IISc ಸಂಶೋಧನೆ: ನೀರಿನಿಂದ ಪ್ಲಾಸ್ಟಿಕ್ ತೆಗೆದುಹಾಕುವ ತಂತ್ರಜ್ಞಾನ ಅಭಿವೃದ್ಧಿ

ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕವಾಗಿದ್ದು, ಮೈಕ್ರೋಪ್ಲಾಸ್ಟಿಕ್‌ನಿಂದ ಮನುಷ್ಯರಿಗೆ ಹೆಚ್ಚಿನ ಅಪಾಯವಿದೆ. ಪ್ಲಾಸ್ಟಿಕ್ ಅವಶೇಷಗಳ ಸಣ್ಣ ತುಂಡುಗಳು ನೀರು ಮತ್ತು ಸೇವಿಸುವ ಇತರ ದ್ರವಗಳ ಮೂಲಕ ಮಾನವ ದೇಹವನ್ನು ಪ್ರವೇಶಿಸಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ.
ಐಐಎಸ್ಸಿ
ಐಐಎಸ್ಸಿ
Updated on

ಬೆಂಗಳೂರು: ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕವಾಗಿದ್ದು, ಮೈಕ್ರೋಪ್ಲಾಸ್ಟಿಕ್‌ನಿಂದ ಮನುಷ್ಯರಿಗೆ ಹೆಚ್ಚಿನ ಅಪಾಯವಿದೆ. ಪ್ಲಾಸ್ಟಿಕ್ ಅವಶೇಷಗಳ ಸಣ್ಣ ತುಂಡುಗಳು ನೀರು ಮತ್ತು ಸೇವಿಸುವ ಇತರ ದ್ರವಗಳ ಮೂಲಕ ಮಾನವ ದೇಹವನ್ನು ಪ್ರವೇಶಿಸಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ.

ಇವು ಧ್ರುವೀಯ ಮಂಜುಗಡ್ಡೆಗಳಲ್ಲಿ ಮತ್ತು ಸಮುದ್ರದ ಆಳದಲ್ಲಿ ಕಂಡುಬರುವುದರಿಂದ ಪರಿಸರಕ್ಕೆ ಕೂಡ ಅಪಾಯಕಾರಿ. ಜಲಮೂಲಗಳಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಮತ್ತು ಮೈಕ್ರೋಪ್ಲಾಸ್ಟಿಕ್‌ಗಳ ಪ್ರಮಾಣವನ್ನು ಬಹು ಅಧ್ಯಯನಗಳು ಬಹಿರಂಗಪಡಿಸಿವೆ. ನೀಲಿ ಪ್ಲಾಸ್ಟಿಕ್‌ನ ಪ್ರಮಾಣವನ್ನು ಅಧ್ಯಯನ ಮಾಡಲು ಮತ್ತು ಅದನ್ನು ನೀರಿನಿಂದ ತೆಗೆದುಹಾಕಲು ಸಂಶೋಧನೆಗಳನ್ನು ನಡೆಸಲಾಗುತ್ತಿವೆ.

ನೀರಿನಿಂದ ಮೈಕ್ರೋಪ್ಲಾಸ್ಟಿಕ್ ನ್ನು ತೆಗೆದುಹಾಕುವ ಹೈಡ್ರೋಜೆಲ್ ನ್ನು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನ(IISC) ಸಂಶೋಧಕರು ವಿನ್ಯಾಸಗೊಳಿಸಿದ್ದಾರೆ. ಇದು UV ಬೆಳಕಿನ ವಿಕಿರಣವನ್ನು ಬಳಸಿಕೊಂಡು ಅವುಗಳನ್ನು ಕುಗ್ಗಿಸುತ್ತದೆ.

ಹಿಂದೆ, ವಿಜ್ಞಾನಿಗಳು ಮೈಕ್ರೊಪ್ಲಾಸ್ಟಿಕ್‌ಗಳನ್ನು ತೆಗೆದುಹಾಕಲು ಫಿಲ್ಟರಿಂಗ್ ಮೆಂಬರೇನ್‌ಗಳನ್ನು ಬಳಸಲು ಪ್ರಯತ್ನಿಸಿದರು. ನಂತರ ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಸೂರ್ಯಸಾರಥಿ ಬೋಸ್ ನೇತೃತ್ವದ ತಂಡವು 3D ಹೈಡ್ರೋಜೆಲ್‌ಗಳನ್ನು ಬಳಸಲು ನಿರ್ಧರಿಸಿತು.

