ಧಾರವಾಡ: ಚಾವಟಿ ಬಡಿಯುತ್ತಾ ಬರಿಗಾಲಲ್ಲಿ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ! ಯಾರೂ ಈ ಮಲ್ಲಿಕಾರ್ಜುನಗೌಡ!

ಶಿರೂರು ಗ್ರಾಮದ ನಿವಾಸಿ ಮಲ್ಲಿಕಾರ್ಜುನಗೌಡ ಅವರು ಧಾರವಾಡ ಸಂಸದೀಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೈಯಲ್ಲಿ ಚಾವಟಿ ಹಿಡಿದು ಬರಿಗಾಲಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ ರೀತಿ ಇದೀಗ ಎಲ್ಲರ ಗಮನ ಸೆಳೆದಿದೆ.
ಮಲ್ಲಿಕಾರ್ಜುನಗೌಡ
ಮಲ್ಲಿಕಾರ್ಜುನಗೌಡTNIE
Updated on

ಧಾರವಾಡ: ಶಿರೂರು ಗ್ರಾಮದ ನಿವಾಸಿ ಮಲ್ಲಿಕಾರ್ಜುನಗೌಡ ಅವರು ಧಾರವಾಡ ಸಂಸದೀಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೈಯಲ್ಲಿ ಚಾವಟಿ ಹಿಡಿದು ಬರಿಗಾಲಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ ರೀತಿ ಇದೀಗ ಎಲ್ಲರ ಗಮನ ಸೆಳೆದಿದೆ.

ಕೈಯಲ್ಲಿ ಚಾಟಿ ಹಿಡಿದು ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಅವರು, ಚುನಾವಣಾ ಕಾಲದ ಗದ್ದಲದ ವಾತಾವರಣದ ನಡುವೆ ಮತದಾರರನ್ನು ತಲುಪುವ ಅವರ ವಿಶಿಷ್ಟ ವಿಧಾನ ಗಮನಾರ್ಹವಾಗಿದೆ. ರಾಜಕೀಯ ಪ್ರಚಾರಗಳು ವಿಶಿಷ್ಟವಾಗಿ ಪ್ರಮುಖ ನಾಯಕರಿಂದ ಭವ್ಯವಾದ ರ್ಯಾಲಿಗಳು ಮತ್ತು ಅದ್ಧೂರಿ ರೋಡ್‌ಶೋಗಳನ್ನು ಒಳಗೊಂಡಿರುತ್ತದೆ. ಆದರೆ ಮಲ್ಲಿಕಾರ್ಜುನಗೌಡರ ಶೈಲಿಯು ಅದರ ಸರಳತೆ ಮತ್ತು ದಿಟ್ಟತನಕ್ಕಾಗಿ ಎದ್ದು ಕಾಣುತ್ತದೆ.

ತಮ್ಮ ವಿಶಿಷ್ಟ ವಿಧಾನದ ಮೂಲಕ ಕರ್ನಾಟಕದಲ್ಲಿ ಬೆಳೆಹಾನಿಯಿಂದ ನಲುಗುತ್ತಿರುವ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಲು ಉದ್ದೇಶಿಸಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಅವರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ. ಅವರು ತುಂಬಾ ಆಕ್ರೋಶಗೊಂಡಿದ್ದಾರೆ. ಉತ್ತರ ಕರ್ನಾಟಕದ ರೈತರಿಗೆ ಬೆಳೆ ವಿಮೆ ಅಥವಾ ಪರಿಹಾರ ಸಿಕ್ಕಿಲ್ಲ. ಅಲ್ಲದೇ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ, ಕುಡಿಯುವ ನೀರು ಕೂಡ ಸಿಗುತ್ತಿಲ್ಲ. ನಾವು ಎದುರಿಸುತ್ತಿರುವ ಸಮಸ್ಯೆಗಳು ಪ್ರಧಾನಿ ಮೋದಿ ಮತ್ತು ಸಿದ್ದರಾಮಯ್ಯ ಅವರಿಗೆ ಅರ್ಥವಾಗುತ್ತಿಲ್ಲ. ಚುನಾವಣೆವರೆಗೂ ಪಾದರಕ್ಷೆ ಧರಿಸುವುದಿಲ್ಲ ಎಂದು ನಿರ್ಧರಿಸಿದ್ದೆ. ಇಂದು ನಾನು ಉಳವಿ ಚೆನ್ನಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಪಾದರಕ್ಷೆ ಧರಿಸದಿರಲು ನಿರ್ಧರಿಸಿದ್ದೆೇನೆ ಎಂದರು.

