Actor Pratham Questions Prakash raj
ಮೃತ ನೇಹಾ ಮನೆಯಲ್ಲಿ ನಟ ಪ್ರಥಮ್

ರಾಜ್ಯದ ಮಗಳು ಮೃತಪಟ್ಟಿದ್ದಾರೆ.. ಈ ಬಗ್ಗೆ ನೀವು ಇನ್ನೂ ಮೌನವಹಿಸಿದ್ದೇರೇಕೆ?; ಪ್ರಕಾಶ್ ರೈ, ಚೇತನ್ ಅಹಿಂಸಾಗೆ ನಟ ಪ್ರಥಮ್ ಪ್ರಶ್ನೆ?

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ಪ್ರಥಮ್, ಈ ವಿಚಾರದಲ್ಲಿ ನಟ ಪ್ರಕಾಶ್ ರೈ ಮತ್ತು ಚೇತನ್ ಅಹಿಂಸಾ ಮೌನಕ್ಕೆ ಶರಣಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
Published on

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ಪ್ರಥಮ್, ಈ ವಿಚಾರದಲ್ಲಿ ನಟ ಪ್ರಕಾಶ್ ರೈ ಮತ್ತು ಚೇತನ್ ಅಹಿಂಸಾ ಮೌನಕ್ಕೆ ಶರಣಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ (Neha Hiremath) ಹತ್ಯೆ ಪ್ರಕರಣ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇದೀಗ ಹುಬ್ಬಳ್ಳಿಯ ನೇಹಾ ಮನೆಗೆ ‘ಬಿಗ್ ಬಾಸ್’ ಸೀಸನ್‌ 4ರ (Bigg Boss Kannada 4) ವಿನ್ನರ್ ಪ್ರಥಮ್ (Pratham) ಭೇಟಿ ನೀಡಿ ಸಂತೈಸಿದ್ದಾರೆ.

Actor Pratham Questions Prakash raj
ನೇಹಾ ಹತ್ಯೆ ಪ್ರಕರಣ: ಲವ್ ಜಿಹಾದ್ ಪ್ರಕರಣದಂತೆ ಕಾಣುತ್ತಿದೆ, ಅಪರಾಧಿ ರಕ್ಷಣೆಗೆ ಸಿಎಂ ಯತ್ನ ಆರೋಪ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ (Neha Hiremath) ಹತ್ಯೆ ಪ್ರಕರಣ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇದೀಗ ಹುಬ್ಬಳ್ಳಿಯ ನೇಹಾ ಮನೆಗೆ ‘ಬಿಗ್ ಬಾಸ್’ ಸೀಸನ್‌ 4ರ (Bigg Boss Kannada 4) ವಿನ್ನರ್ ಪ್ರಥಮ್ (Pratham) ಭೇಟಿ ನೀಡಿ ಸಂತೈಸಿದ್ದಾರೆ.

ಈ ವೇಳೆ ನೇಹಾ ಮತ್ತು ಫಯಾಜ್ ಫೋಟೋ ಹಾಕಿ ಜಸ್ಟಿಸ್ ಫಾರ್ ಲವ್ ಅಡಿಬರಹ ನೀಡಿದ್ದ ವೈರಲ್ ವಿಡಿಯೋ ಬಗ್ಗೆ ಮಾತನಾಡಿದ ಪ್ರಥಮ್, 'ನೇಹಾ ಹತ್ಯೆ ಮಾಡಿರುವನಿಗೆ ಕಠಿಣ ಶಿಕ್ಷೆಯಾಗಬೇಕು. ನ್ಯಾಯ ಸಿಗಬೇಕಾಗಿರೋದು ನೇಹಾ ಕುಟುಂಬಕ್ಕೆ. ಜಸ್ಟಿಸ್ ಫಾರ್ ಲವ್ ಅಂದರೆ ಏನು ಅವರಿಗೆ ಭಾರತ ರತ್ನ ಕೊಡಬೇಕಾ ಎಂದು ಕಿಡಿಕಾರಿದರು.

ಪ್ರಕಾಶ್ ರೈ, ಚೇತನ್ ಅಹಿಂಸಾ ವಿರುದ್ಧ ಕಿಡಿ

ಎಲ್ಲದಕ್ಕೂ ನರೇಂದ್ರ ಮೋದಿ ಅವರನ್ನೇ ಪ್ರಶ್ನೆ ಮಾಡುತ್ತೀರಾ? ಈಗ ಇಲ್ಲಿ ರಾಜ್ಯದ ಮಗಳು ನೇಹಾ ಮೃತಪಟ್ಟಿದ್ದಾರೆ. ಯಾಕೆ ನೀವು ಧ್ವನಿ ಎತ್ತುತ್ತಿಲ್ಲ. ಬರೀ ಹೆಸರಿನಲ್ಲಿ ಅಹಿಂಸಾ ಅಂತ ಇಟ್ಟುಕೊಂಡರೆ ಆಗಲ್ಲ. ಇಂತಹ ಘಟನೆ ಆದಾಗ ಖಂಡಿಸಿಬೇಕು ಎಂದು ಚೇತನ್‌ಗೆ ಪ್ರಥಮ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೊದಲು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡೋದು ಬಿಡಿ ಎಂದು ಪ್ರಕಾಶ್ ರಾಜ್ (Prakash Raj) ಮತ್ತು ಚೇತನ್‌ಗೆ ಪ್ರಥಮ್ ಪ್ರಶ್ನೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com