ಈ ವಿಶಿಷ್ಟ ಹೈಡ್ರೋಜೆಲ್ ಮೂರು ವಿಭಿನ್ನ ಪಾಲಿಮರ್ ಪದರಗಳನ್ನು ಒಳಗೊಂಡಿದೆ - ಚಿಟೋಸಾನ್, ಪಾಲಿವಿನೈಲ್ ಆಲ್ಕೋಹಾಲ್ ಮತ್ತು ಪಾಲಿಯಾನಿಲಿನ್ - ಒಟ್ಟಿಗೆ ಹೆಣೆದುಕೊಂಡಿದೆ, ಇದು ಇಂಟರ್‌ಪೆನೆಟ್ರೇಟಿಂಗ್ ಪಾಲಿಮರ್ ನೆಟ್‌ವರ್ಕ್ ಆರ್ಕಿಟೆಕ್ಚರ್ ನ್ನು ಮಾಡುತ್ತದೆ. ಈ ನ್ಯಾನೊಕ್ಲಸ್ಟರ್‌ಗಳು ಮೈಕ್ರೋಪ್ಲಾಸ್ಟಿಕ್ ನ್ನು ಕೆಡಿಸಲು UV ಬೆಳಕನ್ನು ಬಳಸುವ ವೇಗವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಪಾಲಿಮರ್‌ಗಳು ಮತ್ತು ನ್ಯಾನೊಕ್ಲಸ್ಟರ್‌ಗಳ ಸಂಯೋಜನೆಯು ಪ್ರಬಲವಾದ ಹೈಡ್ರೋಜೆಲ್‌ಗೆ ಕಾರಣವಾಯಿತು, ಇದು ಹೆಚ್ಚಿನ ಪ್ರಮಾಣದ ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೀರಿಕೊಳ್ಳುತ್ತದೆ ಮತ್ತು ಕೆಡಿಸುತ್ತದೆ.

ಐಐಎಸ್ಸಿ
ಬೆಂಗಳೂರು ಐಐಎಸ್ಸಿ ದೇಶದಲ್ಲೇ ಅತ್ಯುತ್ತಮ ವಿವಿ, ಸಂಶೋಧನಾ ಸಂಸ್ಥೆ

ಹೆಚ್ಚಿನ ಮೈಕ್ರೋಪ್ಲಾಸ್ಟಿಕ್‌ಗಳು ಮನೆಯ ಪ್ಲಾಸ್ಟಿಕ್‌ಗಳು ಮತ್ತು ಫೈಬರ್‌ಗಳ ಅಪೂರ್ಣ ವಿಭಜನೆಯ ಉತ್ಪನ್ನವಾಗಿದೆ ಎಂದು ಸಂಶೋಧಕರು ಗಮನಿಸಿದ್ದಾರೆ. ಪ್ರಯೋಗಾಲಯದಲ್ಲಿ ಇದನ್ನು ಅನುಕರಿಸಲು, ತಂಡವು ಆಹಾರದ ಕಂಟೇನರ್ ಮುಚ್ಚಳಗಳನ್ನು ಮತ್ತು ಇತರ ದೈನಂದಿನ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪುಡಿಮಾಡಿ ಪ್ರಕೃತಿಯಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ಸಾಮಾನ್ಯವಾದ ಮೈಕ್ರೋಪ್ಲಾಸ್ಟಿಕ್ - ಪಾಲಿವಿನೈಲ್ ಕ್ಲೋರೈಡ್ ಮತ್ತು ಪಾಲಿಪ್ರೊಪಿಲೀನ್ ನ್ನು ರಚಿಸಿದೆ.

"ಇದಲ್ಲದೆ, ಮೈಕ್ರೋಪ್ಲಾಸ್ಟಿಕ್ ನ್ನು ತೆಗೆದುಹಾಕುವುದರೊಂದಿಗೆ ಮತ್ತೊಂದು ಪ್ರಮುಖ ಸಮಸ್ಯೆ, ಪತ್ತೆಹಚ್ಚುವಿಕೆಯಾಗಿದೆ. ಈ ಸಣ್ಣ ಕಣಗಳನ್ನು ಬರಿಗಣ್ಣಿನಿಂದ ನೋಡಲಾಗುವುದಿಲ್ಲ ಎಂದು ನ್ಯಾನೊಸ್ಕೇಲ್‌ನಲ್ಲಿ ಪ್ರಕಟವಾದ ಅಧ್ಯಯನದ ಮೊದಲ ಲೇಖಕಿ ಮತ್ತು ಮೆಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗದ SERB ನ್ಯಾಷನಲ್ ಪೋಸ್ಟ್-ಡಾಕ್ಟರಲ್ ಫೆಲೋ ಸೌಮಿ ದತ್ತಾ ಹೇಳುತ್ತಾರೆ.

ಇದನ್ನು ಪರಿಹರಿಸಲು, ಸಂಶೋಧಕರು ಮೈಕ್ರೋಪ್ಲಾಸ್ಟಿಕ್‌ಗಳಿಗೆ ಪ್ರತಿದೀಪಕ ಬಣ್ಣವನ್ನು ಸೇರಿಸುತ್ತಾರೆ. ಹೈಡ್ರೋಜೆಲ್ ನೀರಿನಲ್ಲಿರುವ ಎರಡು ವಿಭಿನ್ನ ರೀತಿಯ ಮೈಕ್ರೋಪ್ಲಾಸ್ಟಿಕ್‌ಗಳಲ್ಲಿ ಸುಮಾರು ಶೇಕಡಾ 95ರಷ್ಟನ್ನು ತೆಗೆದುಹಾಕುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com