವವರು, ಹಣ ಜಮೆ ಮಾಡಲು ಸಾಧ್ಯವಾಗದೆ ಬರಿಗೈಯಲ್ಲಿ ವಾಪಸ್ಸಾದರು. ಪಿಂಚಣಿದಾರರ ಅಂಚೆ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡಲಾಗುತ್ತದೆ. ಬಹುತೇಕ ಮಂದಿ ಪಿಂಚಣಿ ಹಣ ವಿತ್ ಡ್ರಾ ಮಾಡಲು ಎಟಿಎಂ ಕಾರ್ಡ್ ಬಳಸುತ್ತಾರೆ ಆದರೆ, ನೇರ ಹಣ ವರ್ಗಾವಣೆ ಕೂಡಾ ನಡೆಯುತ್ತಿರಲಿಲ್ಲ.

ಅಂಚೆ ಇಲಾಖೆ
ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬೆಂಗಳೂರಿನಲ್ಲಿರುವ ಪಿಂಚಣಿದಾರ ಮಹಿಳೆ ರಾಗಿನಾ ಅಮ್ಮಾಳ್ (ಹೆಸರು ಬದಲಾಯಿಸಲಾಗಿದೆ) “ನಾನು ಪ್ರತಿ ತಿಂಗಳ ಮೊದಲನೆಯ ದಿನ ನನ್ನ ಫೋನ್‌ನಲ್ಲಿ ನನ್ನ ಖಾತೆಯನ್ನು ಪರಿಶೀಲಿಸುತ್ತೇನೆ ಮತ್ತು ಹಣವನ್ನು ಜಮೆ ಮಾಡಲಾಗಿರುತ್ತದೆ. ಎರಡು ದಿನ ಕಳೆದರೂ ಹಣ ಜಮೆ ಆಗದ ಹಿನ್ನೆಲೆಯಲ್ಲಿ ಆತಂಕಗೊಂಡು ಮಗನನ್ನು ಅಂಚೆ ಕಚೇರಿಗೆ ಕಳುಹಿಸಿದೆ. ನನಗೆ ಯಾವುದೇ ತೊಂದರೆ ಇಲ್ಲ, ನನಗೆ ಒಂದು ದಿನದಲ್ಲಿ ಪಿಂಚಣಿ ಸಿಗುತ್ತದೆ ಎಂದು ಹೇಳಿದರು. ಈ ಪಿಂಚಣಿಯಿಂದ ಬದುಕು ನಡೆಸಲು ಸಾಧ್ಯವಾಗಿದೆ ಎಂದರು.

ಅಂಚೆ ಇಲಾಖೆಗೆ ಗುಡ್ ಫ್ರೈಡೇ ರಜೆ, ಅದರ ನಂತರ ಭಾನುವಾರ ಮತ್ತು ಸೋಮವಾರ ಮತ್ತು ಮಂಗಳವಾರ ಅಧಿಕೃತವಾಗಿ ವಹಿವಾಟು ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರಿಗೆ ಖಂಡಿತವಾಗಿಯೂ ಅನಾನುಕೂಲವಾಗಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು. ಇದರಿಂದ"ಉಳಿತಾಯ ಬ್ಯಾಂಕ್‌ಗಳ ಖಾತೆಗಳು, ಮರುಕಳಿಸುವ ಠೇವಣಿಗಳು ಮತ್ತು ಸ್ಥಿರ ಠೇವಣಿಗಳನ್ನು ನಮ್ಮೊಂದಿಗೆ ನಿರ್ವಹಿಸುವವರ ಮೇಲೆ ತೀವ್ರ ಪರಿಣಾಮ ಬೀರಿದೆ. ಇದಲ್ಲದೆ, ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಇತರ ಯೋಜನೆಗಳಂತಹ ಕೇಂದ್ರವು ನಡೆಸುತ್ತಿರುವ ಅನೇಕ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಅನಾನುಕೂಲವಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com