ಚಲಿಸುತ್ತಿದ್ದ ರೈಲಿನಿಂದ ತಳ್ಳಿ TTE ವಿನೋದ್ ಸಾವು: ಸುರಕ್ಷತೆ ಬಗ್ಗೆ ನೈರುತ್ಯ ರೈಲ್ವೆ ಟಿಕೆಟ್ ತಪಾಸಣೆ ಸಿಬ್ಬಂದಿ ಆತಂಕ!

ಕಳೆದ ಸೋಮವಾರ ಏಪ್ರಿಲ್ 1 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ಗುವಾಹಟಿಗೆ ಪ್ರಯಾಣಿಸುತ್ತಿದ್ದ ನ್ಯೂ ಟಿನ್‌ಸುಕಿಯಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು ವಿಭಾಗದ ಕೃಷ್ಣರಾಜಪುರಂ ಹತ್ತಿರ ಪ್ರಯಾಣಿಸುತ್ತಿದ್ದಾಗ ಘಟನೆಯೊಂದು ನಡೆದಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಳೆದ ಸೋಮವಾರ ಏಪ್ರಿಲ್ 1 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ಗುವಾಹಟಿಗೆ ಪ್ರಯಾಣಿಸುತ್ತಿದ್ದ ನ್ಯೂ ಟಿನ್‌ಸುಕಿಯಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು ವಿಭಾಗದ ಕೃಷ್ಣರಾಜಪುರಂ ಹತ್ತಿರ ಪ್ರಯಾಣಿಸುತ್ತಿದ್ದಾಗ ಘಟನೆಯೊಂದು ನಡೆದಿತ್ತು. ಟ್ರಾವೆಲಿಂಗ್ ಟಿಕೆಟ್ ಇನ್‌ಸ್ಪೆಕ್ಟರ್(TTE) ಟಿಕೆಟ್ ತಪಾಸಣೆಗೆಂದು ಬಂದು ಟಿಕೆಟ್ ತೋರಿಸುವಂತೆ ಕೇಳಿದಾಗ ಟಿಕೆಟ್ ರಹಿತ ಪ್ರಯಾಣಿಕನೊಬ್ಬ ಸಿಕ್ಕಿಬಿದ್ದ.

ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದಕ್ಕೆ ಪ್ರಶ್ನಿಸಿ ದಂಡ ಪಾವತಿಸುವಂತೆ ಹೇಳಿದಾಗ ಪ್ರಯಾಣಿಕ ಟಿಟಿಇ ಜೊತೆ ವಾಗ್ಯುದ್ಧ ನಡೆಸಿದ್ದಲ್ಲದೆ ಹಲ್ಲೆ ಕೂಡ ನಡೆಸಿದ. ಮರುದಿನ ಮಂಗಳವಾರ ಏಪ್ರಿಲ್ 2ರಂದು ಒಡಿಶಾದ ಪ್ರಯಾಣಿಕ ರಜನಿಕಾಂತ್ ಟಿಟಿಇ ಜೊತೆ ವಾದ ಮಾಡುತ್ತಾ ಎರ್ನಾಕುಲಂ-ಪಾಟ್ನಾ ರೈಲಿನಿಂದ ತ್ರಿಶೂರ್ ನಲ್ಲಿ ಟಿಟಿಇ ಕೆ ವಿನೋದ್ ಬಿದ್ದು ತೀವ್ರ ಗಾಯಗೊಂಡು ಮೃತಪಟ್ಟಿದ್ದು ಟಿಕೆಟ್ ಪರೀಕ್ಷಕರಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ತಮ್ಮ ಸುರಕ್ಷತೆ ಬಗ್ಗೆ ಭೀತಿಯುಂಟುಮಾಡಿದೆ.

ಬೆಂಗಳೂರು ಮೂಲದ ಟಿಟಿಇ ವಿ ಸಂತೋಷ್ ಕುಮಾರ್ ಸಹ ಆರು ವರ್ಷಗಳ ಹಿಂದೆ ಇದೇ ರೀತಿಯ ಪರಿಸ್ಥಿತಿ ಎದುರಿಸಬೇಕಾಗಿತ್ತು. ಆದರೆ ಅವರು ಬಚಾವಾದರು. 2018 ರ ಏಪ್ರಿಲ್ 18 ರಂದು ಯಶವಂತಪುರ-ಹೌರಾ ಎಕ್ಸ್‌ಪ್ರೆಸ್‌ನಲ್ಲಿ ಆರು ಪ್ರಯಾಣಿಕರು ಅವರನ್ನು ದರೋಡೆ ಕಟ್ಟಿಹಾಕಿ ದರೋಡೆ ಮಾಡಿ ಚಲಿಸುತ್ತಿದ್ದ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್‌ನಿಂದ ಹೊರಕ್ಕೆ ತಳ್ಳಿದರು, ಅವರ ಹೆಸರಿನಲ್ಲಿ ನೀಡದ ಟಿಕೆಟ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ದಂಡ ಸಹಿತ ಟಿಕೆಟ್ ಹಣ ನೀಡಲು ಹೇಳಿದ್ದಾಗ ಈ ರೀತಿ ಹಲ್ಲೆ ನಡೆಸಿದ್ದರು. ಸಂತೋಷ್ ಕುಮಾರ್ ಅವರನ್ನು ಕಟಪಾಡಿ ರೈಲು ನಿಲ್ದಾಣದ ಬಳಿ ಕತ್ತಲಲ್ಲಿ ರೈಲಿನಿಂದ ಹೊರಗೆ ತಳ್ಳಿ ಹಾಕಿದ್ದರು ದುಷ್ಕರ್ಮಿಗಳು. ಅಲ್ಲಿ ಗೇಟ್ ಪಾಲಕನ ಸಹಾಯದಿಂದ ರೈಲು ನಿಲ್ದಾಣಕ್ಕೆ ಹೋಗಿ ಆಗಿದ್ದ ಗಾಯಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಮೂರು ವರ್ಷಗಳ ಹಿಂದೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಪ್ಲಾಟ್‌ಫಾರ್ಮ್‌ ಟಿಕೆಟ್‌ ಇಲ್ಲದೆ ಪ್ರವೇಶಿಸಿದ ಆರು ಮಹಿಳೆಯರಲ್ಲಿ ಟಿಕೆಟ್‌ ಕೇಳಿದಾಗ ಮಹಿಳಾ ಟಿಟಿಇ ಮೇಲೆ ಆರು ಜನ ಮಹಿಳೆಯರು ಥಳಿಸಿದ್ದನ್ನು ಮತ್ತೊಬ್ಬ ಅಧಿಕಾರಿ ನೆನಪಿಸಿಕೊಂಡರು.

