Rameshwaram Cafe blast: ಸಿದ್ದು ಸರ್ಕಾರದ 'Ease of Doing Terror' ನೀತಿಯೇ ರಾಜ್ಯದಲ್ಲಿ ISIS ಕೇಂದ್ರ ಸ್ಥಾಪನೆಗೆ ಪ್ರೇರೇಪಣೆ- BJP

ರಾಮೇಶ್ವರಂ ಸ್ಫೋಟ ಪ್ರಕರಣದ ಬಾಂಬರ್ ಗಳನ್ನು ಎನ್ಐಎ (NIA) ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ತೀವ್ರ ಕಿಡಿಕಾರಿದೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ

ಬೆಂಗಳೂರು: ರಾಮೇಶ್ವರಂ ಸ್ಫೋಟ ಪ್ರಕರಣದ ಬಾಂಬರ್ ಗಳನ್ನು ಎನ್ಐಎ (NIA) ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ತೀವ್ರ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 'ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ ಕಾಂಗ್ರೆಸ್‌ನ ಸಹೋದರರನ್ನು ಎನ್‌ಐಎ ಬಂಧಿಸಿದೆ. ಜಿಹಾದಿ ಟಿಪ್ಪು ಸುಲ್ತಾನನ ಅಭಿಮಾನಿಗಳು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಭಯೋತ್ಪಾದಕರು ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಹೇಳಿದೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ
Rameshwaram Cafe blast: ಕೊನೆಗೂ ಬಾಂಬರ್ ಗಳ ಬಂಧನ, ಬಂಗಾಳದಲ್ಲಿ ಇಬ್ಬರು ಶಂಕಿತರು NIA ವಶಕ್ಕೆ!

ಅಂತೆಯೇ ಸಿದ್ದರಾಮಯ್ಯನವರ ‘ಈಸ್ ಆಫ್ ಡೂಯಿಂಗ್ ಟೆರರ್’ ನೀತಿಗಳು ಜಾಗತಿಕ ಉಗ್ರ ಸಂಘಟನೆ ಐಸಿಸ್ (ISIS) ಈಗ ಕರ್ನಾಟಕದಲ್ಲಿ ತನ್ನ ಕೇಂದ್ರ ಸ್ಥಾಪಿಸಲು ಪ್ರೇರೇಪಿಸಿದೆ. ಸಮೃದ್ಧ ಕರ್ನಾಟಕವನ್ನು ಭಯೋತ್ಪಾದನಾ ಕೇಂದ್ರವನ್ನಾಗಿ ಪರಿವರ್ತಿಸುವುದೊಂದೇ ಸಿದ್ದರಾಮಯ್ಯ ಈಡೇರಿಸಿರುವ ಗ್ಯಾರಂಟಿ ಎಂದು ಬಿಜೆಪಿ ಕಿಡಿಕಾರಿದೆ.

ಅಂದಹಾಗೆ ಪಶ್ಚಿಮ ಬಂಗಾಳ ರಾಜದಾನಿ ಕೋಲ್ಕತಾದಲ್ಲಿ ಎನ್ಐಎ ಅಧಿಕಾರಿಗಳು ಇಂದು ರಾಮೇಶ್ವರಂ ಕೆಫೆ ಸ್ಛೋಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳಾದ ಶಂಕಿತ ಮುಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮತೀನ್ ಅಹಮದ್ ತಾಹಾರನ್ನು ಬಂಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com