'ಕೋರ್ಟ್ ಮೇಲ್ವಿಚಾರಣೆಯಲ್ಲಿ Soujanya murder ಪ್ರಕರಣದ CBI ಮರು ತನಿಖೆ ನಡೆಸಿ, ಧರ್ಮಸ್ಥಳವನ್ನು ಹಿಂದೂಗಳ ಸುಪರ್ದಿಗೆ ನೀಡಿ: ಪ್ರಧಾನಿ ಮೋದಿಗೆ ಹೋರಾಟಗಾರರ ಆಗ್ರಹ!

ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸೌಜನ್ಯ ಹತ್ಯೆ (Sowjanya Case) ಪ್ರಕರಣದ CBI ಮರು ತನಿಖೆ ನಡೆಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಆದೇಶ ನೀಡಬೇಕು ಮತ್ತು ಧರ್ಮಸ್ಥಳವನ್ನು ಹಿಂದೂಗಳ ಸುಪರ್ದಿಗೆ ನೀಡಬೇಕು ಎಂದು ಸೌಜನ್ಯ ಪರ ಹೋರಾಟ ಸಮಿತಿ ಬುಧವಾರ ಆಗ್ರಹಿಸಿದೆ.
ಸೌಜನ್ಯಪರ ಹೋರಾಟ ಸಮಿತಿ ಸುದ್ದಿಗೋಷ್ಠಿ
ಸೌಜನ್ಯಪರ ಹೋರಾಟ ಸಮಿತಿ ಸುದ್ದಿಗೋಷ್ಠಿ

ಮಂಗಳೂರು: ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸೌಜನ್ಯ ಹತ್ಯೆ (Sowjanya Case) ಪ್ರಕರಣದ CBI ಮರು ತನಿಖೆ ನಡೆಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಆದೇಶ ನೀಡಬೇಕು ಮತ್ತು ಧರ್ಮಸ್ಥಳವನ್ನು ಹಿಂದೂಗಳ ಸುಪರ್ದಿಗೆ ನೀಡಬೇಕು ಎಂದು ಸೌಜನ್ಯ ಪರ ಹೋರಾಟ ಸಮಿತಿ ಬುಧವಾರ ಆಗ್ರಹಿಸಿದೆ.

ಅತ್ಯಾಚಾರ ಮತ್ತು ಹತ್ಯೆಗೀಡಾದ ಸೌಜನ್ಯ ಅವರಿಗೆ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸೌಜನ್ಯಪರ ಹೋರಾಟ ಸಮಿತಿಯು (Soujanyapara Horata Samithi) ಚುನಾವಣಾ ಪ್ರಚಾರಕ್ಕಾಗಿ ಏಪ್ರಿಲ್14 ರಂದು ಮಂಗಳೂರಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ CBIನಿಂದ ನ್ಯಾಯಾಲಯದ ನಿಗಾದಲ್ಲಿ ಮರುತನಿಖೆ ನಡೆಸುವಂತೆ ಒತ್ತಾಯಿಸಿದೆ.

ಸೌಜನ್ಯಪರ ಹೋರಾಟ ಸಮಿತಿ ಸುದ್ದಿಗೋಷ್ಠಿ
ಸೌಜನ್ಯ ಪ್ರಕರಣ: ಹೊಸದಾಗಿ ತನಿಖೆಗೆ ಮನವಿ; ಸಿಬಿಐ, ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಹೈಕೋರ್ಟ್ ನೋಟಿಸ್

ಇದೇ ಏಪ್ರಿಲ್ 14 ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುತ್ತಿದ್ದು ಇದೇ ವೇಳೆ ಸೌಜನ್ಯ ಹತ್ಯೆ ಪ್ರಕರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಕ್ರಮ ಕೈಗೊಳ್ಳಬೇಕು ಎಂದು ಸೌಜನ್ಯ ಪರ ಹೋರಾಟ ಸಮಿತಿ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ (Mahesh Thimarodi) ಆಗ್ರಹಿಸಿದ್ದಾರೆ. ಬುಧವಾರ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಸೌಜನ್ಯ ಪ್ರಕರಣದಲ್ಲಿ ನ್ಯಾಯದೊರಕಿಸಿಕೊಡದಿದ್ದಲ್ಲಿ.. ತಾವು ನೋಟಾ ಅಭಿಯಾನ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

'ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ (Loksabha Election 2024) ಪ್ರಚಾರಕ್ಕಾಗಿ ಮಂಗಳೂರಿಗೆ ಬರಲಿದ್ದಾರೆ ಎನ್ನುವ ವಿಷಯ ತಿಳಿದು ಧರ್ಮಸ್ಥಳ ನಿರ್ಭಯ (ಸೌಜನ್ಯ) ಹೋರಾಟಗಾರರಿಗೆ ಸಂತೋಷ ಆಗಿದೆ. ಉಜಿರೆ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಳ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆಯ ಮರುತನಿಖೆ ಕುರಿತು ಕರ್ನಾಟಕ ಮಾನ್ಯ ಉಚ್ಚ ನ್ಯಾಯಾಲಯವು ಈಗ ದೇಶದ ಉನ್ನತ ತನಿಖಾ ಸಂಸ್ಥೆಯಾದ CBI ಗೆ ತುರ್ತು ನೋಟೀಸ್ ಜಾರಿ ಮಾಡಿ ಮರು ತನಿಖೆ ಕುರಿತು CBI ಅಭಿಪ್ರಾಯ ಕೇಳಿದೆ.

CBI ತನಿಖಾ ಸಂಸ್ಥೆಯು ಕೇಂದ್ರ ಗೃಹ ಇಲಾಖೆ ಮತ್ತು ನೇರವಾಗಿ ಈ ದೇಶದ ಪ್ರಧಾನಿ ಕಚೇರಿಯ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಕರಾವಳಿ ಜಿಲ್ಲೆಗಳ ಬಿ ಜೆ ಪಿ ಹಿಂದೂ ನಾಯಕರುಗಳು ಮೋದಿಜಿ ಮನವೊಲಿಸಿ 14 ರ ಸಭೆಯಲ್ಲಿ ನ್ಯಾಯಾಲಯದ ಉಸ್ತುವಾರಿಯಲ್ಲಿ CBI ಸಂಸ್ಥೆಯಿಂದ ಪ್ರಕರಣದ ಮರುತನಿಖೆಯ ಅಭಿಪ್ರಾಯವನ್ನು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ತಿಳಿಸಲು ಲಿಖಿತ ಆದೇಶ ಮಾಡಬೇಕು.

ಸೌಜನ್ಯ ಹತ್ಯೆಗಿಂತ ಮುಂಚೆ ನಡೆದ ಮಾವುತ ನಾರಾಯಣ ಯಮುನಾ ಜೋಡಿ ಕೊಲೆ, ವೇದದಲ್ಲಿ, ಪದ್ಮಲತಾ ಕೊಲೆ ಮತ್ತು ಪ್ರಕರಣ ದಾಖಲಾಗದ ಅನೇಕ ಹಿಂದೂ ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆಗಳ ವಿಶೇಷ ತನಿಖೆಗಾಗಿ ಅವತ್ತಿನ ದಿವಸ ಪ್ರಧಾನಿ ಮೋದಿಜಿ ಅವರು ನ್ಯಾಯಾಲಯ ಮೇಲುಸ್ತುವಾರಿಯಲ್ಲಿ CBI ಗೆ ಲಿಖಿತವಾಗಿ, ಅದೇಶಿಸಲು ಕರಾವಳಿಯ ಪ್ರಖರ ಹಿಂದೂ BJP ನಾಯಕರು ಒತ್ತಾಯಿಸಬೇಕು' ಎಂದು ಮಹೇಶ್ ತಿಮರೋಡಿ ಹೇಳಿದರು.

ಧರ್ಮಸ್ಥಳ ಹೆಸರು ದುರ್ಬಳಕೆ ಮಾಡಿ ಸಾವಿರಾರು ಕೋಟಿ ರೂ ಬಡ್ಡಿದಂಧೆ

RBI ನಿಯಮ, ಬ್ಯಾಂಕಿಂಗ್ ವ್ಯವಸ್ಥೆ, ಲೇವಾದೇವಿ ಕಾನೂನನ್ನು ಗಾಳಿಗೆ ತೂರಿ, ಪವಿತ್ರ ಹಿಂದೂ ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲದ ಹೆಸರು ದುರ್ಬಳಕೆ ಮಾಡಿ ಸಾವಿರಾರು ಕೋಟಿ ರೂಪಾಯಿಯ ರಾಜ್ಯಾಧ್ಯಂತ ಅಕ್ರಮ ಬಡ್ಡಿ ದಂದೆ ನಡೆಸುತ್ತಾ ಪ್ರತಿವಾರ ಅಮಾಯಕ ಸಂಘದ ಸದಸ್ಯರ ಮನೆಗೆ ನುಗ್ಗಿ ಚಿತ್ರ ಹಿಂಸೆ ಕೊಡುತ್ತಿರುವ SKDRDP ಸಂಸ್ಥೆಯ ಬಡ್ಡಿ ದಂದೆಯ ಅಕ್ರಮವನ್ನು ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯಕ್ಕೆ ( ED ) ಮಾನ್ಯ ಮೋದಿಕೆ ಅವರು ಲಿಖಿತವಾಗಿ ಒಪ್ಪಿಸಬೇಕು.

