Weather: ಕೊನೆಗೂ ಬೆಂಗಳೂರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ: ಯುಗಾದಿ ನಂತರ ಮಳೆ ಸಾಧ್ಯತೆ!

ಬೇಸಿಗೆ ಧಗೆಯಿಂದ ಕಳೆದೊಂದು ತಿಂಗಳಿನಿಂದ ಕಾದ ಕಾವಲಿಯಂತಾಗಿರುವ ಬೆಂಗಳೂರಿಗೆ ಮಳೆರಾಯನ ಸಿಂಚನವಾಗಲಿದ್ದು, ಈ ಬಗ್ಗೆ ಹವಾಮಾನ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ.
ಯುಗಾದಿ ಬಳಿಕ ಮಳೆ ಸಾಧ್ಯತೆ
ಯುಗಾದಿ ಬಳಿಕ ಮಳೆ ಸಾಧ್ಯತೆ

ಬೆಂಗಳೂರು: ಬೇಸಿಗೆ ಧಗೆಯಿಂದ ಕಳೆದೊಂದು ತಿಂಗಳಿನಿಂದ ಕಾದ ಕಾವಲಿಯಂತಾಗಿರುವ ಬೆಂಗಳೂರಿಗೆ ಮಳೆರಾಯನ ಸಿಂಚನವಾಗಲಿದ್ದು, ಈ ಬಗ್ಗೆ ಹವಾಮಾನ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ.

ಹೌದು.. ಬೇಸಿಗೆ ಧಗೆಯಿಂದ ಬಳಲಿ ಬೆಂಡಾಗಿರುವ ಉದ್ಯಾನ ನಗರಿಯ ಜನತೆಗೆ ಹವಾವಮಾನ ಇಲಾಖೆ ಸಮಾಧಾನಕರ ಸುದ್ದಿ ನೀಡಿದ್ದು, ಯುಗಾದಿ ಬಳಿಕ ನಗರದಲ್ಲಿ ಮಳೆಯಾಗುವ ಸಾಧ್ಯತೆ ಎಂದು ಹೇಳಿದೆ. ಏಪ್ರಿಲ್ 13 ಮತ್ತು 14 ರ ಬಳಿಕ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಗಳು ಹೇಳಿದೆ.

ಯುಗಾದಿ ಬಳಿಕ ಮಳೆ ಸಾಧ್ಯತೆ
ಬೆಂಗಳೂರು: ಅಂತರ್ಜಲ ವೃದ್ಧಿಗೆ ಸಮುದಾಯ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆಗೆ ಜಲಮಂಡಳಿ ಚಿಂತನೆ!

ಈಗಾಗಲೇ ರಾಜ್ಯದ ಹಲವೆಡೆ ಮಳೆಯ ಸಿಂಚನವಾಗುತ್ತಿದೆಯಾದರೂ ಬೆಂಗಳೂರಿಗೆ ಮಾತ್ರ ಈ ವರೆಗೂ ಒಂದೇ ಒಂದು ಹನಿಯೂ ಮಳೆಯಾಗಿರಲಿಲ್ಲ. ಹೀಗಾಗಿ ಬೆಂಗಳೂರಿಗರು ಬೇಸಿಗೆ ಧಗೆಯಿಂದ ಹೈರಾಣಾಗಿ ಹೋಗಿದ್ದರು. ಆದರೆ ಕೊನೆಗೂ ಇದೀಗ ನಗರಕ್ಕೆ ಮಳೆಯ ಆಗಮನವಾಗುತ್ತಿರುವುದು ನಿವಾಸಿಗಳಿಗೆ ಸಮಾಧಾನ ತಂದಿದೆ.

ಕೊಡಗು ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಕೂಡ ಮಳೆಯಾಗಿದೆ. ಚಿಕ್ಕಮಗಳೂರು, ಮೈಸೂರು, ಧಾರವಾಡ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಬೀದರ್ ಜಿಲ್ಲೆಗಳು ಈಗಾಗಲೇ ವರ್ಷದ ಮೊದಲ ಮಳೆಯನ್ನು ನೋಡಿವೆ. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಈ ಭಾಗದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ. ಅಶ್ವಿನಿ ಮಳೆ ಶುರುವಾದ ಬಳಿಕ ಮಳೆಯ ತೀವ್ರತೆ ಹೆಚ್ಚಾದರೂ ಅಚ್ಚರಿಯಿಲ್ಲ.

ಅಶ್ವಿನಿ ಮಳೆ

ಏಪ್ರಿಲ್ 14ರಂದು ಅಶ್ವಿನಿ ಮಳೆ ಆರಂಭವಾಗಲಿದೆ. ಅಶ್ವಿನಿ ಮಳೆಯೇ ಬೆಂಗಳೂರಿಗೆ ವರ್ಷದ ಮೊದಲ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಏಪ್ರಿಲ್ ತಿಂಗಳ ಮಧ್ಯದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೂಡ ಸಾಧಾರಣ ಮಳೆಯನ್ನು ನಿರೀಕ್ಷೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com