ಯುವತಿಗೆ ಇರಿದ ಭಗ್ನಪ್ರೇಮಿ; ಲವ್ ಜಿಹಾದ್ ಎಂದ ಬಿಜೆಪಿ, ವೈಯುಕ್ತಿಕ ಕಾರಣ ಎಂದ ಸರ್ಕಾರ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ- ಈ ದಿನದ ಸುದ್ದಿ ಮುಖ್ಯಾಂಶಗಳು 19-04-2024

ಪ್ರೀತಿಸಲು ನಿರಾಕರಿಸಿದ ಕಾರಣ ಯುವತಿಯೊಬ್ಬಳನ್ನು ಭಗ್ನ ಪ್ರೇಮಿಯೊಬ್ಬ ಆಕೆಯನ್ನು ಇರಿದು ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದೆ.
ಸುದ್ದಿ ಮುಖ್ಯಾಂಶಗಳು 19-04-2024
ಸುದ್ದಿ ಮುಖ್ಯಾಂಶಗಳು 19-04-2024

1. ಯುವತಿಗೆ ಇರಿದ ಭಗ್ನಪ್ರೇಮಿ

ಪ್ರೀತಿಸಲು ನಿರಾಕರಿಸಿದ ಕಾರಣ ಯುವತಿಯೊಬ್ಬಳನ್ನು ಭಗ್ನ ಪ್ರೇಮಿಯೊಬ್ಬ ಆಕೆಯನ್ನು ಇರಿದು ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದೆ. ಹುಬ್ಬಳ್ಳಿ-ಧಾರವಾಡ ಪುರಸಭೆಯ ಕಾಂಗ್ರೆಸ್ ನ ಕೌನ್ಸಿಲರ್ ನಿರಂಜನ ಹಿರೇಮಠ ಅವರ ಪುತ್ರಿ 23 ವರ್ಷದ ನೇಹಾ ಹತ್ಯೆಗೀಡಾದ ವಿದ್ಯಾರ್ಥಿನಿಯಾಗಿದ್ದಾರೆ. ಫಯಾಜ್ ಎಂಬಾತ ಈ ಕೃತ್ಯ ಎಸಗಿದ್ದು, ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

2. Love Jihad ಎಂದ BJP

ಮರಣೋತ್ತರ ಪರೀಕ್ಷೆ ಬಳಿಕ ಯುವತಿಯ ಅಂತ್ಯಕ್ರಿಯೆ ನಡೆದಿದೆ. ಇದಕ್ಕೂ ಮುನ್ನ ದಿಂಗಾಲೇಶ್ವರ ಸ್ವಾಮೀಜಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮೂರುಸಾವಿರ ಮಠದ ಗುರುಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಮೃತ ಯುವತಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಸರ್ಕಾರ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ನನ್ನ ಮಗಳಿಗೆ ಆದ ಅನ್ಯಾಯ ಬೇರೆ ಹೆಣ್ಣು ಮಕ್ಕಳಿಗೆ ಆಗಬಾರದು ಎಂದು ಯುವತಿ ತಂದೆ ನಿರಂಜನ ಹಿರೇಮಠ ಆಗ್ರಹಿಸಿದ್ದಾರೆ. ಈ ನಡುವೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ, ಹತ್ಯೆಯನ್ನು ಖಂಡಿಸಿ ಮಹಾನಗರ ವ್ಯಾಪ್ತಿಯ ಕಾಲೇಜುಗಳ ಬಂದ್ ಗೆ ಕರೆ ನೀಡಿದ್ದ ಎಬಿವಿಪಿ ಘಟನೆ ನಡೆದ ಕಾಲೇಜು ಎದುರು ಪ್ರತಿಭಟನೆ ನಡೆಸಿತು.

3. ವೈಯುಕ್ತಿಕ ಕಾರಣ ಎಂದ ಸರ್ಕಾರ

ಇದು ಲವ್ ಜಿಹಾದ್ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿ ದೂರವಾಗಲು ಯತ್ನಿಸಿದಾಗ ಯುವಕ ಈ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಇದೆ, ಇಂತಹ ಘಟನೆಗಳು ಆಕಸ್ಮಿಕವಾಗಿ ಸಂಭವಿಸುತ್ತವೆ ಎಂದು ಹೇಳಿದ್ದರೆ, ವೈಯಕ್ತಿಕ ಕಾರಣಕ್ಕೆ ನೇಹಾ ಕೊಲೆಯಾಗಿದ್ದು, ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈಮಧ್ಯೆ, ಆರೋಪಿ ಫಯಾಜ್ ನನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ವಹಿಸಿದೆ.

4. ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ

ಗದಗ- ಬೆಟಗೇರಿ ನಗರಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮೃತರನ್ನು ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಕುಟುಂಬ ಸದಸ್ಯರು ಹತ್ಯೆಗೀಡಾಗಿದ್ದು, ಮಲಗಿದಲ್ಲೇ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಪುತ್ರನ ವಿವಾಹ ನಿಶ್ಚಯ ಮಾಡುವುದಕ್ಕಾಗಿ ಕೊಪ್ಪಳ ಮೂಲದ ಸಂಬಂಧಿಗಳು ಸುನಂದಾ ಬಾಕಳೆ ಮನೆಗೆ ಆಗಮಿಸಿದ್ದರು. ತಡರಾತ್ರಿ ಬಾಗಿಲು ಸದ್ದು ಕೇಳಿ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ಫೋನ್ ಮಾಡಿದ್ದು, ಪೊಲೀಸರಿಗೆ ಫೋನ್ ಮಾಡ್ತಾಯಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಸುನಂದಾ ಬಾಕಳೆ ಕುಟುಂಬ
ಸುನಂದಾ ಬಾಕಳೆ ಕುಟುಂಬ

5. ನಟಿ Harshika-Bhuvan ದಂಪತಿ ಮೇಲೆ ಹಲ್ಲೆ

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಮತ್ತು ನಟ ಭುವನ್ ಪೊನ್ನಣ್ಣ ದಂಪತಿ ಬೆಂಗಳೂರಿನ ಫ್ರೇಜರ್ ಟೌನ್ ಪ್ರದೇಶದಲ್ಲಿ ತಮಗಾದ ಕರಾಳ ಅನುಭವ ಹಂಚಿಕೊಂಡಿದ್ದಾರೆ. ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ರೆಸ್ಟೊರೆಂಟ್‌ವೊಂದರಲ್ಲಿ ಊಟಕ್ಕೆ ಹೋದಾಗ, ಅಲ್ಲಿನ ಕೆಲವು ಅನ್ಯಕೋಮಿನವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ. ವಾಹನಕ್ಕೆ ಸಂಬಂಧಿಸಿದಂತೆ ವಾಗ್ವಾದ ಪ್ರಾರಂಭವಾಗಿದ್ದು, ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ನಿಂದಿಸಿ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ಚಿನ್ನದ ಸರ ಮತ್ತು ಇತರ ಬೆಲೆಬಾಳುವ ವಸ್ತುಗಳು ಕೈಗೆ ಸಿಗದೇ ಇದ್ದಿದ್ದರಿಂದ ರೊಚ್ಚಿಗೆದ್ದಿದ್ದರು. ವಾಹನಕ್ಕೆ ಹಾನಿ ಮಾಡಿ, ನಮಗೆ ಅಥವಾ ಯಾರಿಗೂ ಅರ್ಥವಾಗದ ಭಾಷೆಯಲ್ಲಿ ನಮ್ಮನ್ನು ನಿಂದಿಸಿದ್ದಾರೆ ಎಂದು ಹರ್ಷಿಕಾ ಆರೋಪಿಸಿದ್ದಾರೆ.

6. ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ

ಮಾಜಿ ಸಚಿವ ಹಾಗೂ ಕಲಬುರಗಿಯ ಪ್ರಭಾವಿ ನಾಯಕ ಮಾಲೀಕಯ್ಯ ಗುತ್ತೇದಾರ್ ಹಾಗೂ ಮಾಜಿ ಶಾಸಕಿ ಶಾರದಾ ಶೆಟ್ಟಿ ಇಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದರು. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದ ಮಾಲೀಕಯ್ಯ ಗುತ್ತೇದಾರ್ ಅಫ್ಜಲ್ ಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದರು. 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಎಂವೈ ಪಾಟೀಲ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಬಿಜೆಪಿಯಲ್ಲಿದ್ದ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆಯಾಗಲು ಅವರ ಸಹೋದರ ನಿತಿನ್ ಗುತ್ತೇದಾರ್‌ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿರುವುದು ಕಾರಣ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com