ಈ ಕುರಿತು BIP ಹಿಂದೂ ನಾಯಕರು ಮೋದಿಜಿ ಅವರ ಮನವೊಲಿಸಬೇಕು. ಈ ಸಮಸ್ಯೆಗಳಿಗೆ ಸ್ಪಂದಿಸದೆ ಜನಸಾಮಾನ್ಯರ ಬೇಡಿಕೆಗೆ ಸ್ಪಂದಿಸದ ದ.ಕ ಜಿಲ್ಲೆಯಿಂದ ಆಯ್ಕೆ ಆಗಿರುವ ರಾಜ್ಯ ಸಭಾ ಸದಸ್ಯರ ರಾಜೀನಾಮೆಯನ್ನೂ ಅಂದಿನ ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರು ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ನೋಟಾ ಅಭಿಯಾನ

ಮೋದಿಜಿ ಅವರ ಸಭೆಯಲ್ಲಿ ಹಿಂದೂ ಸಮಾಜದ ಈ ಎಲ್ಲ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಈಡೇರಿಸಬೇಕು. ಇಲ್ಲವಾದಲ್ಲಿ ಹಿಂದೂ ಧರ್ಮದ ರಕ್ಷಣೆ ಈ ಕರಾವಳಿ ಜಿಲ್ಲೆಯ ನಾಯಕರಿಂದ ಸಾಧ್ಯವಿಲ್ಲ ಮತ್ತು ಎಲ್ಲರೂ ಅತ್ಯಾಚಾರಿಗಳ ಪರ ಎನ್ನುವ ಸಂದೇಶವನ್ನು ಸಾರ್ವಜನಿಕವಾಗಿ ನೀಡಲಿದ್ದೇವೆ. ಈ ಮೂಲಕ NOTA ಅಭಿಯಾನವನ್ನು ತೀವ್ರಗೊಳಿಸುತ್ತೇವೆ ಎಂದು ಅವರು ಸವಾಲು ಹಾಕಿದರು.

ರಾಜ್ಯಸರ್ಕಾರಕ್ಕೂ ಎಚ್ಚರಿಕೆ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವೂ ಕೂಡ ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸೌಜನ್ಯ ಪ್ರಕರಣವನ್ನು ಅದಷ್ಟು ಬೇಗ ಮರು ತನಿಖೆಯ ಅಭಿಪ್ರಾಯ ನೀಡಬೇಕು, ಅಕ್ರಮ ವಂಚನೆಯಿಂದ ವಶಪಡಿಸಿಕೊಂಡ ದಲಿತರ ಮತ್ತು ಸರ್ಕಾರದ ಸಾವಿರಾರು ಎಕರೆ ಭೂಮಿಯನ್ನು ಧರ್ಮೋದ್ಯಮಿಗಳಿಂದ ವಾಪಸ್ ಪಡೆಯಬೇಕು. ಇವು ರಾಜ್ಯ ಸರ್ಕಾರದ ಮುಂದೆ ಇರುವ ಬೇಡಿಕೆಗಳು ಸರ್ಕಾರ ಕೂಡಲೇ ಈ ಬೇಡಿಕೆಗಳಿಗೆ ಸ್ಪಂದಿಸದೆ ಹೋದರೆ ಕರಾವಳಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ NOTA ಅಭಯಾನ ತೀವ್ರ ಗೊಳಿಸಲಾಗುವುದು ಎಂದೂ ಮಹೇಶ್ ತಿಮರೋಡಿ ಹೇಳಿದರು.

ಧರ್ಮಸ್ಥಳವನ್ನು ಹಿಂದೂಗಳ ಸುಪರ್ದಿಗೆ ನೀಡಿ

ಸೌಜನ್ಯಾ ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ತನ್ನ ಅಭಿಪ್ರಾಯವನ್ನು ಹೈಕೋರ್ಟ್‌ಗೆ ನೀಡಬೇಕು. ಧರ್ಮಸ್ಥಳ ದೇವಸ್ಥಾನದ ಆಡಳಿತವನ್ನು ಹಿಂದೂಗಳ ಸುಪರ್ದಿಗೆ ನೀಡಬೇಕು. ಧರ್ಮಸ್ಥಳದಲ್ಲಿ ಬಡವರ ಸಾವಿರಾರು ಎಕರೆ ಜಮೀನು ಕಬಳಿಸಿದೆ. ಬಡವರಿಗೆ ರಾಜ್ಯ ಸರ್ಕಾರ ಸಹಾಯ ಮಾಡಬೇಕು. ಇಲ್ಲವಾದ್ದಲ್ಲಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಮತ ಪ್ರಚಾರ ಮಾಡುವುದಾಗಿ ತಿಮರೋಡಿ ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com