ನನ್ನ ಪೂರ್ವಜರಂತೆ ನಾನು ಕೂಡ ಜನರಿಗಾಗಿ ಶ್ರಮಸುತ್ತೇನೆ: ಯದುವೀರ್ ಕೃಷ್ಣದತ್ತ ಒಡೆಯರ್

ನನ್ನ ಪೂರ್ವಜರಂತೆ ನಾನು ಕೂಡ ಜನರಿಗಾಗಿ ಶ್ರಮಸುತ್ತೇನೆಂದು ಮೈಸೂರು ಕ್ಷೇತ್ರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾನುವಾರ ಹೇಳಿದರು.
ಯದುವೀರ್ ಕೃಷ್ಣದತ್ತ ಒಡೆಯರ್
ಯದುವೀರ್ ಕೃಷ್ಣದತ್ತ ಒಡೆಯರ್

ಮೈಸೂರು: ನನ್ನ ಪೂರ್ವಜರಂತೆ ನಾನು ಕೂಡ ಜನರಿಗಾಗಿ ಶ್ರಮಸುತ್ತೇನೆಂದು ಮೈಸೂರು ಕ್ಷೇತ್ರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾನುವಾರ ಹೇಳಿದರು.

ಮಹಾರಾಜ ಮೈದಾನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಭಾನುವಾರ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗೆ ಜನರ ಮಧ್ಯೆ ಇದ್ದು ಗೊತ್ತಿಲ್ಲ ಎಬ ಕಾಂಂಗ್ರೆಸ್ ನಾಯಕರ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಯದುವೀರ್ ಕೃಷ್ಣದತ್ತ ಒಡೆಯರ್
ರಾಜವಂಶಸ್ಥ V/S ಜನಸಾಮಾನ್ಯ: ಮೈಸೂರು-ಕೊಡಗಿನಲ್ಲಿ ನಿರ್ಣಾಯಕವಾಗುತ್ತಾ ಒಕ್ಕಲಿಗ ಮತಗಳು?

ನನ್ನ ಪೂರ್ವಜರು ಅರಮನೆಯಲ್ಲಿ ಆಡಳಿತ ನಡೆಸುತ್ತಿದ್ದಾಗ ಜನರ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ನಾನು ಅರಮನೆಯಲ್ಲಿ ಹುಟ್ಟಿ ಬೆಳೆದರೂ ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಜನರೊಂದಿಗೆ ನಿಂತು ಅವರ ಶ್ರೇಯೋಭಿವೃದ್ಧಿಗಾಗಿ ಪ್ರತಿಪಾದಿಸುವ ಸಂಕಲ್ಪ ಮಾಡಿದ್ದೇನೆ. ಚಾಮುಂಡೇಶ್ವರಿ ದೇವಿಯ ರಥವನ್ನು ಒಡೆಯರ್‌ಗಳು ಎಳೆದಂತೆಯೇ, ಈಗ ಪ್ರಧಾನಿ ಮೋದಿಯವರೊಂದಿಗೆ ಭಾರತ ಮಾತೆಯ ರಥವನ್ನು ಮುನ್ನಡೆಸುತ್ತೇನೆ. ಇದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಇದೇ ವೇಳೆ ಮೋದಿಯವರ 10 ವರ್ಷಗಳ ಆಡಳಿತಾವಧಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉಲ್ಲೇಖಿಸಿದರು. ಪ್ರಧಾನಿ ಮೋದಿಯವರು ಆಧುನಿಕ ಯೋಗವನ್ನು ಜಗತ್ತಿಗೆ ಪರಿಚಯಿಸಿದರು, ಮೋದಿಯವರ ಈ ಪ್ರಯತ್ನ ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆಯನ್ನು ಗಳಿಸಿವೆ, ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿವೆ ಎಂದು ಪ್ರತಿಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com