ವಿಸ್ತಾರ ವಿಮಾನಗಳ ರದ್ದು ಹಿನ್ನೆಲೆ ವಿಮಾನ ಪ್ರಯಾಣ ದರ ಏರಿಕೆ ಸಾಧ್ಯತೆ?

ವಿಸ್ತಾರ ವಿಮಾನ ಸಂಸ್ಥೆ ಹಲವು ವಿಮಾನಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಿದ್ದು, ಇನ್ನೂ ಕೆಲವು ವಿಮಾನಗಳು ವಿಳಂಬವಾಗಿದೆ.
ವಿಸ್ತಾರ ಏರ್ ಲೈನ್ಸ್
ವಿಸ್ತಾರ ಏರ್ ಲೈನ್ಸ್TNIE

ಬೆಂಗಳೂರು: ಈ ಹಿನ್ನೆಲೆಯಲ್ಲಿ ವಿಸ್ತಾರಾ ವಿಮಾನಗಳಲ್ಲಿ ಪ್ರಯಾಣಿಸಲು ಈಗಾಗಲೇ ಟಿಕೆಟ್ ಕಾಯ್ದಿರಿಸಿರುವವರು ಹಾಗೂ ವಿಮಾನ ರದ್ದಾದ ಹಿನ್ನೆಲೆಯಲ್ಲಿ ಬೇರೆ ವಿಮಾನ ಸಂಸ್ಥೆಗಳಲ್ಲಿ ಟಿಕೆಟ್ ಕಾಯ್ದಿರಿಸಿಕೊಳ್ಳುವಂತೆ ಸೂಚನೆ ಪಡೆದಿರುವವರು ಬೇರೆ ವಿಮಾನ ಸಂಸ್ಥೆಗಳಲ್ಲಿ ಟಿಕೆತ್ ಕಾಯ್ದಿರಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೆಂಗಳೂರು- ಉದಯ್ ಪುರ, ಮುಂಬೈ-ಕೊಚ್ಚಿ, ದೆಹಲಿ-ಶ್ರೀನಗರ, ದೆಹಲಿ- ಇಂದೋರ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಿಸ್ತಾರ ವಿಮಾನಗಳು ರದ್ದುಗೊಂಡಿವೆ. ಬೆಂಗಳೂರಿನಲ್ಲಿರುವ ಆಸ್ಪತ್ರೆಯ ಸುರಕ್ಷತಾ ಸಲಹೆಗಾರ ಅಶ್ವಿನ್ ಸಿದ್ದರಾಮಯ್ಯ ಈ ಬಗ್ಗೆ ಪೋಸ್ಟ್ ಮಾಡಿದ್ದು "ನಾನು ದೆಹಲಿಯಿಂದ ಬೆಂಗಳೂರಿಗೆ ವಿಮಾನವನ್ನು ಕಾಯ್ದಿರಿಸಲು 16,000 ರೂಪಾಯಿಗಳನ್ನು ಖರ್ಚು ಮಾಡಿದೆ ಏಕೆಂದರೆ ನಾನು 7,500 ಕ್ಕೆ ಬುಕ್ ಮಾಡಿದ್ದ ಫ್ಲೈಟ್ ಅನ್ನು ವಿಸ್ತಾರಾ ರದ್ದುಗೊಳಿಸಿದೆ ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಸ್ಟರ್ ಎಂದು ಕರೆಸಿಕೊಳ್ಳುವ ದೆಹಲಿ ಮೂಲದ ಪ್ರಯಾಣಿಕ ಟ್ವೀಟ್ ಮಾಡಿದ್ದು ನೀವು ವಿಮಾನವನ್ನು ರದ್ದುಗೊಳಿಸಿದವರಿಗೆ ಹಣವನ್ನು ಮರುಪಾವತಿ ಮಾಡುತ್ತಿದ್ದೀರಾ? ಮತ್ತು ಯಾವಾಗ? ಎಂದು ವಿಸ್ತಾರಾಗೆ ಪ್ರಶ್ನೆ ಕೇಳಿದ್ದಾರೆ.

ವಿಸ್ತಾರ ಏರ್ ಲೈನ್ಸ್
ಸಿಬ್ಬಂದಿ ಕೊರತೆ: ವಿಸ್ತಾರ ವಿಮಾನಗಳ ಹಾರಾಟ ಭಾರಿ ವಿಳಂಬ, ಪ್ರಯಾಣಿಕರ ಪರದಾಟ!

ಅಂಕುರ್ ದೇಶಮುಖ್ ಎಂಬುವವರು ಅವರ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಮುಂಬೈಗೆ ಏ.1 ರಂದು ವಿಸ್ತಾರಾ ಯುಕೆ-864 ವಿಮಾನದಲ್ಲಿ ತೆರಳಬೇಕಿತ್ತು. ಆದರೆ ಮಧ್ಯರಾತ್ರಿಯ ನಂತರ ಅಘೋಷಿತ ವಿಳಂಬ ಮತ್ತು ನಂತರದ ರದ್ದತಿಯ ನಂತರ ಅನುಭವಿಸಿದ ನೋವಿನ ಅನುಭವವನ್ನು ಮೆಲುಕು ಹಾಕಿದರು. ಅವರಿಗೆ ವಿಳಂಬದ ನಂತರ ಇಂಡಿಗೋದೊಂದಿಗೆ ಪರ್ಯಾಯ ವಿಮಾನಕ್ಕೆ ಟಿಕೆಟ್ ಕಾಯ್ದಿರಿಸಲು ಒತ್ತಾಯಿಸಲಾಯಿತು, ಇಂತಹ ಅನೇಕ ಮಂದಿಗೆ ವಿಸ್ತಾರ ವಿಮಾನ ಸಂಸ್ಥೆ ವಿಮಾನಗಳ ಕಾರ್ಯಾಚರಣೆ ರದ್ದುಗೊಳಿಸಿದ್ದರ ಪರಿಣಾಮ ಎದುರಿಸಿದ್ದಾರೆ.

ರದ್ದಾದ ಟಿಕೆಟ್‌ಗಳ ನಿರ್ದಿಷ್ಟ ಪ್ರಶ್ನೆಗಳಿಗೆ ವಿಸ್ತಾರಾ ಪ್ರತಿಕ್ರಿಯಿಸಲಿಲ್ಲ. ಒಂದು ಹೇಳಿಕೆಯಲ್ಲಿ, ಏರ್ಲೈನ್ ​​ಸಮರೋಪಾದಿಯಲ್ಲಿ ಸಮಸ್ಯೆಯನ್ನು ನಿಭಾಯಿಸುತ್ತಿದೆ ಮತ್ತು ಸಾಧ್ಯವಾದಷ್ಟು ಹೆಚ್ಚಿನ ಗ್ರಾಹಕರಿಗೆ ಅವಕಾಶ ಕಲ್ಪಿಸಲು ಆಯ್ದ ದೇಶೀಯ ಮಾರ್ಗಗಳಲ್ಲಿ ತನ್ನ B787-9 ಡ್ರೀಮ್ಲೈನರ್ TM ಮತ್ತು A321 ನಿಯೋನಂತಹ ದೊಡ್ಡ ವಿಮಾನಗಳನ್ನು ನಿಯೋಜಿಸಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com