ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಕೊನೆಗೂ ಸಿಕ್ಕಿಬಿದ್ದ ಖಾನ್‌ಗ್ರೆಸ್ ಬ್ರದರ್ಸ್!

ಸಮೃದ್ಧ ಕರ್ನಾಟಕವನ್ನು ಭಯೋತ್ಪಾದನಾ ತಾಣವಾಗಿ ಪರಿವರ್ತಿಸಲು ಹೊರಟ ಸಿದ್ದರಾಮಯ್ಯ ಸರ್ಕಾರಕ್ಕೆ ಮುರ್ದಾಬಾದ್! ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಮುಸಾವಿರ್ ಶಾಜೀಬ್‌ ಮತ್ತು ಅಬ್ದುಲ್‌ ಮಥೀನ್‌ ತಾಹಾ
ಮುಸಾವಿರ್ ಶಾಜೀಬ್‌ ಮತ್ತು ಅಬ್ದುಲ್‌ ಮಥೀನ್‌ ತಾಹಾ

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ‌ಶಂಕಿತರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ತಾಹಾನನ್ನು ಪಶ್ಚಿಮ ಬಂಗಾಳದಲ್ಲಿ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಅರವಿಂದ್ ಬೆಲ್ಲದ್ ಕೊನೆಗೂ ಸಿಕ್ಕಿಬಿದ್ದ ಖಾನ್‌ಗ್ರೆಸ್ ಬ್ರದರ್ಸ್ ಎಂದು ಬರೆದುಕೊಂಡಿದ್ದಾರೆ.

ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ @INCKarnataka ಸರ್ಕಾರದ ಬ್ರದರ್ಸ್‌ಗಳಾದ ಮುಸಾವಿರ್ ಶಾಜೀಬ್‌ ಮತ್ತು ಅಬ್ದುಲ್‌ ಮಥೀನ್‌ ತಾಹಾನನ್ನು ಎನ್‌ಐಎ ಬಂಧಿಸಿದೆ.

ಸುಖಾಸುಮ್ಮನೆ ಬಿಜೆಪಿ ಕರ್ಯಕರ್ತನ ಮೇಲೆ ಆರೋಪ ಹೊರಿಸಿದ್ದ @ದಿನೇಶ್ ಗುಂಡೂರಾವ್ ಅವರೇ ಎಲ್ಲಿ ಹೋದಿರಿ? ನೀವು ಕ್ಷಮೆ ಕೇಳಲೇಬೇಕು! ಜನರ ದಿಕ್ಕು ತಪ್ಪಿಸುವ ಇಂತಹ ಕೆಳಮಟ್ಟದ ಕೆಲಸ ನಿಮ್ಮ ಮಂತ್ರಿ ಸ್ಥಾನಕ್ಕೆ ಶೋಭೆಯಲ್ಲ! ಸಮೃದ್ಧ ಕರ್ನಾಟಕವನ್ನು ಭಯೋತ್ಪಾದನಾ ತಾಣವಾಗಿ ಪರಿವರ್ತಿಸಲು ಹೊರಟ ಸಿದ್ದರಾಮಯ್ಯ ಸರ್ಕಾರಕ್ಕೆ ಮುರ್ದಾಬಾದ್! ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com