ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ
ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ

'ಸರ್ಕಾರದ ಗ್ಯಾರಂಟಿ ಯೋಜನೆಗಳು ನನ್ನನ್ನು ಗೆಲುವಿನತ್ತ ಕೊಂಡೊಯ್ಯುತ್ತವೆ': ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ

Published on

ಕರ್ನಾಟಕ ಮಾತ್ರವಲ್ಲದೆ, ದೇಶದ ಐದು ದೊಡ್ಡ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದ್ದು, ಬಿಜೆಪಿಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್ ನ ಎಂವಿ ರಾಜೀವ್ ಗೌಡ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರು ಒಕ್ಕಲಿಗ ಅಭ್ಯರ್ಥಿಗಳ ನಡುವಿನ ಪೈಪೋಟಿ ಕುತೂಹಲ ಮೂಡಿಸಿದೆ,

ಚುನಾವಣೆ ಹಿನ್ನೆಲೆಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂವಿ ರಾಜೀವ್‌ ಗೌಡ ಅವರು ಮಾತನಾಡಿದ್ದು, ಆಯ್ದ ಭಾಗಗಳು ಇಂತಿವೆ...

Q

ಒಂದೆರಡು ವಾರಗಳ ಪ್ರಚಾರದ ನಂತರ, ನಿಮ್ಮ ಅಭಿಪ್ರಾಯವೇನು?

A

ಈ ಬಾರಿಯ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಗೆಲುವು ಸಾಧಿಸುತ್ತೇವೆ. ಸಚಿವರಾದ ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಸೇರಿದಂತೆ ಆರು ಪ್ರಬಲ ನಾಯಕರಿಂದ ವಿಶ್ವಾಸ ಹೆಚ್ಚಾಗಿದೆ. ಪುಲಿಕೇಶಿನಗರದಲ್ಲಿ ನಮಗೆ ಅದ್ಭುತ ಮುನ್ನಡೆ ಸಿಗಲಿದೆ. ಮಲ್ಲೇಶ್ವರಂನಲ್ಲಿ ನಡೆದ ರೋಡ್‌ಶೋಗಳಲ್ಲಿ ನಾನು ಕಂಡ ಪಕ್ಷದ ಕಾರ್ಯಕರ್ತರ ಉತ್ಸಾಹವು ನಂಬಲಾಗದು.

Q

ನೀವು ಕೇಂದ್ರ ಸಚಿವರ ವಿರುದ್ಧ ಕಣಕ್ಕಿಳಿದಿದ್ದೀರಿ...

A

ಶೋಭಕ್ಕ ಸಚಿವೆಯಾಗಿ ಛಾಪು ಮೂಡಿಸದ ಕಾರಣ ವ್ಯತ್ಯಾಸವೇನೂ ಇಲ್ಲ. ಅವರ ಕೊಡುಗೆಗಳ ಬಗ್ಗೆ ಹೇಳಿ. ಬರದಿಂದ ತತ್ತರಿಸಿರುವ ರೈತರ ಬಗ್ಗೆ ಅವರಿಗೆ ಕಾಳಜಿ ಇರಲಿಲ್ಲ. ತವರಿನವರ ಶಕ್ತಿ ಇಲ್ಲದ ಕಾರಮ ಹೊರಗಿನಿಂದ ಜನರನ್ನು ಕರೆತರುವ ಪರಿಪಾಠ ಬಿಜೆಪಿಗಿದೆ. ಗೋ ಬ್ಯಾಕ್ ಅಭಿಯಾನ ಆರಂಭವಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಶೋಭಾ ಅವರನ್ನು ಬೆಂಗಳೂರು ಉತ್ತರಕ್ಕೆ ಕರೆತರಲಾಗಿದೆ. ಬಿಜೆಪಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಲಘುವಾಗಿ ಪರಿಗಣಿಸಿ ಅಭ್ಯರ್ಥಿಯನ್ನು ಬದಲಿಸಿದೆ. ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ನನ್ನಂತಹ ಮಣ್ಣಿನ ಮಗನನ್ನು ಆಯ್ಕೆ ಮಾಡಿದೆ. ಇಲ್ಲಿ ನನಗೆ ಸಂಬಂಧಿಕರು ಮತ್ತು ಕುಟುಂಬ ಸದಸ್ಯರಿರುವುದರಿಂದ ಕ್ಷೇತ್ರದ ಮನೆ ಮಗನಾಗಿದ್ದೇನೆ. ಜನರು ನನಗೆ ತುಂಬಾ ಪ್ರೀತಿಯನ್ನು ನೀಡುತ್ತಾರೆ.

Q

ಮತಗಟ್ಟೆಗಳಲ್ಲಿ ಜಾತಿ ಮುಖ್ಯ, ನಿಮಗೆ ಏನನಿಸುತ್ತದೆ?

A

ಜನರು ಜಾತಿಯ ಆಧಾರದ ಮೇಲೆ ಮತ ಚಲಾಯಿಸುವುದರಿಂದ ಇದು ಮುಖ್ಯವಾಗಿದೆ. ಕಾಂಗ್ರೆಸ್‌ನಲ್ಲಿ ನಾವು ಆರ್ಥಿಕವಾಗಿ ಹಿಂದಿರುವ ಜನರ ಬಗ್ಗೆ ಚಿಂತಿಸುತ್ತೇವೆ. ಹೀಗಾಗಿ ನಾವು ಜಾತಿ ಎಂಬ ಕಾರ್ಡ್ ಇಟ್ಟುಕೊಂಡು ಆಟವಾಡುವುದಿಲ್ಲ. ಸಿದ್ದರಾಮಯ್ಯ ಅಹಿಂದದ ಮಾಸ್ ಲೀಡರ್ ಆಗಿದ್ದರೆ. ಡಿಕೆ ಶಿವಕುಮಾರ್ ಒಕ್ಕಲಿಗರ ನಾಯಕರಾಗಿದ್ದಾರೆ.