ಮಲ್ಲಿಕಾರ್ಜುನಗೌಡ
'ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನನ್ನು ಗೆಲುವಿನತ್ತ ಕೊಂಡೊಯ್ಯುತ್ತವೆ': ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ

ಚಾವಟಿ ಬಡಿಯುವ ತಮ್ಮ ನಿರ್ಧಾರವು ಅಧಿಕಾರ ಮತ್ತು ಶಿಸ್ತನ್ನು ಸಂಕೇತಿಸುತ್ತದೆ. ಬಹುಶಃ ರಾಜಕೀಯ ವ್ಯವಸ್ಥೆಯನ್ನು ನಿರ್ದಿಷ್ಠ ದಾರಿಗೆ ತರಲು ಮತ್ತು ಸ್ಪಷ್ಟವಾದ ಬದಲಾವಣೆಯನ್ನು ತರುವ ಅವರ ಉದ್ದೇಶವನ್ನು ಸೂಚಿಸುತ್ತದೆ. ಬರಿಗಾಲಿನ ಹೆಜ್ಜೆ ನಮ್ರತೆಯ ಸ್ಪರ್ಶವನ್ನು ಸೂಚಿಸುತ್ತದೆ. ಜನರಿಗೆ ಮತ್ತು ಅವರ ಹೋರಾಟಗಳಿಗೆ ಅವರ ನಿಕಟತೆಯನ್ನು ಒತ್ತಿಹೇಳುತ್ತದೆ.

ದೊಡ್ಡ ಉದ್ಯಮಿಗಳ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಅದೇ ರೀತಿ ರೈತರ 2 ರಿಂದ 3 ಲಕ್ಷ ಸಾಲ ಮನ್ನಾ ಮಾಡಿದರೆ ಸಹಕಾರಿಯಾಗುತ್ತದೆ. ನಾವು ರೈತರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಬಯಸುತ್ತೇವೆ. ಆದರೆ, ಪೊಲೀಸರು ಅವರನ್ನು ಭೇಟಿಯಾಗಲು ನಮಗೆ ಅವಕಾಶ ನೀಡುವುದಿಲ್ಲ. ಅಲ್ಲದೆ ನಮ್ಮನ್ನು ಅವರಿಂದ ದೂರ ನಿಲ್ಲಿಸುತ್ತಾರೆ ಎಂದರು.

2023ರಲ್ಲಿ ನವಲಗುಂದ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದೆ, ಆದರೆ, ಹಣಬಲದ ವಿರುದ್ಧ ಸೆಣಸಲಾಗದೆ ಸೋತಿದ್ದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 8 ಸಾವಿರ ಮತ ಪಡೆದಿದ್ದರು. ಈ ಬಾರಿ ಪೂರ್ಣ ಪ್ರಮಾಣದಲ್ಲಿ ಸ್ಪರ್ಧಿಸುತ್ತಿದ್ದೇನೆ. ರೈತರ ಬೆಂಬಲದಿಂದ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನಗೌಡ
ನಿರಾಶ್ರಿತ ಕನ್ನಡಿಗರಿಗೆ ಪುನರ್ವಸತಿ: ಗೋವಾ ಸಿಎಂ ಪ್ರಮೋದ್ ಸಾವಂತ್‌

28 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಟ್ಟಾಗಿ ಸೆಣಸಿದ್ದು, ಮೈತ್ರಿ ಛಿದ್ರವಾಗಿತ್ತು.

ಬಿಜೆಪಿ ದಾಖಲೆಯ 25 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಮಾತ್ರ ಗೆದ್ದಿವೆ. ಲೋಕಸಭೆ ಚುನಾವಣೆ 2024 ಏಪ್ರಿಲ್ 19ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com