ಸಾಂದರ್ಭಿಕ ಚಿತ್ರ
ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ಮೊದಲ ದರ್ಜೆ ಬೋಗಿಯಲ್ಲಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯ ಲಗ್ಗೇಜು, ದಾಖಲೆಗಳ ಕಳವು!

ಜೀವಕ್ಕೆ ಭದ್ರತೆ ಬೇಕು: ನಮ್ಮ ಕೆಲಸವನ್ನು ಮಾಡುವಾಗ ನಮಗೆ ಭದ್ರತೆ ಬೇಕು. ಪ್ಲಾಟ್‌ಫಾರ್ಮ್‌ನಲ್ಲಿ ಅಥವಾ ರೈಲಿನಲ್ಲಿ ಟಿಕೆಟ್‌ಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಕ್ರೂರ, ದುರ್ನಡತೆಯ ಪ್ರಯಾಣಿಕರಿಂದ ನಮ್ಮ ಜೀವಕ್ಕೆ ಅಪಾಯ ಎದುರಾಗಬಹುದು. ಪ್ರಯಾಣಿಕ ಯಾವ ಮನಸ್ಥಿತಿಯಲ್ಲಿರುತ್ತಾನೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಕುಡಿದು ಅಥವಾ ಆಕ್ರಮಣಕಾರಿ ಪ್ರಯಾಣಿಕರನ್ನು ಪ್ರಶ್ನಿಸಿದಾಗ ಅವರು ಅವಾಚ್ಯವಾಗಿ ಮಾತನಾಡುವುದು ದೈಹಿಕವಾಗಿ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ ಎಂದು ಹಿರಿಯ ಟಿಟಿಇ ಹೇಳುತ್ತಾರೆ. ಬೋರ್ಡ್ ರೈಲಿನಲ್ಲಿ ಆರ್‌ಪಿಎಫ್ ಸಿಬ್ಬಂದಿ ಇರುತ್ತಾರೆ, ಆದರೆ ಅವರು ಟಟಿಇ ಒಂದು ಕಡೆ ಟಿಕೆಟ್ ತಪಾಸಣೆ ಮಾಡುವಾಗ ಬೇರೆ ಕೋಚ್ ನ್ನು ಮೇಲ್ವಿಚಾರಣೆ ಮಾಡುತ್ತಿರಬಹುದು.

ಹಿರಿಯ SWR ಅಧಿಕಾರಿಯೊಬ್ಬರು, ಟಿಟಿಇಗಳು ಮತ್ತು ಪ್ರಯಾಣಿಕರ ನಡುವಿನ ವಿವಾದಗಳ ಪ್ರಕರಣಗಳಿಂದಾಗಿ, ಐಸಿಎಫ್ ಮೇಲೆ ಎಲ್‌ಹೆಚ್‌ಬಿ ಕೋಚ್‌ಗಳನ್ನು ಪರಿಚಯಿಸಲು ಕಾರಣವಾಗುತ್ತದೆ. ವಿಶೇಷವಾಗಿ ಪೂರ್ವ ಮತ್ತು ಈಶಾನ್ಯ ಭಾಗಗಳಿಗೆ ದೂರದ ರೈಲುಗಳಲ್ಲಿ ಈ ಕೋಚ್ ಗಳ ಅಳವಡಿಕೆ ಹೆಚ್ಚಾಗಿದೆ. “ಕಾಯ್ದಿರಿಸದ ಟಿಕೆಟ್ ಬೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಮುಕ್ತ ಟಿಕೆಟ್‌ಗಳನ್ನು ಹೊಂದಿರುವ ಅನೇಕರು ಕಾಯ್ದಿರಿಸಿದ ಕೋಚ್‌ಗಳಿಗೆ ಹೋಗುತ್ತಾರೆ. ಹೀಗಾಗಿ ಟಿಕೆಟ್ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ ನಡೆಯುತ್ತದೆ. ನಾವು ಈ ಬಗ್ಗೆ ರೈಲ್ವೆ ಮಂಡಳಿಗೆ ಪತ್ರ ಬರೆದಿದ್ದೇವೆ. ಅವರು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಪದೇ ಪದೇ ಕರೆಗಳು ಮತ್ತು ಸಂದೇಶಗಳನ್ನು ಕಳುಹಿಸಿದರೂ ಈ ಸಮಸ್ಯೆ ಬಗ್ಗೆ ಬೆಂಗಳೂರು ವಿಭಾಗದ ಯಾವುದೇ ಹಿರಿಯ ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎಂದು TNIE ವರದಿಗಾರ್ತಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com