Q

ಬಿಜೆಪಿಯ ಆಂತರಿಕ ಕಚ್ಚಾಟ ನಿಮಗೆ ಸಹಾಯ ಮಾಡುತ್ತದೆಯೇ?

A

ಖಂಡಿತವಾಗಿಯೂ ಹೌದು. ಇದು ಒಂದು ರೀತಿ ನನಗೆ ಆಶೀರ್ವಾದವಾಗಿದೆ. ನಾನು ಪ್ರಮಾಣಿತ ರಾಜಕೀಯ ಚಟುವಟಿಕೆಯ ಮೂಲಕ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಅಭಿವೃದ್ದಿಯ ಬಗ್ಗೆ ಕಾಳಜಿ ಇರುವ ಸರಿಯಾದ ಮತದಾರ ನನಗೆ ಮತ ಹಾಕುತ್ತಾನೆ.

Q

ಬಿಜೆಪಿ ಒಂದು ಸುಸಜ್ಜಿತ ಸಂಘಟನೆಯಾಗಿದ್ದು ಅದನ್ನು ಮುರಿಯುವುದು ಕಷ್ಟ...

A

ಇದನ್ನು ಒಪ್ಪುತ್ತೇನೆ. ಬೂತ್ ಮಟ್ಟದಲ್ಲಿ ನಿಜವಾದ ಪ್ರಯತ್ನ ನಡೆಯಬೇಕು. ನಾವು ಅದನ್ನು ಖಚಿತಪಡಿಸಿಕೊಳ್ಳಬೇಕು.

Q

ಗ್ಯಾರಂಟಿ ಯೋಜನೆಗಳು ನಿಮಗೆ ಸಹಾಯ ಮಾಡುತ್ತವೆಯೇ?

A

ಮಹಿಳೆಯರಿಗೆ ದೊಡ್ಡ ಮಟ್ಟದಲ್ಲಿ ಸಬಲೀಕರಣ ನೀಡಿದ ಪಕ್ಷ ನಮ್ಮದು, ಇದೀಗ ಎಐಸಿಸಿ ಪ್ರಣಾಳಿಕೆಯಲ್ಲಿ ‘ಮಹಾಲಕ್ಷ್ಮಿ’ ಯೋಜನೆ ಮೂಲಕ ಪ್ರತಿ ಮಹಿಳೆಗೆ 1 ಲಕ್ಷ ರೂ ನೀಡುವ ಭರವಸೆ ನೀಡಲಾಗಿದೆ. ಬೆಲೆ ಏರಿಕೆ ಮತ್ತು ನಿರುದ್ಯೋಗವನ್ನು ತಡೆಯುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ವಿಫಲವಾದ ಕಾರಣ ನಾವು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದೇವೆ. ನನ್ನ ಪ್ರತಿಸ್ಪರ್ಧಿ ಮಹಿಳೆಯಾಗಿದ್ದು, ಚುನಾವಣೆಯಲ್ಲಿ ಬಹುಪಪಾಲು ಮಹಿಳೆಯರು ಅವರಿಗೆ ಬದಲು ನನಗೆ ಮತಹಾಕುತ್ತಾರೆಂಬುದೇ ಕುತೂಹಲಕಾರಿ ವಿಚಾರವಾಗಿದೆ.

Q

ಶೋಭಾ ಕರಂದ್ಲಾಜೆ ಇಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದೀರಾ?

A

ಇಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಅಫಿಡವಿಟ್‌ನಲ್ಲಿ ಉಲ್ಲೇಖಿಸಿದಂತೆ ನಾನು ಜನರ ಮುಂದೆ ಸತ್ಯವನ್ನು ಹೇಳಿದ್ದೇನೆ.

Q

ಬೆಂಗಳೂರಿಗೆ ನಿಮ್ಮ ಭರವಸೆಗಳೇನು?

A

ಸಂಚಾರವನ್ನು ಪರಿಶೀಲಿಸಲು ಉತ್ತಮ ಸಾರಿಗೆ. ಕುಡಿಯುವ ನೀರು, ಉತ್ತಮ ಆರೋಗ್ಯ, ಶಿಕ್ಷಣ ವ್ಯವಸ್ಥೆ ಒದಗಿಸುವುದು.ಸುಸ್ಥಿರ ಮತ್ತು ಅಂತರ್ಗತ ರೀತಿಯಲ್ಲಿ ನಗರದ ಬೆಳವಣಿಗೆಯನ್ನು ಪೋಷಿಸಲು ನಾವು ಹೊಸ ಮಾದರಿಯನ್ನು ತರುವುದು.

Q

ರಾಮ ಮಂದಿರದ ಶಂಕುಸ್ಥಾಪನೆ ಬಿಜೆಪಿಗೆ ನೆರವಾಗಲಿದೆಯೇ?

A

ಆ ಕ್ಷಣ ಬಂದು ಹೋಯಿತು. ಅವರು ಅಪೂರ್ಣ ದೇವಾಲಯವನ್ನು ಉದ್ಘಾಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com