ಅಣ್ಣಾಮಲೈ ತಮ್ಮ ವೃತ್ತಿ ಬದುಕು ರೂಪಿಸಿಕೊಂಡಿದ್ದು, ಕರ್ನಾಟಕದಲ್ಲಾ, ಪಾಕಿಸ್ತಾನದಲ್ಲಾ? ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕರ್ನಾಟಕದ ಮಹಿಳೆಯರನ್ನು ದಾರಿ ತಪ್ಪಿದವರು ಎಂದಾಯ್ತು, ಕನ್ನಡಿಗರನ್ನು ಕುಡುಕರು ಎಂದಾಯ್ತು, ಈಗ ಕನ್ನಡಿಗರು ಪಾಕಿಸ್ತಾನಿಗಳಂತೆ.
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕರ್ನಾಟಕ ಪಾಕಿಸ್ತಾನದ ರೀತಿಯಂತೆ. ಬಿಜೆಪಿ ಹಾಗೂ ಅದರ ಮಿತ್ರರು ಕನ್ನಡಿಗರಿಗೆ ಇನ್ನೆಷ್ಟು ಅವಮಾನ ಮಾಡಲು ಯೋಜಿಸಿದ್ದಾರೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ತಮಿಳು ನಾಡು ಬಿಜೆಪಿ ಮುಖಂಡ ಅಣ್ಣಾ ಮಲೈ ವಿರುದ್ಧ ಹರಿಹಾಯ್ದಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಮಹಿಳೆಯರನ್ನು ದಾರಿ ತಪ್ಪಿದವರು ಎಂದಾಯ್ತು, ಕನ್ನಡಿಗರನ್ನು ಕುಡುಕರು ಎಂದಾಯ್ತು, ಈಗ ಕನ್ನಡಿಗರು ಪಾಕಿಸ್ತಾನಿಗಳಂತೆ. ಕನ್ನಡಿಗರು ಹಾಗೂ ಕರ್ನಾಟಕವನ್ನು ಅವಮಾನಿಸುವುದು ಬಿಜೆಪಿಗೆ ಸುಲಭದ ಚಟವಾಗಿದೆ ಕಿಡಿ ಕಾರಿದ್ದಾರೆ.

ಬಿಜೆಪಿಯ ಅಣ್ಣಾಮಲೈ ಅವರು ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿ ಘೋರ ಅವಮಾನ ಮಾಡಿದ್ದಾರೆ, ಅಣ್ಣಾಮಲೈ ತಮ್ಮ ವೃತ್ತಿ ಬದುಕನ್ನು ರೂಪಿಸಿಕೊಂಡಿದ್ದು ಕರ್ನಾಟಕದಲ್ಲಾ, ಪಾಕಿಸ್ತಾನದಲ್ಲಾ? ಅನ್ನ ತಿಂದು, ನೀರು ಕುಡಿದು, ಸಂಬಳ ಪಡೆದು ಬದುಕಿದ್ದು ಕರ್ನಾಟಕದಲ್ಲಾ, ಪಾಕಿಸ್ತಾನದಲ್ಲಾ? ಈ ಅಣ್ಣಾಮಲೈ ತನ್ನ ಬದುಕಿನಲ್ಲಿ ಐಡೆಂಟಿಟಿ ಪಡೆದದ್ದು ಕರ್ನಾಟಕದಲ್ಲಾ ಪಾಕಿಸ್ತಾನದಲ್ಲಾ ಎಂದು ರಾಜ್ಯ ಬಿಜೆಪಿ ನಾಯಕರು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಿಯಾಂಕ್ ಖರ್ಗೆ
ಲೋಕಸಭೆ ಚುನಾವಣೆ: ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಕನ್ನಡಿಗರು ಬೆವರು ಸುರಿಸಿ ಕಟ್ಟಿದ ತೆರಿಗೆಯ ಹಕ್ಕನ್ನು ಕೇಂದ್ರದಿಂದ ಕೇಳುತ್ತಿದ್ದಾರೆಯೇ ಹೊರತು ಬಿಕ್ಷೆಯನ್ನಲ್ಲ, ಕರ್ನಾಟಕ ತೆರಿಗೆ ಸಂಗ್ರಹದಲ್ಲಿ 2ನೇ ಅತಿ ದೊಡ್ಡ ರಾಜ್ಯ. ಕನ್ನಡಿಗರ ಬೆವರಿನ ಹಣದಲ್ಲಿ ಕೇಂದ್ರ ಸರ್ಕಾರ ನಡೆಯುತ್ತಿದೆಯೇ ಹೊರತು ಒಕ್ಕೂಟ ಸರ್ಕಾರದ ಬಿಕ್ಷೆಯಲ್ಲಿ ಕನ್ನಡಿಗರು ಬದುಕುತ್ತಿಲ್ಲ.

ತಮ್ಮ ಹಕ್ಕನ್ನು ಕೇಳುವ ಕನ್ನಡಿಗರನ್ನು ಪಾಕಿಸ್ತಾನಕ್ಕೆ ಹೋಲಿಸುವ ಬಿಜೆಪಿಯನ್ನು ಕನ್ನಡಿಗರು ತಿರಸ್ಕರಿಸುವುದು ನಿಶ್ಚಿತ, ಇಲ್ಲಿ ತಿರಸ್ಕಾರಗೊಂಡವರು ತಮ್ಮ ಪ್ರೀತಿಯ ಪಾಕಿಸ್ತಾನಕ್ಕೆ ಹೋಗಿ ರಾಜಕಾರಣ ಮಾಡಲಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com