ನಾನು ಸ್ವತಂತ್ರ, ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ಜೊತೆ ಗುರುತಿಸಿಕೊಂಡಿಲ್ಲ: ಬಂಡಾಯ ಅಭ್ಯರ್ಥಿ ಈಶ್ವರಪ್ಪ

ಕೆಎಸ್ ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪonline desk

ಶಿವಮೊಗ್ಗ: ಕೆಎಸ್ ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಈಶ್ವರಪ್ಪ ತಾವು ಸ್ವತಂತ್ರರಾಗಿದ್ದು, ಶಿಸ್ತು ಕ್ರಮ ಎದುರಿಸುವುದಕ್ಕೆ ತಾವು ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಕೆಎಸ್ ಈಶ್ವರಪ್ಪ, ಬಿವೈ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವಾಗ ಆತ (ವಿಜಯೇಂದ್ರ) ನನ್ನ ವಿರುದ್ಧ ಏನು ಶಿಸ್ತು ಕ್ರಮ ಕೈಗೊಳ್ಳುತ್ತಾರೆ? ನಾನು ಪಕ್ಷದಿಂದ ಹೊರಬಂದಿದ್ದೇನೆ, ಪಕ್ಷದ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರಗೆ ಪಕ್ಷೇತರವಾಗಿ ಸ್ಪರ್ಧಿಸುವುದು ಎಂದರೇನು ಎಂಬುದೂ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಕೆ.ಎಸ್ ಈಶ್ವರಪ್ಪ
ಅಪ್ಪ-ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಗೊಳಿಸುವುದೇ ನನ್ನ ಚುನಾವಣಾ ಪ್ರಣಾಳಿಕೆ: ಕೆ ಎಸ್ ಈಶ್ವರಪ್ಪ

ಮಾಧ್ಯಮಗಳೊಂದಿಗೆ ಮಾತನಾಡಿರುವ ಈಶ್ವರಪ್ಪ, ನಿಮಗೆ ಅದ್ಯಾವ ಶಿಸ್ತು ಕ್ರಮ ಬೇಕೋ ತೆಗೆದುಕೊಳ್ಳಿ, ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ, ನನ್ನ ಉದ್ದೇಶಗಳು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಗಳಂತೆಯೇ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ನ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಕುಟುಂಬ ರಾಜಕಾರಣದ ವಿರುದ್ಧ ಹೋರಾಡುತ್ತಿರುವುದಾಗಿ ಹೇಳುತ್ತಾರೆ. ನನ್ನ ಉದ್ದೇಶವೂ ರಾಜ್ಯದಲ್ಲಿ ಬಿಜೆಪಿಯನ್ನು ಅಪ್ಪ ಮಕ್ಕಳ (ಯಡಿಯೂರಪ್ಪ- ಹಾಗು ಪುತ್ರರು) ಹಿಡಿತದಿಂದ ಮುಕ್ತಗೊಳಿಸುವುದಾಗಿದೆ ಎಂದು ಹೇಳಿದ್ದಾರೆ.

ಈಶ್ವರಪ್ಪ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ವಿಜಯೇಂದ್ರ ಸೋಮವಾರ ಮೊದಲ ಬಾರಿಗೆ ಮಾತನಾಡಿದ್ದರು. ಈಶ್ವರಪ್ಪ ಈಗಾಗಲೇ ಶಿವಮೊಗ್ಗ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷ, ಅವರ ಸಹೋದರ ಸಂಸದ, ತಂದೆ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ವ್ಯಂಗ್ಯವಾಡಿರುವ ಈಶ್ವರಪ್ಪ, ಕುಟುಂಬದಲ್ಲಿ ಯಾರಿಗಾದರೂ ಸ್ಥಾನ ತಪ್ಪಿದ್ದರೆ ಅವರಿಗೂ ಸ್ಥಾನ ನೀಡಿ, ಪಕ್ಷ ಇರುವುದು ನಿಮ್ಮ ಹಾಗೂ ನಿಮ್ಮ ಕುಟುಂಬದ ಸೇವೆ ಮಾಡುವುದಕ್ಕಾಗಿ, ಪಕ್ಷ ಕಟ್ಟಲು ಲಕ್ಷಾಂತರ ಕಾರ್ಯಕರ್ತರು ರಕ್ತ, ಬೆವರು ಸುರಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಕೆ.ಎಸ್ ಈಶ್ವರಪ್ಪ
ಕೆ ಎಸ್ ಈಶ್ವರಪ್ಪ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿ ಬಂದಿದ್ರಾ? ಎಲ್ಲರ ಗಮನ ಸೆಳೆದ ಈ ವ್ಯಕ್ತಿ ಯಾರು?!

"ನಿಮ್ಮ (ವಿಜಯೇಂದ್ರ) ಕೊಡುಗೆ ಏನು? ಎಚ್ಚರಿಕೆಯಿಂದ ಮಾತನಾಡಿ.... ಹೋಗಿ ನೋಡಿ ಶಿಕಾರಿಪುರದಲ್ಲಿಯೂ ಜನರು ನಿಮ್ಮ ಮೇಲೆ ಎಷ್ಟು ಕೋಪ ಹೊಂದಿದ್ದಾರೆ, ನೀವು ಅಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಹಣದಿಂದ ಗೆದ್ದಿದ್ದೀರಿ ಎಂದು ಜನರು ಹೇಳುತ್ತಿದ್ದಾರೆ, ಈ ಚುನಾವಣೆಯಲ್ಲಿ ಹಣದ ಅಂಶವಿಲ್ಲ, ಜನರು ನನ್ನೊಂದಿಗಿದ್ದಾರೆ, ನಾನು ಶಿಕಾರಿಪುರದಲ್ಲಿ ತಂದೆ ಮತ್ತು ಮಕ್ಕಳ ಶಿಕಾರಿ (ಬೇಟೆ) ಮಾಡುತ್ತೇನೆ, ನಾನು ಅವರನ್ನು ಈ ಬಾರಿ ಬಿಡುವುದಿಲ್ಲ ಈಶ್ವರಪ್ಪ ಸವಾಲು ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com