ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿ ಮತ್ತೆ ದರೋಡೆ: ಕಾರು ಅಡ್ಡಗಟ್ಟಿ ದಂಪತಿಗಳ ಬೆದರಿಸಿ ಸುಲಿಗೆ!

ಯುಗಾದಿ ಹಬ್ಬದ ಪ್ರಯುಕ್ತ ಮಂಡ್ಯ ಬಳಿ ದೇವಸ್ಥಾನಕ್ಕೆ ತೆರಳುತ್ತಿದ್ದ ಐವರ ಕುಟುಂಬದವರ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿ, ದರೋಡೆ ಮಾಡಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಳೆದ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಮಂಡ್ಯ ಬಳಿ ದೇವಸ್ಥಾನಕ್ಕೆ ತೆರಳುತ್ತಿದ್ದ ಐವರ ಕುಟುಂಬದವರ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿ, ದರೋಡೆ ಮಾಡಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಳೆದ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಯುಗಾದಿ ಹಬ್ಬದ ದಿನ ರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಲಂಬಾಣಿ ತಾಂಡ್ಯ ಮತ್ತು ದೇವರಹೊಸಹಳ್ಳಿ ನಡುವೆ ಈ ಘಟನೆ ನಡೆದಿದೆ.

ಮಾರತ್ತಹಳ್ಳಿಯ ಮಂಜುನಾಥ್ ಲೇಔಟ್ ನಿವಾಸಿ ಮಹೇಂದ್ರ ಮಹದೇವ್ (29) ಎಂಬುವುದು ಈ ಸಂಬಂಧ ದೂರು ದಾಖಲಿಸಿದ್ದಾರೆ.

ಹೊಸ ಆಟೋರಿಕ್ಷಾ ಖರೀದಿಸಿದ್ದರಿಂದ ಮಹೇಂದ್ರ ಮತ್ತು ಆತನ ಪತ್ನಿ, ಆತನ ಸೋದರ ಸಂಬಂಧಿ ವರುಣ್ ಮತ್ತು ಇತರ ಇಬ್ಬರು ಮಾದೇಶ್ ಮತ್ತು ಭರತ್ ಹುಣಸೂರು ತಾಲೂಕಿನ ದೇವಸ್ಥಾನಕ್ಕೆ ತೆರಳುತ್ತಿದ್ದರು, ಮಹೇಂದ್ರ ಮಹದೇವ್ ಮತ್ತು ಅವರ ಪತ್ನಿ ಮಮತಾ ಕಾರಿನಲ್ಲಿ ತೆರಳುತ್ತಿದ್ದರೆ, ವರುಣ್, ಮಾದೇಶ್ ಮತ್ತು ಭರತ್ ಹೊಸದಾಗಿ ಖರೀದಿಸಿದ್ದ ಆಟೋದಲ್ಲಿ ತೆರಳುತ್ತಿದ್ದರು.

ಸಂಗ್ರಹ ಚಿತ್ರ
ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ವೃದ್ಧ ಮಹಿಳೆ ಕಟ್ಟಿ ಹಾಕಿ ದರೋಡೆ!

ಈ ನಡುವೆ ಬೈಕ್ ನಲ್ಲಿ ಬಂದಿರುವ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ, ಕಾರಿನ ಗಾಜು ಒಡೆದಿದ್ದಾರೆ. ಬಳಿಕ ಪೆಪ್ಪರ್ ಸ್ಪ್ರೇ ಬಳಸಿ, ಮಚ್ಚಿನಿಂದ ಹಲ್ಲೆ ನಡೆಸಿ, ಮಮತಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದಿದ್ದಾರೆ.

ಈ ನಡುವೆ ತನ್ನನ್ನು ಹಿಂಬಾಲಿಸುತ್ತಿದ್ದ ಮಹೇಂದ್ರ ಅವರ ಕಾರು ಕಾಣದ ಕಾರಣ ವರುಣ್ ಆಟೋವನ್ನು ಮತ್ತೆ ಹಿಂದಕ್ಕೆ ತಿರುಗಿಸಿಕೊಂಡು ಹೋಗಿದ್ದಾನೆ. ಈ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗುತ್ತಿರುವುದು ಕಂಡು ಬಂದಿದೆ. ಕೂಡಲೇ ಮಹೇಂದ್ರ ಅವರನ್ನು ರಕ್ಷಣೆ ಮಾಡಲು ಹೋದಾಗ ದುಷ್ಕರ್ಮಿಗಳು ಇವರ ಮೇಲೂ ಪೆಪ್ಪರ್ ಸ್ಪ್ರೇ ದಾಳಿ ನಡೆಸಿ, ಪರಾರಿಯಾಗಿದ್ದಾರೆ. ಈ ವೇಳೆ ಆಟೋ ಗಾಜನ್ನೂ ಒಡೆದಿದ್ದಾರೆ.

ಬಳಿಕ ಸಂತ್ರಸ್ತರು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರ ತಂಡ ಸ್ಥಳಕ್ಕೆ ಧಾವಿದ್ದಾರೆ. ಪೆಪ್ಪರ್ ಸ್ಪ್ರೇ ದಾಳಿ ನಡೆಸಿದ್ದರಿಂದ ಬೈಕ್ ನ ನೋಂದಣಿ ಸಂಖ್ಯೆಯನ್ನು ಗಮನಿಸಲು ಸಂತ್ರಸ್ತರಿಗೆ ಸಾಧ್ಯವಾಗಿಲ್ಲ. ಆರೋಪಿಗಳು 10 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com